Home Jobs Government Job: ಭಾರತದಲ್ಲಿ ಈ ಸರ್ಕಾರಿ ಹುದ್ದೆಗಳಿಗೆ ಅತೀ ಹೆಚ್ಚು ಸಂಬಳ ಸಿಗುತ್ತದೆ! ಫುಲ್...

Government Job: ಭಾರತದಲ್ಲಿ ಈ ಸರ್ಕಾರಿ ಹುದ್ದೆಗಳಿಗೆ ಅತೀ ಹೆಚ್ಚು ಸಂಬಳ ಸಿಗುತ್ತದೆ! ಫುಲ್ ಡಿಟೇಲ್ಸ್ ಇಲ್ಲಿದೆ

Government Job
image source: AMCAT. Com

Hindu neighbor gifts plot of land

Hindu neighbour gifts land to Muslim journalist

Government Job: ಸರ್ಕಾರಿ ಉದ್ಯೋಗ (Government Job) ಎಂದರೆ ಭದ್ರತೆ ಇರುತ್ತೆ ಮತ್ತು ಕೈ ತುಂಬಾ ಸಂಬಳ ಸಿಗುತ್ತೆ. ಉತ್ತಮ ಜೀವನ ನಡೆಸುವುದಕ್ಕೆ ಸುಲಭ ಅನ್ನುವುದು ಬಹುತೇಕರ ಅಭಿಪ್ರಾಯ. ಮತ್ತು ಸರ್ಕಾರಿ ಉದ್ಯೋಗದ ಕನಸು ಸಹ ಕಾಣುತ್ತಾರೆ.

ಹೌದು, ಭಾರತದ ಖಾಸಗಿ ಕಂಪನಿಗಳಲ್ಲಿ ಲಕ್ಷ ಲಕ್ಷ ಸಂಬಳದ ಕೆಲಸಗಳಿದ್ದರೂ, ಜನ ಇಂದಿಗೂ ಸರ್ಕಾರಿ ಉದ್ಯೋಗಕ್ಕೇ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಲಕ್ಷಾಂತರ ಯುವ ಜನತೆ ಸಹ ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುತ್ತಾರೆ. ಹಾಗಾದರೆ ಅತಿ ಹೆಚ್ಚು ಸಂಬಳ ಪಡೆಯುವ ಸರ್ಕಾರಿ ಹುದ್ದೆಗಳು ಯಾವುವು ಎಂಬುದು ಬನ್ನಿ ನೋಡೋಣ.

IAS ಮತ್ತು IPS ಹುದ್ದೆ ಅತಿ ಹೆಚ್ಚು ಸಂಬಳ ಪಡೆಯುವ ಸರ್ಕಾರಿ ಕೆಲಸದ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಉಳಿದುಕೊಳ್ಳಲು ಸರ್ಕಾರಿ ಮನೆಗಳು ಮತ್ತು ಪ್ರಯಾಣಿಸಲು ಕಾರುಗಳನ್ನು ನೀಡಲಾಗುತ್ತದೆ. ಅಧಿಕಾರಿಗಳು ತಿಂಗಳಿಗೆ 56 ಸಾವಿರ ಮೂಲ ವೇತನ ಪಡೆಯುತ್ತಾರೆ.

ISRO, DRDO ವಿಜ್ಞಾನಿ/ಎಂಜಿನಿಯರ್ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ವಸತಿ ಸಿಗುತ್ತದೆ. ವಿಜ್ಞಾನಿ ಹುದ್ದೆಯಲ್ಲಿರುವ ವ್ಯಕ್ತಿ ಮಾಸಿಕ 60 ಸಾವಿರ ರೂಪಾಯಿ ವೇತನ ಪಡೆಯುತ್ತಾರೆ.

ಆರ್ ಬಿಐ ಗ್ರೇಡ್ ಬಿ ಬ್ಯಾಂಕಿಂಗ್ ಅತಿ ಹೆಚ್ಚು ಸಂಬಳ ಪಡೆಯುವ ಕೆಲಸವಾಗಿದೆ. ಈ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಮಾಸಿಕ 67 ಸಾವಿರ ರೂ. ವೇತನ ಪಡೆಯುತ್ತಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಸಹಾಯಕ ವಿಭಾಗ ಅಧಿಕಾರಿಯಾಗಿ (ASO) ಕೆಲಸ ಪಡೆಯಲು, ಅಭ್ಯರ್ಥಿಯು SSC CGL ಪರೀಕ್ಷೆಯನ್ನು ಭೇದಿಸಬೇಕಾಗುತ್ತದೆ. ಇವರು 40 ಸಾವಿರ ಸಂಬಳ ಪಡೆಯುತ್ತಾರೆ.

ಅತೀ ಹೆಚ್ಚು ಸಂಬಳ ನೀಡುವ ಮತ್ತು ಗೌರವಾನ್ವಿತ ಹುದ್ದೆಗಳ ಪೈಕಿ ಉಪನ್ಯಾಸಕ ಹುದ್ದೆಯು ಒಂದು. ಉಪನ್ಯಾಸಕ ಹುದ್ದೆಗಳಿಗೆ ರೂ.40,000 ದಿಂದ 1,00,000 ದವರೆಗೂ ವೇತನ ನೀಡಲಾಗುತ್ತದೆ.

ಭಾರತೀಯ ಅರಣ್ಯ ಅಧಿಕಾರಿಗಳು ಅರಣ್ಯದಲ್ಲಿ ಕೆಲಸ ಮಾಡುತ್ತಾರೆ. ಅವರು ವನ್ಯಜೀವಿ ಮತ್ತು ಪರಿಸರವನ್ನು ರಕ್ಷಿಸುತ್ತಾರೆ. 60 ಸಾವಿರ ರೂಪಾಯಿ ಸಂಬಳ ಪಡೆಯುತ್ತಾರೆ.

ರಕ್ಷಣಾ ಸೇವೆಗಳಾದ ನೌಕಾಪಡೆ, ಸೇನೆ ಮತ್ತು ವಾಯುಪಡೆಯಲ್ಲಿ ಉತ್ತಮ ಸಂಬಳ ಜೊತೆಗೆ ವೈದ್ಯಕೀಯ ಸೌಲಭ್ಯಗಳು, ಸರ್ಕಾರಿ ವಸತಿ ಮತ್ತು ಸಾರಿಗೆ ವೆಚ್ಚಗಳಂತಹ ಪ್ರಯೋಜನಗಳನ್ನು ಒದಗಿಸಲಾಗುತ್ತದೆ. ಪ್ರೌಢಶಿಕ್ಷಣ ಮುಗಿಸಿದ ನಂತರ ಅಥವಾ ಪದವಿ ಶಿಕ್ಷಣ ಮುಗಿಸಿದ ನಂತರ ಯಾವಾಗ ಬೇಕಾದರೂ ಈ ಸೇವೆಗೆ ಸೇರಬಹುದು. ರಕ್ಷಣಾ ಇಲಾಖೆಯ ಹುದ್ದೆಗಳಿಗೆ ಆರಂಭಿಕ ವೇತನ ರೂ. 60,000 ದಿಂದ ಇರುತ್ತದೆ.

ಮುಖ್ಯವಾಗಿ ಮೇಲಿನ ಸರ್ಕಾರಿ ಹುದ್ದೆಗಳಿಗೆ ನೀಡಲಾದ ವೇತನ ಮಾಹಿತಿಯೂ ಆರಂಭಿಕ ವೇತನವಾಗಿದೆ. ಅದೇ ಹುದ್ದೆಗಳಲ್ಲಿ ಮುಂದುವರೆಯುವವರು ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಸಂಬಳ ಪಡೆಯುತ್ತಾರೆ . ಅಲ್ಲದೆ, ಆ ಹುದ್ದೆಯಿಂದ ಮತ್ತೊಂದು ಉನ್ನತ ಹುದ್ದೆಗೆ ಭಡ್ತಿ ಸಹ ಪಡೆಯುತ್ತಾರೆ.