Home Jobs NIRDPR Young Fellow Recruitment 2023: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಹುದ್ದೆಗಳ ನೇಮಕ!...

NIRDPR Young Fellow Recruitment 2023: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಹುದ್ದೆಗಳ ನೇಮಕ! ಈ ಕೂಡಲೇ ಅರ್ಜಿ ಸಲ್ಲಿಸಿ, ತಡಮಾಡಬೇಡಿ!!

NIRDPR Young Fellow Recruitment 2023
Image source: studybizz.com

Hindu neighbor gifts plot of land

Hindu neighbour gifts land to Muslim journalist

NIRDPR Young Fellow Recruitment 2023: ಇಂದಿನ ಕಾಲದಲ್ಲಿ ನೆಚ್ಚಿನ ಉದ್ಯೋಗ ಗಿಟ್ಟಿಸಿಕೊಳ್ಳುವುದೇ ದೊಡ್ದ ಸವಾಲಾಗಿ ಪರಿಣಮಿಸಿದೆ. ಪೈಪೋಟಿಯ ಜೊತೆಗೆ ಸ್ಪರ್ಧಾತ್ಮಕ ಯುಗದಲ್ಲಿ ಒಂದು ನೌಕರಿ ಪಡೆಯೋದೆ ದೊಡ್ಡ ಹರಸಾಹಸ. ಇದೀಗ, ಉದ್ಯೋಗ ಅವಕಾಶಗಳನ್ನು ಎದುರು ನೋಡುತ್ತಿರುವ ಆಕಾಂಕ್ಷಿಗಳಿಗೆನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರೂರಲ್ ಡೆವಲಪ್ಮೆಂಟ್ ಅಂಡ್ ಪಂಚಾಯತ್ ರಾಜ್ (NIRDPR) ಯಂಗ್ ಫೆಲೊ ಪೋಸ್ಟ್ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಅರ್ಜಿ ಆಹ್ವಾನ ಮಾಡಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ರಾಷ್ಟ್ರೀಯ ಸಂಸ್ಥೆಯು ಹೈದೆರಾಬಾದ್, ರಾಷ್ಟ್ರೀಕೃತ ಆಟೋನಾಮಸ್ ಸಂಸ್ಥೆಯಾಗಿದ್ದು, ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿದೆ. ಸದ್ಯ, ಖಾಲಿಯಿರುವ ಯಂಗ್ ಫೆಲೊ ಹುದ್ದೆಗಳನ್ನು( NIRDPR Young Fellow Recruitment 2023)ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು, ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ.ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಮಾಹಿತಿ, ವೇತನ, ಆಯ್ಕೆ ಪ್ರಕ್ರಿಯೆ ಮೊದಲಾದ ಮಾಹಿತಿ ತಿಳಿದಿರುವುದು ಅವಶ್ಯಕ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಹುದ್ದೆಯ ವಿವರ
ಹುದ್ದೆ ಹೆಸರು : ಯಂಗ್ ಫೆಲೊ
ನೇಮಕಾತಿ ಮಾದರಿ : ಗುತ್ತಿಗೆ ಆಧಾರಿತ
ಹುದ್ದೆಗಳ ಸಂಖ್ಯೆ : 141
ಸಂಭಾವನೆ: ರೂ.35,000 ಮಾಸಿಕ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 26-04-2023 ಆರಂಭಿಕ ದಿನವಾಗಿದ್ದು, 08-05-2023 ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ:
ಎನ್ಐಆರ್ಡಿಪಿಆರ್ ವೆಬ್ಸೈಟ್ NIRDPR Website ಲಿಂಕ್ ಕ್ಲಿಕ್ ಮಾಡಿಕೊಂಡಾಗ ತೆರೆದುಕೊಳ್ಳುವ ಪೇಜ್ನಲ್ಲಿ ನೀಡಲಾದ ಸೂಚನೆಗಳನ್ನು ಓದಿಕೊಂಡು ‘Continue’ ಮೇಲೆ ಕ್ಲಿಕ್ ಮಾಡಬೇಕು. ಆ ಬಳಿಕ ಇಲಾಖೆಯ ವೆಬ್ ಪೇಜ್ ತೆರೆದುಕೊಂಡಾಗ ಅವಶ್ಯಕ ಮಾಹಿತಿಗಳನ್ನು ಟೈಪ್ ಮಾಡಿ ಅರ್ಜಿ ಪೂರ್ಣಗೊಳಿಸಬೇಕು.ಈ ಕುರಿತ ಹೆಚ್ಚಿನ ಮಾಹಿತಿ ಪಡೆಯಲು ವೆಬ್ಸೈಟ್: http://career.nirdpr.in/ ಬೇಟಿ ನೀಡಬಹುದು.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ / ಪಿಜಿ ಡಿಪ್ಲೊಮ ಅನ್ನು ಸಮಾಜ ವಿಜ್ಞಾನ ವಿಷಯಗಳಲ್ಲಿ ವ್ಯಾಸಂಗ ಮಾಡಿದ್ದು, ಕನಿಷ್ಠ ಶೇಕಡ.60 ಅಂಕಗಳೊಂದಿಗೆ ಪಾಸ್ ಆಗಿರಬೇಕು. ಇದರ ಜೊತೆಗೆ, ಸಂವಹನಕ್ಕಾಗಿ ಇಂಗ್ಲಿಷ್ ಓದುವ ಬರೆಯುವ ಕೌಶಲ್ಯವಿರಬೇಕು. ಆನ್ಲೈನ್ ಟ್ರೈನಿಂಗ್, ರಿಪೋರ್ಟಿಂಗ್, ಎಂಎಸ್ ಆಫೀಸರ್ ಬಳಕೆಯ ಸಾಫ್ಟ್ ಸ್ಕಿಲ್ಗಳು ತಿಳಿದಿರಬೇಕಾಗಿದ್ದು, ಹಿಂದಿ ಓದಲು ಮತ್ತು ಮಾತನಾಡಲು ತಿಳಿದಿರಬೇಕಾಗುತ್ತದೆ.

ಭಾರತ ಸರ್ಕಾರಿ ನಿಯಮಗಳ ಅನುಸಾರ, ದಿನಾಂಕ 01-04-2023ಕ್ಕೆ ಗರಿಷ್ಠ ವಯೋಮಿತಿ 35 ಮೀರಿರಬಾರದು. ಇದರ ಜೊತೆಗೆ ಮೀಸಲಾತಿ ಕೆಟಗರಿಗಳಿಗೆ ಅನುಸಾರ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರ ಶೈಕ್ಷಣಿಕ ದಾಖಲೆ, ಅನುಭವ, ಅಂಕಗಳು, ಸಾಫ್ಟ್ ಸ್ಕಿಲ್ಗಳೆಲ್ಲವನ್ನು ಆಧರಿಸಿ ಭಾರತದಾದ್ಯಂತ ವಿವಿಧ ಪ್ರದೇಶಗಳಿಗೆ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ಇದನ್ನೂ ಓದಿ: SSLC Result 2023: ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಚೆಕ್‌ ಮಾಡುವುದು ಹೇಗೆ? ಇಲ್ಲಿದೆ ವಿವರ