Home Jobs Karnataka Government Upcoming Jobs 2023: ಸರಕಾರಿ ಉದ್ಯೋಗಾಕಾಂಕ್ಷಿಗಳೇ ಇತ್ತ ಗಮನಿಸಿ!​ ಮುಂಬರುವ ದಿನಗಳಲ್ಲಿ ಪ್ರಕಟವಾಗಲಿರುವ...

Karnataka Government Upcoming Jobs 2023: ಸರಕಾರಿ ಉದ್ಯೋಗಾಕಾಂಕ್ಷಿಗಳೇ ಇತ್ತ ಗಮನಿಸಿ!​ ಮುಂಬರುವ ದಿನಗಳಲ್ಲಿ ಪ್ರಕಟವಾಗಲಿರುವ ಕರ್ನಾಟಕ ಸರ್ಕಾರಿ ಹುದ್ದೆಗಳ ಲಿಸ್ಟ್‌ ಇಲ್ಲಿದೆ!

Karnataka Government Upcoming Jobs
Source: Daily recruitment

Hindu neighbor gifts plot of land

Hindu neighbour gifts land to Muslim journalist

Karnataka Government Upcoming Jobs: ಸರಕಾರಿ ಉದ್ಯೋಗಾಕಾಂಕ್ಷಿಗಳೇ ಇತ್ತ ಗಮನಿಸಿ. ಮುಂಬರುವ ದಿನಗಳಲ್ಲಿ ಪ್ರಕಟವಾಗಲಿರುವ ಕರ್ನಾಟಕ ಸರ್ಕಾರಿ ಹುದ್ದೆಗಳ (Karnataka Government Upcoming Jobs ) ಲಿಸ್ಟ್‌ ಇಲ್ಲಿದೆ!. ಕರ್ನಾಟಕ ರಾಜ್ಯ ಸರ್ಕಾರ ಕೆಲವು ಹುದ್ದೆಗಳಿಗೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಮೊದಲೇ ಅನುಮೋದನೆ ಪಡೆದಿದ್ದು, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಮಂಡಳಿ, ನಿಗಮ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆಯಾಗಲಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಕೆಳಗಿನ ಎಲ್ಲ ಅಧಿಸೂಚನೆಗಳಲ್ಲಿ ಪೊಲೀಸ್ ಇಲಾಖೆ ಹುದ್ದೆಗಳು ಹೊರತುಪಡಿಸಿ, ಇತರೆ ಎಲ್ಲ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶೀಘ್ರವೇ ಅಧಿಸೂಚನೆ ಹೊರಡಿಸಲಿದೆ. ನಿಗಮ ಹಾಗೂ ಮಂಡಳಿಗಳಿಗೆ ಈಗಾಗಲೇ ಶಾರ್ಟ್‌ ನೋಟಿಫಿಕೇಶನ್‌ ಬಿಡುಗಡೆಯಾಗಿದೆ. ಆದರೆ ಅರ್ಜಿ ಸ್ವೀಕಾರ ಪ್ರಕ್ರಿಯೆ ತಂತ್ರಾಂಶ ಅಭಿವೃದ್ಧಿ ತಡವಾದ ಕಾರಣ ಡೀಟೇಲ್ಡ್‌ ಅಧಿಸೂಚನೆ ತಡೆಹಿಡಿಯಲಾಗಿದೆ. ಯಾವೆಲ್ಲಾ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆಯಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ.

ರಾಜ್ಯ ಪೊಲೀಸ್ ಇಲಾಖೆ ಹುದ್ದೆಗಳು:-
ಕರ್ನಾಟಕ ಕೆಎಸ್ಐಎಸ್‌ಎಫ್‌ ಅಥವಾ ರಾಜ್ಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಖಾಲಿ ಇರುವ ಸಬ್‌ಇನ್ಸ್‌ಪೆಕ್ಟರ್‌ ಹಾಗೂ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಶೀಘ್ರದಲ್ಲೇ ಅಧಿಸೂಚನೆ ಬಿಡುಗಡೆಯಾಗಲಿದೆ. ಒಟ್ಟು 1000 ಹುದ್ದೆಗಳಿಗೆ ಅಧಿಸೂಚನೆ ಹೊರಬೀಳಲಿದೆ.

ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್ ಲಿಮಿಟೆಡ್ ಪೋಸ್ಟ್‌ಗಳಿಗೆ ನೋಟಿಫಿಕೇಶನ್‌:-
ಹುದ್ದೆಯ‌ ವಿವರ:
ಸಹಾಯಕ ವ್ಯವಸ್ಥಾಪಕರು- 23,
ಮೇಲ್ವಿಚಾರಕರು- 23,
ಗುಮಾಸ್ತರು -13,
ಪದವೀಧರ ಗುಮಾಸ್ತರು- 6,
ಮಾರಾಟ ಪ್ರತಿನಿಧಿ / ಪ್ರೋಗ್ರಾಮ್ – 6

ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಇತರೆ ಹುದ್ದೆಗಳಿಗೆ ಅಧಿಸೂಚನೆ:-
ಹುದ್ದೆಯ ವಿವರ:
ಪಂಚಾಯತ್ ರಾಜ್‌ ಇಲಾಖೆಯಡಿಯಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)-326
ಪಂಚಾಯಿತಿ ಕಾರ್ಯದರ್ಶಿ ಗ್ರೇಡ್‌-1- 487
ಪಂಚಾಯ್ತಿ ಕಾರ್ಯದರ್ಶಿ ಗ್ರೇಡ್‌ 2- 343
ಎಸ್‌ಡಿಎ -124 ಹುದ್ದೆ
ಈ ಮೇಲಿನ ಹುದ್ದೆಗಳಿಗೆ ನೇಮಕಾತಿ ವಿಧಾನ ನಿಗಧಿಪಡಿಸಿ 29-03-2023 ರಂದು ಅಧಿಕೃತ ಆದೇಶ ಹೊರಡಿಸಿದೆ. ಚುನಾವಣೆಯ ನಂತರ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ.

ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಹುದ್ದೆಗಳಿಗೆ ಅಧಿಸೂಚನೆ:-
ಹುದ್ದೆಯ‌ ವಿವರ:
ನಿಗಮದ ಕಿರಿಯ ಸಹಾಯಕರು- 263,
ಹಿರಿಯ ಸಹಾಯಕರು- 57
ಹಿರಿಯ ಸಹಾಯಕರು (ಲೆಕ್ಕ)-33,
ಗುಣಮಟ್ಟ ನಿರೀಕ್ಷಕರು-23,
ಸಹಾಯಕ ವ್ಯವಸ್ಥಾಪಕರು -10

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ’ದ ಹುದ್ದೆಗಳಿಗೆ ಅಧಿಸೂಚನೆ:-
ಹುದ್ದೆಯ‌ ವಿವರ:
ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ)- 4,
ಸಹಾಯಕರು (ತಾಂತ್ರಿಕ) ಗ್ರೂಪ್‌ ಸಿ- 6,
ಸಹಾಯಕರು (ತಾಂತ್ರಕೇತರ) – 6
ಸಹಾಯಕ ವ್ಯವಸ್ಥಾಪಕರು (ತಾಂತ್ರಿಕೇತರ)- 2,
ಹಿರಿಯ ಸಹಾಯಕರು (ತಾಂತ್ರಿಕ) – 4,
ಹಿರಿಯ ಸಹಾಯಕರು (ತಾಂತ್ರಿಕೇತರ) ಗ್ರೂಪ್ ಸಿ- 3,
ಆಪ್ತ ಕಾರ್ಯದರ್ಶಿ – 1,

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪೋಸ್ಟ್‌ಗಳಿಗೆ ಅಧಿಸೂಚನೆ:-
ಹುದ್ದೆಯ‌ ವಿವರ:
ಜೂನಿಯರ್ ಪ್ರೋಗ್ರಾಮರ್ (ಗ್ರೂಪ್-ಬಿ)- 10
ಸಹಾಯಕ ಇಂಜಿನಿಯರ್ (ಸಿವಿಲ್) (ಗ್ರೂಪ್‌-ಬಿ)-1
ಕಿರಿಯ ಸಹಾಯಕ (ಗ್ರೂಪ್‌-ಸಿ)-49
ಸಹಾಯಕ (ಗ್ರೂಪ್‌-ಸಿ) -27
ಸಹಾಯಕ ಗ್ರಂಥಾಪಾಲಕ (ಗ್ರೂಪ್‌-ಸಿ)-1

ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹುದ್ದೆಗಳಿಗೆ ಅಧಿಸೂಚನೆ:-ಹುದ್ದೆಯ‌ ವಿವರ:
ದ್ವಿತೀಯ ದರ್ಜೆ ಸಹಾಯಕರು-100
ಕ್ಷೇತ್ರ ನಿರೀಕ್ಷಕರು-60,
ಮಂಡಳಿಯ ಕಲ್ಯಾಣ ಅಧಿಕಾರಿ-12,
ಪ್ರಥಮ ದರ್ಜೆ ಸಹಾಯಕರು-12,
ಆಪ್ತ ಸಹಾಯಕರು-02,

 

ಇದನ್ನು ಓದಿ: Samantha Ruth Prabhu: ಸಮಂತಾ ಖರೀದಿಸಿದ ಬೃಹತ್‌ ಬಂಗ್ಲೆಯ ಬೆಲೆ ಎಷ್ಟು ಗೊತ್ತಾ? ಅಚ್ಚರಿಯಾಗುವುದು ಖಂಡಿತ!