Home Jobs Madikeri: ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ!

Madikeri: ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ!

Teachers Job
Iamge source: file photos

Hindu neighbor gifts plot of land

Hindu neighbour gifts land to Muslim journalist

Madikeri: ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು(ಕಾವಾ), ಮೈಸೂರು ಸಂಸ್ಥೆ 2025-26ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕ/ಸಂಪನ್ಮೂಲ ವ್ಯಕ್ತಿಗಳಾಗಿ ಬೋಧನೆ ಮಾಡಲು ಗೌರವ ಸಂಭಾವನೆ ಆಧಾರದ ಮೇಲೆ ಷರತ್ತು ಹಾಗೂ ನಿಬಂಧನೆಗಳ ಅನ್ವಯ ಕಾರ್ಯ ನಿರ್ವಹಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅನ್ವಯ ಕಲೆ, ಚಿತ್ರಕಲೆ, ಶಿಲ್ಪಕಲೆ, ಅಚ್ಚುಕಲೆ(ಗ್ರಾಫಿಕ್ಸ್), ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ, ಕಲಾ ಇತಿಹಾಸ, ಕನ್ನಡ, ಇಂಗ್ಲೀಷ್, ಹಿಂದಿ, ಭಾರತ ಮತ್ತು ಭಾರತೀಯ ಸಂವಿಧಾನ ಹಾಗೂ ಸಂವಿಧಾನದ ಮೌಲ್ಯಗಳು, ಸೈಬರ್ ಸೆಕ್ಯುರಿಟಿ, ಆರ್ಟಿಫೀಷಿಯಲ್ ಇಂಟಲಿಜೆಂಟ್, ಈ ವಿಷಯಗಳ ಬೋಧನೆ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಯು ಎರಡು ವರ್ಷ ಸ್ನಾತಕೋತ್ತರ ಪದವಿಯಲ್ಲಿ ಗಳಿಸಿರುವ ಒಟ್ಟು ಶೇಕಡವಾರು ಅಂಕಗಳ ಶೇ.25ನ್ನು ಗಣನೆಗೆ ತೆಗೆದುಕೊಳ್ಳುವುದು(ಉದಾ ಸ್ನಾತಕೋತ್ತರ ಪದವಿಯಲ್ಲಿ ಶೇ.60 ಅಂಕ ಪಡೆದಿದ್ದಲ್ಲಿ ಅದರ ಶೇ.25 ರಷ್ಟು ಅಂದರೆ 15 ಅಂಕಗಳು ಎಂಬುದಾಗಿ ಗಣನೆಗೆ ತೆಗೆದುಕೊಳ್ಳುವುದು.

ಹೆಚ್ಚುವರಿ ವಿದ್ಯಾರ್ಹತೆ: ಪಿಹೆಚ್‍ಡಿ ವಿದ್ಯಾರ್ಹತೆ ಪಡೆದಿದ್ದಲ್ಲಿ, ಎನ್‍ಇಟಿ, ಕೆ-ಸೆಟ್, ಎಸ್‍ಎಲ್‍ಇಟಿ ವಿದ್ಯಾರ್ಹತೆ ಪಡೆದಿದ್ದಲ್ಲಿ, ಎಂ.ಫಿಲ್ ವಿದ್ಯಾರ್ಹತೆ ಪಡೆದಿರಬೇಕು.

ಹಿಂದಿನ ವರ್ಷಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವಧಿಗೆ ಪ್ರತಿ ಶೈಕ್ಷಣಿಕ ವರ್ಷಕ್ಕೆ 3 ಅಂಕಗಳಂತೆ ಗರಿಷ್ಠ 16 ವರ್ಷಗಳಿಗೆ 48 ಅಂಕಗಳು (ಪ್ರತಿ ಶೈಕ್ಷಣಿಕ ವರ್ಷದ ಪೂರ್ಣ ಅವಧಿ ಸೇವೆಗೆ 3 ಅಂಕಗಳು, ಶೈಕ್ಷಣಿಕ ವರ್ಷದಲ್ಲಿ 1 ಸೆಮಿಸ್ಟರ್‍ನಲ್ಲಿ ಮಾತ್ರ ಸೇವೆ ಸಲ್ಲಿಸಿದ್ದರೆ 1.5 ಅಂಕಗಳು, ಸೆಮಿಸ್ಟರ್‍ನ 1 ತಿಂಗಳ ಸೇವಾ ಅವಧಿಗೆ 0.5 ಅಂಕ, 1 ತಿಂಗಳು ಮೇಲ್ಪಟ್ಟು 2 ತಿಂಗಳವರೆಗಿನ ಸೇವಾ ಅವಧಿಗೆ 1 ಅಂಕ ಹಾಗೂ 2 ತಿಂಗಳು ಮೇಲ್ಪಟ್ಟ ಸೇವಾ ಅವಧಿಗೆ 1.5 ಅಂಕಗಳು. ವೈಯಕ್ತಿಕ ಸಂದರ್ಶನ ಇರುತ್ತದೆ.

ಅರ್ಜಿ ಸಲ್ಲಿಸಲು ಜೂನ್, 16 ಕೊನೆಯ ದಿನವಾಗಿದೆ. ಜೂನ್, 26 ರಂದು ಬೆಳಗ್ಗೆ 11 ಗಂಟೆಗೆ ಸಂಸ್ಥೆಯಲ್ಲಿ ಸಂದರ್ಶನ ನಡೆಯಲಿದೆ. ತರಗತಿಗಳು ಅನ್ವಯವಾಗುವಂತೆ ಕಾರ್ಯ ನಿರ್ವಹಿಸಲು ತಿಳಿಸಲಾಗುವುದು. ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಅಂತರ್ಜಾಲ ವಿಳಾಸ www.mysore.nic.in ಮತ್ತು www.cavamysore.karnataka.gov.in ಅಂತರ್ಜಾಲದ ಮೂಲಕ ಮಾಹಿತಿಯನ್ನು ಪಡೆಯಬಹುದು.

ಹೆಚ್ಚಿನ ಮಾಹಿತಿಗೆ ಕಾರ್ಯಾಲಯದ ದೂ.ಸಂ.0821-2438931 ನ್ನು ಸಂಪರ್ಕಿಸಬಹುದು ಎಂದು ಮೈಸೂರು ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜಿನ ಡೀನ್ ಅವರು ತಿಳಿಸಿದ್ದಾರೆ.