Home Food Bengaluru : ಮೊಟ್ಟೆಯಲ್ಲಿ ಕ್ಯಾನ್ಸರ್ ವದಂತಿ – ಬೇಕರಿ ಉದ್ಯಮದಲ್ಲಿ ಭಾರೀ ಕುಸಿತ!!

Bengaluru : ಮೊಟ್ಟೆಯಲ್ಲಿ ಕ್ಯಾನ್ಸರ್ ವದಂತಿ – ಬೇಕರಿ ಉದ್ಯಮದಲ್ಲಿ ಭಾರೀ ಕುಸಿತ!!

Hindu neighbor gifts plot of land

Hindu neighbour gifts land to Muslim journalist

Bengaluru : ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇದೆ ಎಂಬ ವದಂತಿ ರಾಷ್ಟ್ರಾದ್ಯಂತ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಸರ್ಕಾರ ಇದನ್ನು ಪ್ರಯೋಗಾಲಯಗಳಿಗೆ ಕಳಿಸಿ ಟೆಸ್ಟ್ ಮಾಡಿದ ಬಳಿಕ ಮೊಟ್ಟೆ ತಿಂದರೆ ಯಾವುದೇ ಕ್ಯಾನ್ಸರ್ ಬರುವುದಿಲ್ಲ ಎಂದು ತಿಳಿಸಿದೆ. ಆದರೆ ಈ ನಡುವೆ ಈ ವದಂತಿಯಿಂದಾಗಿ ಬೇಕರಿ ಉದ್ಯಮಕ್ಕೆ ಬಿಸಿ ತಟ್ಟಿದ್ದು ವ್ಯಾಪಾರದಲ್ಲಿ ಭಾರಿ ಕುಸಿತ ಕಂಡು ಬಂದಿದೆ.

ಹೌದು, ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿವೆ ಎಂಬ ಅಸ್ಪಷ್ಟ ಮಾಹಿತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಬಳಿಕ, ಜನರ ಆಹಾರ ಅಭ್ಯಾಸದಲ್ಲೇ ಬದಲಾವಣೆ ಕಾಣಿಸಿಕೊಳ್ಳುತ್ತಿದೆ. ಸ್ಪಷ್ಟ ಮಾಹಿತಿ ಸಿಗುವವರೆಗೂ ಕೆಲವರು ಮೊಟ್ಟೆ ಮತ್ತು ಮೊಟ್ಟೆಯಿಂದ ತಯಾರಿಸಿದ ಆಹಾರಗಳಿಂದ ದೂರ ಉಳಿಯುತ್ತಿದ್ದಾರೆ. ಅಲ್ಲದೆ ಇದು ಬೇಕರಿ ಉದ್ಯಮದ ಮೇಲೆ ನೇರವಾಗಿ ಪರಿಣಾಮ ಬೀರಿದ್ದು ವ್ಯಾಪಾರದಲ್ಲಿ ಗಣನೀಯವಾಗಿ ಕುಸಿತ ಕಂಡಿದೆ.

ಯಸ್, ಈ ಪರಿಸ್ಥಿತಿಯ ನೇರ ಪರಿಣಾಮ ಬೆಂಗಳೂರು ನಗರದ ಬೇಕರಿ ಮತ್ತು ಕಾಂಡಿಮೆಂಟ್ಸ್ ಉದ್ಯಮದ ಮೇಲೆ ಬಿದ್ದಿದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಸೀಜನ್ ನಡುವೆಯೇ ವ್ಯಾಪಾರದಲ್ಲಿ ಸುಮಾರು ಶೇಕಡಾ 10ರಷ್ಟು ಇಳಿಕೆ ಕಂಡುಬಂದಿದೆ ಎನ್ನಲಾಗುತ್ತಿದೆ. ಎಗ್ ಪಫ್ಸ್, ಕೇಕ್‌ಗಳ ಮಾರಾಟ ಕುಸಿತಗೊಂಡಿದ್ದು, ಕೇಕ್ ಆರ್ಡರ್‌ಗಳು ಸಹ ಹಿಂದಿನಂತೆ ಬರ್ತಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.