Home Food Watermelon: ಕಲ್ಲಂಗಡಿ ರುಚಿ ಹೆಚ್ಚಿಸಲು ರಾಸಾಯನಿಕ ಬಳಸಲಾಗುತ್ತದೆಯೇ? ಹೀಗೆ ಕಂಡು ಹಿಡಿಯಿರಿ!!!

Watermelon: ಕಲ್ಲಂಗಡಿ ರುಚಿ ಹೆಚ್ಚಿಸಲು ರಾಸಾಯನಿಕ ಬಳಸಲಾಗುತ್ತದೆಯೇ? ಹೀಗೆ ಕಂಡು ಹಿಡಿಯಿರಿ!!!

Watermelon
Image source: farm easy

Hindu neighbor gifts plot of land

Hindu neighbour gifts land to Muslim journalist

Watermelon: ಆಧುನಿಕ ಜಗತ್ತಿನಲ್ಲಿ ಕಲಬೆರಕೆ ಇಲ್ಲದ ಆಹಾರ ದೊರೆಯುವುದು ಅತ್ಯಂತ ವಿರಳವಾಗಿದೆ. ಇದರಿಂದಾಗಿ ಪ್ರಸ್ತುತ ಮನುಷ್ಯ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವುದು ನಮಗೆ ಗೊತ್ತಿರುವ ವಿಚಾರ. ನಾವು ಸೇವಿಸುವ ಪ್ರತಿಯೊಂದು ಆಹಾರ ಕೂಡ ರಾಸಾಯನಿಕಗಳಿಂದಲೇ ಕೂಡಿದೆ ಎಂದರೆ ತಪ್ಪಾಗಲಾರದು.

ಸದ್ಯ ಕಲ್ಲಂಗಡಿ ಹಣ್ಣು ಸವಿಯುವ ಮುನ್ನ ಎಚ್ಚರ! ಹೌದು, ಕಲ್ಲಂಗಡಿ (Watermelon) ಸೇರಿದಂತೆ ವಿವಿಧ ಹಣ್ಣುಗಳ ರುಚಿ ಹೆಚ್ಚಿಸಲು ಮತ್ತು ಕಲರ್ ನೀಡುವ ಸಲುವಾಗಿ ರಾಸಾಯನಿಕ ಬಳಸಲಾಗುತ್ತದೆ. ಕಲ್ಲಂಗಡಿಯ ಸಿಹಿ ಹೆಚ್ಚಿಸಲು ಮತ್ತು ಕೆಂಪು ಬಣ್ಣ ಬರುವಂತೆ ಮಾಡುವ ಸಲುವಾಗಿ ಎರಿಥ್ರೋಸಿನ್ ಎನ್ನುವ ವಿಷಕಾರಿ ಬಣ್ಣವನ್ನು ಬಳಸಲಾಗುತ್ತದೆ.

ಯಾವುದೇ ಹಣ್ಣನ್ನು ಕೊಳ್ಳುವಾಗ ಗ್ರಾಹಕರು ಹೆಚ್ಚು ಹಣ್ಣಾಗಿದೆಯೇ ಎನ್ನುವುದನ್ನು ಗಮನಿಸಿಯೇ ಖರೀದಿಸುತ್ತಾರೆ. ಆದರೆ ಕೆಲವರು ಕಲ್ಲಂಗಡಿ ಹಣ್ಣನ್ನು ಬೇಗನೆ ಹಣ್ನಾಗಿಸಲು ಕಾರ್ಬೈಡ್ ಬಳಸುತ್ತಾರೆ. ಕಲ್ಲಂಗಡಿ ಮೇಲಿರುವ ಬಿಳಿ ಬಣ್ಣದ ಪುಡಿ ಈ ಕಾರ್ಬೈಡ್ ಆಗಿರುತ್ತದೆ. ನೀವು ಕಲ್ಲಂಗಡಿ ಖರೀದಿಸುವಾಗ ಹಣ್ಣಿನ ಮೇಲೆ ಬಿಳಿ ಬಣ್ಣದ ಪುಡಿ ಅಂದರೆ ಕಾರ್ಬೈಡ್ ಇದೆಯೇ ಎನ್ನುವುದನ್ನು ಖಂಡಿತವಾಗಿಯೂ ಗಮನಿಸಿಕೊಳ್ಳಿ. ಮಾವಿನ ಹಣ್ಣು ಮತ್ತು ಬಾಳೆಹಣ್ಣಿನಲ್ಲಿಯೂ ಇದನ್ನು ಬಳಸಲಾಗುತ್ತದೆ.

ಭಾರತೀಯ ಆಹಾರ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಈ ಕಲೆ ಬೆರಕೆ ಪತ್ತೆ ಅಧ್ಯಯದಲ್ಲಿ, ಕಲ್ಲಂಗಡಿಯನ್ನು ಎರಡು ಭಾಗಗಳಾಗಿ ಕತ್ತರಿಸಿ ತಿರುಳಿನ ಬಣ್ಣವನ್ನು ಪರೀಕ್ಷಿಸುವಂತೆ ಸಲಹೆ ನೀಡಿದ್ದಾರೆ. ಹತ್ತಿಯ ಉಂಡೆಯನ್ನು ಮಾಡಿ ಕಲ್ಲಂಗಡಿ ಹಣ್ಣಿನ ಕೆಂಪು ಭಾಗದ ಮೇಲೆ ಸ್ವಲ್ಪ ಹೊತ್ತು ಹಾಗೆಯೇ ಇಡಬೇಕು. ಈ ಪ್ರಕ್ರಿಯೆಯಲ್ಲಿ ಹತ್ತಿಯ ಉಂಡೆ ಕೆಂಪು ಬಣ್ಣಕ್ಕೆ ತಿರುಗಿದರೆ ಹಣ್ಣಿನಲ್ಲಿ ಎರಿಥ್ರೋಸಿನ್ ಬೆರೆತಿದೆ ಎಂದರ್ಥ.

ದೌಲತ್ ರಾಮ್ ಕಾಲೇಜ್ ಮತ್ತು ಸಂಸ್ಕೃತಿ ಫೌಂಡೇಶನ್‌ನ ಸಂಶೋಧಕರು ಜೆಬ್ರಾಫಿಶ್ ಎಂಬ್ರಿಯೋ ಡೆವೆಲೊಪ್ ಮೆಂಟ್ ಮೇಲೆ ಫುಡ್ ಕಲರ್ ಎರಿಥ್ರೋಸಿನ್ ಮತ್ತು ಟಾರ್ಟ್ರಾಜಿನ್ ವಿಷಕಾರಿ ಪರಿಣಾಮಗಳು” ಎಂಬ ಅಧ್ಯಯನವು ಎರಿಥ್ರೋಸಿನ್ ಮತ್ತು ಟಾರ್ಟ್ರಾಜಿನ್‌ನ ಹೆಚ್ಚಿನ ಸೇವನೆಯು ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ ಎನ್ನುವುದನ್ನು ಅಧ್ಯಯನ ಮೂಲಕ ತಿಳಿಸಿದೆ.

ಮುಖ್ಯವಾಗಿ ಕಾರ್ಬೈಡ್ ನ ಮಿತಿಮೀರಿದ ಸೇವನೆಯು ಮನುಷ್ಯರಿಗೆ ತುಂಬಾ ಹಾನಿಕಾರಕವಾಗಿದೆ. ಇದು ತಲೆನೋವು, ಚರ್ಮದ ದದ್ದುಗಳಿಗೆ ಕಾರಣವಾಗಬಹುದು. ಶ್ವಾಸಕೋಶಕ್ಕೆ ಹಾನಿಯನ್ನು ಉಂಟುಮಾಡಬಹುದು. ಜೊತೆಗೆ ದೇಹದ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ.

 

ಇದನ್ನೂ ಓದಿ: ನಟಿ ಶೋಭಿತಾ ಜೊತೆ ಡೇಟಿಂಗ್‌! ಸಮಂತಾ ಮಾಜಿ ಪತಿ ಕೊಟ್ರು ಕೊನೆಗೂ ಕ್ಲಾರಿಟಿ!!