Home Education Puttur: ವೀರಮಂಗಲ ಪಿಎಂಶ್ರೀ ಶಾಲಾ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ

Puttur: ವೀರಮಂಗಲ ಪಿಎಂಶ್ರೀ ಶಾಲಾ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ

Hindu neighbor gifts plot of land

Hindu neighbour gifts land to Muslim journalist

Puttur: ವೀರಮಂಗಲ ಪಿಎಂಶ್ರೀ ಶಾಲಾ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟವು ವೀರಮಂಗಲ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟದ ಉದ್ಘಾಟಣೆಯನ್ನು ಹಿರಿಯ ವಿದ್ಯಾರ್ಥಿ, ನಿವೃತ್ತ ಸೈನಿಕ, ಮನಮೋಹನ ಗುತ್ತು ನೆರವೇರಿಸಿ ಪ್ರಾಥಮಿಕ ಶಿಕ್ಷಣ ನೀಡಿದ ವೀರಮಂಗಲ ಶಾಲೆಯು ನಮ್ಮ ಬದುಕಿನ ಭದ್ರ ಬುನಾದಿಯಾಗಿದೆ. ಅಂದಿನ ಸಿಹಿ ನೆನಪುಗಳು ಈ ಶಾಲೆಗೆ ಬರುವಾಗ ಮರುಕಳಿಸುತ್ತದೆ ಎಂದರು. ಮುಖ್ಯ ಅತಿಥಿಯಾಗಿ ನಿವೃತ್ತ ಮುಖ್ಯಗುರು ಹಿರಿಯರಾದ ಮೋನಪ್ಪ ಗೌಡ ಇವರು ಶುಭಹಾರೈಸಿದರು . ಹಿರಿಯ ವಿದ್ಯಾರ್ಥಿ ಪ್ರಸ್ತುತ ಉಡುಪಿಯ ಆನಂದ ತೀರ್ಥ ವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕಿ ಮಮತಾ ಶಂಕರ್ ಇವರು ಮಾತನಾಡಿ ನನ್ನ ಬದುಕು ರೂಪಿಸಿದ ನನ್ನ ಶಾಲೆ ವೀರಮಂಗಲ ಎಂದೆಂದಿಗೂ ಮನಪಟಲದಲ್ಲಿ ಇದೆ. ಇಲ್ಲಿನ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಕೇಳಿ ದೂರದಿಂದಲೆ ಖುಷಿ ಪಡುತ್ತಿದ್ದೇನೆ ಎಂದರು.ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ವೀರಮಂಗಲ ಸ್ವಾಗತಿಸಿದರು ಎಸ್ ಡಿ ಎಂ ಸಿ ಅಧ್ಯಕ್ಷ ರವಿಚಂದ್ರ ಅತಿಥಿಗಳನ್ನು ಗೌರವಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗೋಪಾಲಕೃಷ್ಣ ವಂದಿಸಿದರು. ಮುಖ್ಯಶಿಕ್ಷಕ ತಾರಾನಾಥ ಸವಣೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಹಿರಿಯ ವಿದ್ಯಾರ್ಥಿಗಳ ಕ್ರಿಡಾಕೂಟ ಸಲೀಂ,ಪಾರೂಕ್, ಮತ್ತು ಯೋಗೀಶ್ ಇವರ ಸಂಯೋಜನೆಯಲ್ಲಿ ನಡೆಯಿತು. ನೂರಾರು ಹಿರಿಯ ವಿದ್ಯಾರ್ಥಿಗಳು ಪಾಲ್ಗೊಂಡರು.