Home Education ದ್ವಿತೀಯ ಪಿಯುಸಿ ಪ್ರಾಕ್ಟಿಕಲ್‌ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

ದ್ವಿತೀಯ ಪಿಯುಸಿ ಪ್ರಾಕ್ಟಿಕಲ್‌ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

Open Book Exam

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ 2026 ರ ದ್ವಿತೀಯ ಪಿಯುಸಿ ಪ್ರಾಕ್ಟಿಕಲ್‌ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜನವರಿ 27 ರಿಂದ ಪ್ರಾರಂಭವಾಗಿ ಫ್ರೆಬವರಿ 2 ರವರೆಗೆ ನಡೆಯುವ ನಿರೀಕ್ಷೆಯಿದೆ. 2026 ರ ದ್ವಿತೀಯ ಪಿಯುಸಿ ಪ್ರಾಕ್ಟಿಕಲ್‌ ಪರೀಕ್ಷೆಗಳು ಒಂದು ವಾರದ ಅವಧಿಯಲ್ಲಿ ನಡೆಯಲಿದೆ. ಈ ಕುರಿತು KSEAB ಅಧಿಕೃತ ಸುತ್ತೋಲೆ ಹೊರಡಿಸಿದೆ.

ವಿದ್ಯಾರ್ಥಿಗಳು 2026 ರ ಕರ್ನಾಟಕ ದ್ವಿತೀಯ ಪಿಯುಸಿ ಪ್ರಾಕ್ಟಿಕಲ್ ಪರೀಕ್ಷೆಯ ವೇಳಾಪಟ್ಟಿಯನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್ kseab.karnataka.gov.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪರೀಕ್ಷಾ ಕೇಂದ್ರಗಳು ಮತ್ತು ಸಮಯದ ಬಗ್ಗೆ ವಿದ್ಯಾರ್ಥಿಗಳು ಶಾಲೆಗಳಿಂದ ನೇರವಾಗಿ ವಿವರವಾದ ವೇಳಾಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಪರೀಕ್ಷೆಗಳ ಮೇಲ್ವಿಚಾರಣೆಗಾಗಿ ಪ್ರತಿ ಜಿಲ್ಲೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಗುತ್ತದೆ. ಸಮಿತಿಯು ಆಯಾ ವಿಜ್ಞಾನ ವಿಷಯದ ಒಬ್ಬ ಪ್ರಾಂಶುಪಾಲರನ್ನು ಸಂಯೋಜಕರಾಗಿ ಒಳಗೊಂಡಿರುತ್ತದೆ. ಪ್ರತಿ ಪ್ರಾಯೋಗಿಕ ವಿಷಯಕ್ಕೆ ಗರಿಷ್ಠ ಇಬ್ಬರು ಹಿರಿಯ ವಿಜ್ಞಾನ ಉಪನ್ಯಾಸಕರನ್ನು ಸದಸ್ಯರನ್ನಾಗಿ ನೇಮಿಸಲಾಗುತ್ತದೆ ಎಂದು ಕೆಎಸ್ಇಎಬಿ ಮಾಹಿತಿ ನೀಡಿದೆ.

ಜಿಲ್ಲಾ ಸಮಿತಿಯು ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ವೇಳಾಪಟ್ಟಿಯನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಪ್ರಾಕ್ಟಿಕಲ್‌ ಪರೀಕ್ಷೆಗಳ ಸಮಯದಲ್ಲಿ ಯಾವುದೇ ರೀತಿಯ ಅಕ್ರಮ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಮಾಡಲಾಗುವುದು, ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ ಎಣದು ಕೆಎಸ್‌ಇಎಬಿ ಹೇಳಿದೆ.

ಪ್ರಾಕ್ಟಿಕಲ್ ಪರೀಕ್ಷೆಗಳು ಪೂರ್ಣಗೊಂಡ ನಂತರ, ಕರ್ನಾಟಕ ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಗಳು 2026 ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ನಡೆಯಲಿವೆ.