Home Education TET Key Answer: ಕರ್ನಾಟಕ ‘TET’ ಪರೀಕ್ಷೆಯ ಕೀ ಉತ್ತರ ಪ್ರಕಟ

TET Key Answer: ಕರ್ನಾಟಕ ‘TET’ ಪರೀಕ್ಷೆಯ ಕೀ ಉತ್ತರ ಪ್ರಕಟ

2nd PUC Exam Result

Hindu neighbor gifts plot of land

Hindu neighbour gifts land to Muslim journalist

TET Key Answer: ದಿನಾಂಕ:07/12/2025 ರಂದು ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2025ರ ಪರೀಕ್ಷೆಯ ಪತ್ರಿಕೆ-1 ಮತ್ತು ಪತ್ರಿಕೆ-2ರ ಕೀ-ಉತ್ತರಗಳನ್ನು ದಿನಾಂಕ:07/12/2025 ರಂದು ಸಂಜೆ ಇಲಾಖಾ ವೆಬ್‌ ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಪ್ರಕಟಿತ ಕೀ-ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸುವ ಬಗ್ಗೆ ಅಭ್ಯರ್ಥಿಗಳು ಕೆಳಕಂಡ ಸೂಚನೆಗಳನ್ನು ಪಾಲಿಸುವುದು ಎಂದು ತಿಳಿಸಿದೆ.

1. ಪತ್ರಿಕೆ-1 ಮತ್ತು ಪತ್ರಿಕೆ-2ಕ್ಕೆ ಸಂಬಂಧಿಸಿದಂತೆ ಪ್ರಕಟಿತ ಕೀ-ಉತ್ತರಗಳಿಗೆ ಆನ್‌ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಲು ದಿನಾಂಕ:09/12/2025 ರಿಂದ ದಿನಾಂಕ:12/12/2025ರ ಸಂಜೆ 5.30 ರವರೆಗೆ ಅವಕಾಶ ಕಲ್ಪಿಸಿದೆ.

2. ಕೀ-ಉತ್ತರಗಳಿಗೆ ಆಕ್ಷೇಪಣೆಗಳನ್ನು ಕೇವಲ ಆನ್‌ ಲೈನ್ ಮೂಲಕ ಮಾತ್ರ ಸಲ್ಲಿಸಬೇಕು. ಆನ್‌ಲೈನ್ ಮೂಲಕ ಹೊರತುಪಡಿಸಿ ಇತರೆ ಯಾವುದೇ ವಿಧಾನದಲ್ಲಿ ಆಕ್ಷೇಪಣೆ ಸಲ್ಲಿಸಿದಲ್ಲಿ, ಅವುಗಳನ್ನು ಪರಿಗಣಿಸಲಾಗುವುದಿಲ್ಲ.

3. ಅಭ್ಯರ್ಥಿಗಳು ತಮ್ಮ ಅರ್ಜಿ/ನೋಂದಣಿ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ನಮೂದಿಸುವ ಮೂಲಕ https://schooleducation.karnataka.gov.in / ಗೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಯನ್ನು ನಮೂದಿಸಿದ ನಂತರ ಆಕ್ಷೇಪಣೆಗೆ ಸಂಬಂಧಿಸಿದ ವೆಬ್ ಪೇಜ್ ತೆರೆದುಕೊಳ್ಳುತ್ತದೆ.

4. ಅಭ್ಯರ್ಥಿಯು ಸಲ್ಲಿಸುವ ಆಕ್ಷೇಪಣೆಗಳೊಂದಿಗೆ ಅಧಿಕೃತ ಆಧಾರ/ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ.

5. ಸೂಕ್ತ ಆಧಾರ, ದಾಖಲೆಗಳಿಲ್ಲದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

6. ಆಧಾರ ಮತ್ತು ದಾಖಲೆಗಳು 500KB ಮೀರಬಾರದು.

7. ವಿಷಯಕ್ಕೆ ಸಂಬಂಧಿಸದ ಅಸಂಬದ್ಧ ದಾಖಲೆಗಳನ್ನು ಹಾಗೂ ಚಿತ್ರಗಳನ್ನು ಅಪ್ ಲೋಡ್ ಮಾಡಿದಲ್ಲಿ ಅಂತಹ ಅಭ್ಯರ್ಥಿಗಳ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು.

8. ಜರ್ನಲ್‌ಗಳು, ಮ್ಯಾಗಜಿನ್‌ಗಳು, ಸ್ವತಂತ್ರ ಪ್ರಕಾಶಕರುಗಳ ಪುಸ್ತಕಗಳು, ಗೈಡ್ ಗಳು, ಇಂಟರ್‌ನೆಟ್ ಮೂಲಗಳು(ವಿಕಿಪೀಡಿಯಾ, ಗೂಗಲ್ ಮಾಹಿತಿ ಅಥವಾ ಅಂತರ್ಜಾಲದಿಂದ ಡೌನ್‌ ಲೋಡ್ ಮಾಡಿದ ಯಾವುದೇ ಮೂಲಗಳು) ವಿಡಿಯೋಗಳು, ದಿನಪತ್ರಿಕೆಯಲ್ಲಿನ ಲೇಖನಗಳನ್ನು ಆಧಾರ ದಾಖಲೆಗಳನ್ನಾಗಿ ಪರಿಗಣಿಸಲಾಗುವುದಿಲ್ಲ.

9. ಸ್ವೀಕರಿಸಲಾದ ಆಕ್ಷೇಪಣೆಗಳನ್ನು ವಿಷಯ ತಜ್ಞರ ತಂಡವು ಪರಿಶೀಲಿಸಿ ನೀಡುವ ಅಂತಿಮ ಉತ್ತರವನ್ನು ಪರಿಗಣಿಸಲಾಗುವುದು. ತಜ್ಞರ ತಂಡವು ನೀಡುವ ಉತ್ತರವೇ ಅಂತಿಮವಾಗಿರುತ್ತದೆ.