Home Education Govt School: ಸರ್ಕಾರಿ ಶಾಲೆಗಳು ಪುನಾರಂಭ; ಶಿಕ್ಷಣ ಇಲಾಖೆ ಸೂಚನೆಗಳೇನು?

Govt School: ಸರ್ಕಾರಿ ಶಾಲೆಗಳು ಪುನಾರಂಭ; ಶಿಕ್ಷಣ ಇಲಾಖೆ ಸೂಚನೆಗಳೇನು?

Hindu neighbor gifts plot of land

Hindu neighbour gifts land to Muslim journalist

Govt School: ದಸರಾ ರಜೆ, ಸಾಮಾಜಿಕ, ಶೈಕ್ಷಣಿಕ ಸರ್ವೆ ರಜೆ ಬಳಿಕ ಇಂದಿನಿಂದ ಸರ್ಕಾರಿ ಶಾಲೆಗಳು (Govt School) ಪುನಾರಂಭಗೊಂಡಿದೆ.

ದಸರಾ ರಜೆ ಹೊರತಾಗಿ, ಸರ್ವೆಗಾಗಿ ಸರ್ಕಾರ ವಿದ್ಯಾರ್ಥಿಗಳಿಗೆ ರಜೆ ವಿಸ್ತರಣೆ ಮಾಡಿ ಶಿಕ್ಷಕರನ್ನ (Teachers) ಸರ್ವೆ (Caste Census) ಕಾರ್ಯಕ್ಕೆ ಬಳಸಿಕೊಂಡಿತ್ತು. ಈ ಹಿನ್ನೆಲೆ ಇಂದಿನಿಂದ ತರಗತಿಗಳು ಮರು ಪ್ರಾರಂಭವಾಗಿದೆ. ಇದೀಗ ರಜೆಯಲ್ಲಿ ಮಿಸ್ ಆಗಿರುವ ಸಿಲಬಸ್ ಮುಕ್ತಾಯಕ್ಕೆ ಕೆಲವು ಮಹತ್ವದ ಸೂಚನೆಯನ್ನು ಶಿಕ್ಷಣ ಇಲಾಖೆ ನೀಡಿದೆ.

ಶಿಕ್ಷಣ ಇಲಾಖೆ ಸೂಚನೆಗಳೇನು?

ಡಿಸೆಂಬರ್- ಜನವರಿ ಒಳಗೆ ಸಂಪೂರ್ಣ ಸಿಲಬಸ್ ಮುಗಿಸಬೇಕು.

ಒಂದು ತಿಂಗಳು ಆಗಿರೋ ಸಿಲಬಸ್ ಲಾಸ್ ತುಂಬಲು ವಿಶೇಷ ತರಗತಿಗಳನ್ನ ನಡೆಸಬೇಕು.

ಬೆಳಗ್ಗೆ ಶಾಲೆ ಮುಂಚೆ ಅಥವಾ ಸಂಜೆ ಶಾಲೆ ಮುಗಿದ ಮೇಲೆ ವಿಶೇಷ ತರಗತಿ ತೆಗೆದುಕೊಂಡು ಪಠ್ಯ ಪೂರ್ಣ ಮಾಡಬೇಕು.

ಶನಿವಾರ ಅರ್ಧ ದಿನದ ಬದಲಾಗಿ ಪೂರ್ಣ ತರಗತಿಗಳನ್ನು ನಡೆಸಿ ಪಠ್ಯ ಪೂರ್ಣ ಮಾಡಬೇಕು.

ತೀರಾ ಅಗತ್ಯವಿದ್ದರೆ ರಜಾ ದಿನಗಳಲ್ಲೂ ವಿಶೇಷ ತರಗತಿ ನಡೆಸಿ ಪಠ್ಯ ಬೋಧನೆ ಪೂರ್ಣ ಮಾಡಬೇಕು.