Home Education SSLC ಆದ ನಂತರ ಮುಂದೇನು ? ವಿದ್ಯಾರ್ಥಿನಿಯರೇ, ನಿಮಗಾಗಿ ಇಲ್ಲಿದೆ ಕೆಲವೊಂದು ಟಾಪ್ ಕೋರ್ಸ್ !

SSLC ಆದ ನಂತರ ಮುಂದೇನು ? ವಿದ್ಯಾರ್ಥಿನಿಯರೇ, ನಿಮಗಾಗಿ ಇಲ್ಲಿದೆ ಕೆಲವೊಂದು ಟಾಪ್ ಕೋರ್ಸ್ !

Hindu neighbor gifts plot of land

Hindu neighbour gifts land to Muslim journalist

ಎಸ್‌ಎಸ್‌ಎಲ್‌ಸಿ ( SSLC) ಆದ ಮೇಲೆ ಮುಂದೇನು ಎನ್ನುವ ಒಂದು ದೊಡ್ಡ ಪ್ರಶ್ನೆ ಎಲ್ಲಾ ವಿದ್ಯಾರ್ಥಿಗಳ ಹಾಗೂ ಪೋಷಕರಲ್ಲಿರುತ್ತದೆ. ಮಕ್ಕಳಿಗೆ ಯಾವುದು ಉತ್ತಮ ಎನ್ನುವ ಕನ್ ಫ್ಯೂಷನ್ ಹೆಚ್ಚೇ ಎನ್ನಬಹುದು.
ಮುಂದಿನ ಭವಿಷ್ಯಕ್ಕಾಗಿ ಯಾವ ಕೋರ್ಸ್ ಆಯ್ಕೆ ಒಳ್ಳೆಯದು ಎನ್ನುವ ಗೊಂದಲ ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಕಾಡುತ್ತಿರುತ್ತದೆ.

ಇಲ್ಲಿ ನಾವು ವಿದ್ಯಾರ್ಥಿನಿಯರಿಗೆ ಕೆಲವು ಕೋರ್ಸ್‌ಗಳ ಬಗ್ಗೆ ಹೇಳಿಕೊಡುತ್ತೇವೆ. ಇವು ನಿಮಗೆ ಮುಂದೆ ಓದುವುದಕ್ಕೆ ದಾರಿದೀಪವಾಗಬಹುದು ಎನ್ನುವ ಭರವಸೆಯೊಂದಿಗೆ.

ಎಸ್ ಎಸ್ ಎಲ್ ಸಿ ನಂತರ ವಿದ್ಯಾರ್ಥಿನಿಯರಿಗೆ ತಾಂತ್ರಿಕ ಕೋರ್ಸ್‌ಗಳು ಮತ್ತು ತಾಂತ್ರಿಕೇತರ ಕೋರ್ಸ್‌ಗಳನ್ನು ಅಧ್ಯಯನ ಮಾಡಲು ನಿಮಗೆ ಅವಕಾಶವಿದೆ. ಕೆಲವು ಅಲ್ಪಾವಧಿಯ ಕೋರ್ಸ್‌ಗಳಾದರೆ ಇನ್ನು ಕೆಲವು ದೀರ್ಘಾವಧಿಯ ಕೋರ್ಸ್‌ಗಳಾಗಿರುತ್ತದೆ. ಹಲವು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ನಂತರ ಪಿಯುಸಿ ಯನ್ನು ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯ. ಇದಕ್ಕೆ ಸಂಬಂಧಪಟ್ಟಂತೆ ಎಲ್ಲರಿಗೂ ತಿಳಿದಿರುವ ಹಾಗೇ, ವಿಜ್ಞಾನ ವಿಭಾಗ, ಕಲಾ ವಿಭಾಗ, ವಾಣಿಜ್ಯ ವಿಭಾಗದಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡುವ ಅವಕಾಶ ವಿದ್ಯಾರ್ಥಿಗಳಿಗಿರುತ್ತದೆ. ಆದರೆ ಇಲ್ಲಿ ಪಿಯುಸಿ ಬಿಟ್ಟು ಹತ್ತನೇ ತರಗತಿ ಪಾಸಾದ ಕೂಡಲೇ ಯಾವ ಕೋರ್ಸ್‌ಗಳನ್ನು ವಿದ್ಯಾರ್ಥಿನಿಯರು ಆಯ್ಕೆ ಮಾಡಿಕೊಳ್ಳಬಹುದು ಎನ್ನುವುದರ ಬಗ್ಗೆ ತಿಳಿಸಿಕೊಡುತ್ತೇವೆ.

ಬಾಲಕಿಯರು ಹತ್ತನೇ ತರಗತಿಯ ನಂತರ ಎರಡು
ರೀತಿಯ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಒಂದು ವೃತ್ತಿಪರ ಕೋರ್ಸ್‌ಗಳು, ಮತ್ತೊಂದು ಪಾಲಿಟೆಕ್ನಿಕ್ ಮಟ್ಟದ ಡಿಪ್ಲೊಮಾ ಕೋರ್ಸ್‌ಗಳು. ಕೆಲವೊಂದು ನಾವು ಇಲ್ಲಿ ನೀಡಿದ್ದೇವೆ.

  1. ಈವೆಂಟ್ ಮ್ಯಾನೇಜ್‌ಮೆಂಟ್ ಡಿಪ್ಲೊಮಾ 6 ತಿಂಗಳಿಂದ 1 ವರ್ಷದ ಕೋರ್ಸ್
  2. ಯೋಗದಲ್ಲಿ ಡಿಪ್ಲೊಮಾ 6 ತಿಂಗಳಿಂದ 1 ವರ್ಷದ ಕೋರ್ಸ್.
  3. ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ 3 ವರ್ಷಗಳ ಕೋರ್ಸ್.
  4. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ 2 ರಿಂದ 3 ವರ್ಷದ ಕೋರ್ಸ್
  5. ಡಿಪ್ಲೊಮಾ ಇನ್ ಏರೋನಾಟಿಕಲ್ ಇಂಜಿನಿಯರಿಂಗ್ 2 ರಿಂದ 3 ವರ್ಷದ ಕೋರ್ಸ್
  6. ಡಿಪ್ಲೊಮಾ ಇನ್ ಬಯೋಟೆಕ್ನಾಲಜಿ 3 ವರ್ಷಗಳ ಕೋರ್ಸ್
  7. ಫೈನ್ ಆರ್ಟ್ಸ್ ಡಿಪ್ಲೊಮಾ 1 ವರ್ಷದ ಕೋರ್ಸ್
  8. ಡಿಪ್ಲೋಮಾ ಇನ್ ನರ್ಸಿಂಗ್ ಕೇರ್ ಅಸಿಸ್ಟೆಂಟ್ 2
    ವರ್ಷದ ಕೋರ್ಸ್
  9. ಐಟಿಐ ಕೋರ್ಸ್‌ಗಳು 6 ತಿಂಗಳಿಂದ 3 ವರ್ಷಗಳವರೆಗಿನ ಕೋರ್ಸ್
  10. ಆರ್ಕಿಟೆಕ್ಚರ್ ಎಂಜಿನಿಯರಿಂಗ್ ಡಿಪ್ಲೊಮಾ 3 ವರ್ಷದ ಕೋರ್ಸ್
  11. ಡಿಪ್ಲೊಮಾ ಇನ್ ಅಗ್ರಿಕಲ್ಟರ್ 2 ವರ್ಷದ ಕೋರ್ಸ್
  12. ಗೃಹ ವಿಜ್ಞಾನದಲ್ಲಿ ಡಿಪ್ಲೊಮಾ 1 ರಿಂದ 2 ವರ್ಷಗಳ ಕೋರ್ಸ್
  13. ಕಾಸ್ಮಟಾಲಜಿಯಲ್ಲಿ ಡಿಪ್ಲೊಮಾ 6 ತಿಂಗಳಿಂದ 1 ವರ್ಷದ ಕೋರ್ಸ್
  14. ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ 3 ವರ್ಷಗಳ ಕೋರ್ಸ್
  15. ಗಾರ್ಮೆಂಟ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ 2 ವರ್ಷದಿಂದ 3 ವರ್ಷದ ಕೋರ್ಸ್.