Home Death Chikkaballapur: ಪ್ರೀತಿಸಿ ಮದುವೆಯಾದ ಅಣ್ಣ-ತಂಗಿ? ಮನೆಯವರಿಂದ ಶಾಕ್!

Chikkaballapur: ಪ್ರೀತಿಸಿ ಮದುವೆಯಾದ ಅಣ್ಣ-ತಂಗಿ? ಮನೆಯವರಿಂದ ಶಾಕ್!

Hindu neighbor gifts plot of land

Hindu neighbour gifts land to Muslim journalist

Chikkaballapur: ಪ್ರೀತಿಸಿ ಮದುವೆಯಾಗಿ (Love Marriage) ಮನಗೆ ಬಂದ ಜೋಡಿಗೆ ಯುವಕನ ಮನೆಯವರು ಶಾಕ್‌ ಕೊಟ್ಟಿದ್ದಾರೆ.ವರಸೆಯಲ್ಲಿ ನೀವಿಬ್ಬರು ಅಣ್ಣ-ತಂಗಿ ಆಗಬೇಕು, ಮದುವೆಗೆ ನಾವ್ ಒಪ್ಪಲ್ಲ ಅಂತ ಶಾಕ್ ಕೊಟ್ಟಿರೋ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ ತಾಲೂಕಿನ ಗೋಪಲ್ಲಿ ಗ್ರಾಮದಲ್ಲಿ ನಡೆದಿದೆ.ಅಂದಹಾಗೆ ಗೋಪಲ್ಲಿ ಗ್ರಾಮದ 23 ವರ್ಷದ ನಿತಿನ್ ಹಾಗೂ 19 ವರ್ಷದ ಸುಕನ್ಯಾ ಪ್ರೀತಿಸಿ ಮೂರು ದಿನಗಳ ಹಿಂದೆ ಮನೆ ಬಿಟ್ಟು ಹೋಗಿ ದೇವಾಲಯವೊಂದರಲ್ಲಿ (Temple) ಮದುವೆಯಾಗಿದ್ರು.ಮದುವೆಯಾಗಿ ಸಿಕ್ಕಿಬಿದ್ದ ಜೋಡಿ ಮನೆಗೆ ಬಂದಾಗ ಯುವಕನ ಮನೆಯವರು ʻನೀವಿಬ್ಬರು ವರಸೆಯಲ್ಲಿ ಅಣ್ಣ ತಂಗಿ ಆಗಬೇಕು. ಇದು ತಪ್ಪು ನಿಮ್ಮ ಮದುವೆ ಸರಿ ಅಲ್ಲʼ. ಸಂಬಂಧಿಕರೆಲ್ಲಾ ಬೈಕೊಳ್ತಾರೆ. ಅಂತ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದ್ರಿಂದ ಮನನೊಂದ ಸುಕನ್ಯಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ನನಗೆ ಅದೇ ಯುವಕ ಬೇಕು ಅಂತ ಸುಕನ್ಯಾ ಪಟ್ಡು ಹಿಡಿದಿದ್ದಾಳೆ.