Home Breaking Entertainment News Kannada ತಾನೇ ಮನೆಗೆಲಸ ಮಾಡಿ ಉಳಿದ ಗಂಡಸರಿಗೆ ಸವಾಲು ಹಾಕಿದ ರಿಯಲ್ ಸ್ಟಾರ್ ಉಪ್ಪಿ !! |...

ತಾನೇ ಮನೆಗೆಲಸ ಮಾಡಿ ಉಳಿದ ಗಂಡಸರಿಗೆ ಸವಾಲು ಹಾಕಿದ ರಿಯಲ್ ಸ್ಟಾರ್ ಉಪ್ಪಿ !! | ಹೆಂಗಳೆಯರ ಮನಗೆದ್ದ ಉಪೇಂದ್ರ ಅವರ “ವರ್ಕ್ ಫ್ರಂ ಹೋಮ್” ವೀಡಿಯೋ ಇದೀಗ ಫುಲ್ ವೈರಲ್

Hindu neighbor gifts plot of land

Hindu neighbour gifts land to Muslim journalist

ಕೊರೋನಾ ಲಾಕ್ ಡೌನ್ ಜಾರಿಯಾದ ನಂತರ ಜನರ ಜೀವನದಲ್ಲಿ ಅನೇಕ ಬದಲಾವಣೆ ಉಂಟಾಗಿದೆ. ಈ ಮಹಾಮಾರಿಯಿಂದಾಗಿ ವರ್ಕ್ ಫ್ರಂ ಹೋಮ್ ಜಾರಿ ಆದಾಗಿನಿಂದ ಅದೆಷ್ಟೋ ಜನರ ಮನೆಯಲ್ಲಿ, ಕೆಲವರದ್ದು ಮನೆಗೆಲಸ…ಇನ್ನು ಕೆಲವರದ್ದು ಮನೆಯಿಂದ ಕೆಲಸ. ಇನ್ನೂ ಕೆಲವರದ್ದು ಮನೆಯಿಂದ ಕಛೇರಿ ಕೆಲಸ ಮಾಡುತ್ತಲೇ ಮನೆಗೆಲಸವನ್ನೂ ಮಾಡುವ ಪರಿಸ್ಥಿತಿ.

ಈಗ ಕೊರೋನಾ ಕಡಿಮೆ ಆದಮೇಲೆ ಬಹಳಷ್ಟು ಮಂದಿ ವರ್ಕ್ ಫಂ ಹೋಮ್ ಬದಲಿಗೆ ಕಚೇರಿಗೆ ಹೋಗಿ ಕೆಲಸ ಮಾಡಲಾರಂಭಿಸಿದ್ದಾರೆ. ಆದರೆ ರಿಯಲ್ ಸ್ಟಾರ್ ಉಪೇಂದ್ರ ಇದೀಗ ಮನೆಯಿಂದ ಕೆಲಸವಲ್ಲ, ಮನೆಗೆಲಸವನ್ನೇ ಮಾಡಿದ್ದಾರೆ.

ಕೈಯಲ್ಲಿ ಪೊರಕೆ ಹಿಡಿದು ಕಸಗುಡಿಸಿ, ನೆಲ ಒರೆಸಿ ಮನೆ ಸ್ವಚ್ಛಗೊಳಿಸುವ ಜೊತೆಗೆ ಅಡುಗೆ ಮಾಡಿ ಪಾತ್ರೆ ತೊಳೆದು, ಬಟ್ಟೆ ಒಗೆದು ಒಣಗಿಸಿ, ಪತ್ನಿ ಪ್ರಿಯಾಂಕಾ ತಲೆಗೆ ಮಸಾಜ್ ಮಾಡಿ ಅವರು ಹೇಳಿದ ಕೆಲಸ ಕೂಡ ಮಾಡಿದ್ದಾರೆ. ತಾವು ಇವೆಲ್ಲವನ್ನು ಮಾಡಿದ್ದಲ್ಲದೆ ಅವರು ವಿವಾಹಿತ ಪುರುಷರಿಗೂ ಇದನ್ನು ನೀವು ಮಾಡಬಲ್ಲಿರಾ? ಎಂದು ಸವಾಲು ಕೂಡ ಹಾಕಿದ್ದಾರೆ.

ಓ ಗಂಡಸರೇ, ನಿಮ್ಮ ಹೋಂ ಮಿನಿಸ್ಟರ್ ಜೊತೆ ಈ ಸವಾಲನ್ನು ನೀವು ಒಪ್ಪುವಿರಾ? ಎಂದು ಸವಾಲೆಸೆದಿರುವ ಅವರು ವಿವಾಹಿತರು ಪತ್ನಿ ಹೇಳುವ ಮನೆಗೆಲಸ ಮಾಡುವಿರಾ? ಎಂದು ಚಾಲೆಂಜ್ ಹಾಕಿದ್ದಾರೆ. ಇದನ್ನು ಗಂಡಸರು ಸವಾಲಾಗಿ ತೆಗೆದುಕೊಂಡಿದ್ದಾರೋ ಇಲ್ಲವೋ, ಆದರೆ ವಿವಾಹಿತ ಮಹಿಳೆಯರಂತೂ ಈ ವೀಡಿಯೋ ತಂತಮ್ಮ ಯಜಮಾನರಿಗೆ ಫಾರ್ವರ್ಡ್ ಮಾಡುತ್ತಿರುವುದಂತೂ ಹೆಚ್ಚಾಗೇ ನಡೆಯುತ್ತಿದೆ.

ಅಷ್ಟಕ್ಕೂ ಉಪೇಂದ್ರ ಇಷ್ಟೆಲ್ಲ ಮಾಡಿರುವುದು ಹೋಮ್ ಮಿನಿಸ್ಟರ್‌ಗಾಗಿ. ಅಂದರೆ ಏ. 1ರಂದು ಬಿಡುಗಡೆ ಆಗಲಿರುವ ಅವರ ಹೋಮ್ ಮಿನಿಸ್ಟರ್ ಚಿತ್ರದ ಪ್ರಚಾರಕ್ಕಾಗಿ, ಈ ಚಿತ್ರದಲ್ಲಿ ಉಪೇಂದ್ರ ಈ ಕೆಲಸಗಳನ್ನೆಲ್ಲ ಮಾಡುವ ಜೊತೆಗೆ ಮಹಿಳೆಯ ಪಾತ್ರಧಾರಿಯಾಗಿಯೂ ಕಾಣಿಸಿಕೊಳ್ಳಲಿದ್ದಾರೆ.