Home Breaking Entertainment News Kannada Gold Suresh: ತಂದೆ ನಿಧನ ಹೊಂದಿದ್ದಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಹೋದ್ರಾ ಗೋಲ್ಡ್ ಸುರೇಶ್?

Gold Suresh: ತಂದೆ ನಿಧನ ಹೊಂದಿದ್ದಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಹೋದ್ರಾ ಗೋಲ್ಡ್ ಸುರೇಶ್?

Hindu neighbor gifts plot of land

Hindu neighbour gifts land to Muslim journalist

Gold Suresh: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿ ಮಿಂಚ ಬೇಕಿದ್ದ ಗೋಲ್ಡ್ ಸುರೇಶ್ ಅವರು ಈಗ ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಅದಕ್ಕೆ ಕಾರಣವೂ ಕೂಡ ಇದೆ. ಎಲ್ಲರೂ ಸುರೇಶ್ ತಂದೆ ನಿಧನ ಹೊಂದಿದ್ದಾಗಿ ವರದಿ ಮಾಡಿದ್ದರು. ಆದರೆ, ಅಸಲಿ ವಿಚಾರ ಹಾಗಿಲ್ಲ ಎನ್ನಲಾಗಿದೆ. ಈ ಬೆಳವಣಿಗೆಯನ್ನು ಇಂದಿನ (ಡಿಸೆಂಬರ್ 16) ಎಪಿಸೋಡ್​ನಲ್ಲಿ ಪ್ರಸಾರ ಮಾಡಲಿದ್ದಾರೆ.

ಯಸ್.. ಈ ವಾರ ಗೋಲ್ಡ್ ಸುರೇಶ್(Gold Suresh)ಮನೆಯ ಕ್ಯಾಪ್ಟನ್ ಆಗಿದ್ದರು. ಅಲ್ಲದೇ, ‘ಉತ್ತಮ’ ಪಟ್ಟವನ್ನೂ ಗಿಟ್ಟಿಸಿಕೊಂಡಿದ್ದರು. ಆದರೆ ಅನಿವಾರ್ಯ ಕಾರಣದಿಂದ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರುವಂತಾಗಿದೆ. ಯಾಕೆಂದರೆ ಗೋಲ್ಡ್ ಸುರೇಶ್​ ಕುಟುಂಬದಲ್ಲಿ ಯಾವುದೋ ತುರ್ತು ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಅವರ ಅವಶ್ಯಕತೆ ಕುಟುಂಬದವರಿಗೆ ಜಾಸ್ತಿ ಇದೆ. ಈ ಹಿನ್ನಲೆಯಲ್ಲಿ ಗೋಲ್ಡ್ ಸುರೇಶ್ ಅವರಿಗೆ ಬಿಗ್ ಬಾಸ್ ಹೆಚ್ಚು ತಡ ಮಾಡದೇ ವಸ್ತುಗಳನ್ನು ಪ್ಯಾಕ್​ ಮಾಡಿಕೊಂಡು ಕೂಡಲೇ ಬಿಗ್ ಬಾಸ್​ ಮನೆಯಿಂದ ಹೊರಗೆ ಬನ್ನಿ’ ಎಂದು ಸೂಚನೆ ನೀಡಲಾಗಿದೆ.

ಆದರೆ ಈ ಬೆನ್ನಲ್ಲೇ ಸುರೇಶ್ ತಂದೆ ನಿಧನರಾಗಿದ್ದಾರೆ ಎಂದು ಹೇಳಲಾಗಿದೆ. ಸೋಶಿಯಲ್ ಮೀಡಿಯಾ ಗಳಲ್ಲಿ ಈ ರೀತಿಯಾದಂತಿಗಳನ್ನು ಹಬ್ಬಿಸುತ್ತಿದ್ದಾರೆ ಆದರೆ ಅದು ನಿಜವಿಲ್ಲ. ಶಿವಗೌಡ ಎಂಬುದು ಸುರೇಶ್ ತಂದೆ ಹೆಸರು. ಆದರೆ, ಅಸಲಿಗೆ ಅವರ ತಂದೆ ನಿಧನ ಹೊಂದಿಲ್ಲ. ಅವರು ಬದುಕಿಯೇ ಇದ್ದಾರೆ. ಕಾಲು ನೋವಿನ ಕಾರಣದಿಂದ ಹೊರ ಬಂದಿರಬಹುದು ಎಂದು ಅವರ ತಂದೆ ಅನುಮಾನ ಹೊರಹಾಕಿದ್ದಾರೆ. ಇಂದಿನ ಎಪಿಸೋಡ್​ನಲ್ಲಿ ಆ ಬಗ್ಗೆ ಮಾಹಿತಿ ಸಿಗೋ ನಿರೀಕ್ಷೆ ಇದೆ.