Home Breaking Entertainment News Kannada BBK11: ಬಿಗ್​ಬಾಸ್ ಮನೆಗೆ ಬಂದ ದುಬಾರಿ ಕಾರಲ್ಲಿ ಹೊರ ಹೋಗಿದ್ದು ಯಾರು?

BBK11: ಬಿಗ್​ಬಾಸ್ ಮನೆಗೆ ಬಂದ ದುಬಾರಿ ಕಾರಲ್ಲಿ ಹೊರ ಹೋಗಿದ್ದು ಯಾರು?

Hindu neighbor gifts plot of land

Hindu neighbour gifts land to Muslim journalist

BBK11: ಬಿಗ್ ಬಾಸ್ ಕನ್ನಡ ಶೋ ನಲ್ಲಿ ವಾರದ ಕೊನೆಯಲ್ಲಿ ಕಿಚ್ಚನ ಜೊತೆಗೆ ಪಂಚಾಯತಿ ನಡೆಯುತ್ತೆ. ಆದ್ರೆ ಈ ವಾರ ಸುದೀಪ್ ಬಂದಿಲ್ಲ. ಹಾಗಾಗಿ ಶನಿವಾರದ ಎಪಿಸೋಡ್​ಗೆ ನಿರ್ದೇಶಕ ಯೋಗರಾಜ್ ಭಟ್ ಮನೆಗೆ ಬಂದಿದ್ದರು. ಇನ್ನು ಭಾನುವಾರದ ಎಪಿಸೋಡ್​ಗೆ ಹೊಸ ಅತಿಥಿ ಬಂದಿದ್ದು ತಮ್ಮೊಟ್ಟಿಗೆ ಕಾರುಗಳನ್ನು ಸಹ ಕರೆತಂದಿದ್ದಾರೆ.

ಹೌದು, ಕಳೆದ ಶನಿವಾರ ಸುದೀಪ್ ಅವರ ತಾಯಿ ಸರೋಜಮ್ಮ ನಿಧನರಾದ ಕಾರಣ ಸುದೀಪ್ ಆ ನಂತರದ ತಮ್ಮ ಎಲ್ಲ ಚಿತ್ರೀಕರಣ, ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ. ಈ ವೀಕೆಂಡ್​ನ ವಾರದ ಪಂಚಾಯಿತಿಗೆ ಸಹ ಸುದೀಪ್ ಬಂದಿಲ್ಲ. ಹಾಗಾಗಿ ಬಿಗ್​ಬಾಸ್ ಆಯೋಜಕರು ಇಬ್ಬರು ಅತಿಥಿಗಳನ್ನು ಮನೆಯ ಒಳಕ್ಕೆ ಕಳಿಸಿದ್ದಾರೆ. ಶನಿವಾರದ ಎಪಿಸೋಡ್​ಗೆ ನಿರ್ದೇಶಕ ಯೋಗರಾಜ್ ಭಟ್ ಅವರು ಬಂದಿದ್ದರು. ಮನೆಯ ಸದಸ್ಯರ ಕೈಲಿ ಕೆಲವು ತಮಾಷೆಯ ಟಾಸ್ಕ್​ಗಳನ್ನು ಮಾಡಿದ್ದರು. ಕೆಲವರಿಗೆ ಬುದ್ಧಿವಾದ ಹೇಳಿದ್ದರು. ಇದೀಗ ಭಾನುವಾರದ ಎಪಿಸೋಡ್​ಗೆ ಸೃಜನ್ ಬಂದಿದ್ದಾರೆ.

ಈ ಹಿಂದೆ ಸೃಜನ್ ಲೋಕೇಶ್ ಬಿಗ್​ಬಾಸ್​ ಸ್ಪರ್ಧಿಯಾಗಿ ಬಂದಿದ್ದರು. ಈ ಬಾರಿ ಅತಿಥಿಯಾಗಿ ಬಂದಿದ್ದಾರೆ. ಮನೆಗೆ ಬಂದಿರುವ ಸೃಜನ್ ಲೋಕೇಶ್ ಖಾಲಿ ಕೈನಲ್ಲಿ ಬಂದಿಲ್ಲ ತಮ್ಮೊಟ್ಟಿಗೆ ಎರಡು ದುಬಾರಿ ಟಾಟಾ ಕರ್ವ್ ಕಾರುಗಳನ್ನು ಸಹ ತಂದಿದ್ದರು. ಮನೆಗೆ ಬಂದಿದ್ದ ಖಾಲಿ ಕಾರುಗಳು ಎಲಿಮಿನೇಟ್ ಆದ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿವೆ. ಆದರೆ ಆ ಸ್ಪರ್ಧಿ ಯಾರು ಎಂದು ಕಾದು ನೋಡಬೇಕಿದೆ.

ಹೌದು, ಬಿಗ್​ಬಾಸ್ ನಲ್ಲಿ ಕಳೆದ ವಾರ ಯಾರೂ ಸಹ ಎಲಿಮಿನೇಟ್ ಆಗಿರಲಿಲ್ಲ. ಸಾಮಾನ್ಯವಾಗಿ ಭಾನುವಾರ ಸ್ಪರ್ಧಿಯನ್ನು ಎಲಿಮಿನೇಟ್ ಮಾಡಲಾಗುತ್ತದೆ. ಆದರೆ ಯಾರು ಎಲಿಮಿನೇಟ್ ಆಗಿದ್ದಾರೆ ಎಂದು ತಿಳಿಯಲು ರಾತ್ರಿ ಪ್ರಸಾರವಾಗುವ ಎಪಿಸೋಡ್ ನೋಡಬೇಕಿದೆ.

ಮುಖ್ಯವಾಗಿ ಬಿಗ್​ಬಾಸ್ ಮನೆಗೆ ಬಂದ ಸೃಜನ್ ಮೊದಲಿಗೆ ಸ್ಪರ್ಧಿಗಳಿಗೆ ವಿವಿಧ ಟಾಸ್ಕ್​ಗಳನ್ನು ನೀಡಿದ್ದಾರೆ. ಕೆಲವು ತಮಾಷೆಯ ಆಟಗಳನ್ನು ಆಡಿಸಿದ್ದಾರೆ. ಆ ನಂತರ ಮನೆಯಿಂದ ಯಾರು ಹೊರಗೆ ಹೋಗಬೇಕು ಮತ್ತು ಏಕೆ? ಕಾರಣ ನೀಡಿ ಎಂದು ಸ್ಪರ್ಧಿಗಳಲ್ಲಿ ಹೇಳಿದ್ದಾರೆ ಅದರಂತೆ ಐಶ್ವರ್ಯಾ ಸೇರಿದಂತೆ ಇನ್ನು ಕೆಲವರು ವಿಕ್ರಂ ಹೆಸರು ಹೇಳಿದ್ದಾರೆ. ಹೀಗೆ ಒಬ್ಬೊಬ್ಬರು ಒಬ್ಬರ ಹೆಸರು ಹೇಳಿದ್ದಾರೆ. ಕೊನೆಗೆ ಮತಗಳ ಆಧಾರದಲ್ಲಿ ಒಬ್ಬ ಸ್ಪರ್ಧಿಯನ್ನು ಇಂದು ಬಿಗ್​ಬಾಸ್ ಮನೆಯಿಂದ ಹೊರಗೆ ಹಾಕಲಾಗಿದೆ.