Home Breaking Entertainment News Kannada Samantha: ಶಾಕುಂತಲೆ ತೊಟ್ಟ ಈ ಸೀರೆಯ ಬೆಲೆ ಎಷ್ಟು ಗೊತ್ತಾ? ಹಾಟ್ ಟಾಪಿಕ್ ಆಯಿತು ಸಮಂತಾ...

Samantha: ಶಾಕುಂತಲೆ ತೊಟ್ಟ ಈ ಸೀರೆಯ ಬೆಲೆ ಎಷ್ಟು ಗೊತ್ತಾ? ಹಾಟ್ ಟಾಪಿಕ್ ಆಯಿತು ಸಮಂತಾ ತೊಟ್ಟ ಸೀರೆ!

Samantha

Hindu neighbor gifts plot of land

Hindu neighbour gifts land to Muslim journalist

Samantha: ಸಮಂತಾ ರುತ್ ಪ್ರಭು (Samantha Rut Prabhu), ಅನಾರೋಗ್ಯದ ನಡುವೆಯೂ ಅವರ ಬಹುನಿರೀಕ್ಷೆ ಸಿನಿಮಾ ಶಕುಂತಲಂ (Shakunthalam) ಪ್ರಚಾರದಲ್ಲಿ ತೊಡಗುತ್ತಿದ್ದಾರೆ. ಯಶೋಧ (yashodha) ಸಿನಿಮಾದ ಸೂಪರ್ ಸಕ್ಸಸ್ ನಂತರ ಸದ್ಯ ಸಮಂತಾ ಶಕುಂತಲಾ ಪ್ರಚಾರ ಮಾಡುತ್ತಿದ್ದು (Samantha in Shakunthalam Promotion) , ಇತ್ತೀಚೆಗೆ ಪ್ರಚಾರದ ವೇಳೆ ಸಮಂತಾ ಸಖತ್ ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಸಮಂತಾ (Samantha) ತೊಟ್ಟ ಸೀರೆ ಇದೀಗ ಎಲ್ಲರ ಗಮನ ಸೆಳೆದು, ಹಾಟ್ ಟಾಪಿಕ್ ಆಗಿದೆ.

ಸೌತ್ ಸುಂದರಿ ಸಮಂತಾ ಸದ್ಯ ಶಾಕುಂತಲಂ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಟ್ರೈಲರ್ ರಿಲೀಸ್ (Shakunthalam trailer) ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದಲ್ಲಿ ಸಮಂತಾ ಶಾಕುಂತಲೆಯಾಗಿ ಕಾಣಿಸಿಕೊಂಡಿದ್ದಾರೆ. ಅನೇಕ ದಿನಗಳ ಬಳಿಕ ಸಮಂತಾ ನೋಡಿ ಅಭಿಮಾನಿಗಳು ಫುಲ್ ಖುಷಿ ಆದರು.

ಶಾಕುಂತಲಂ ಚಿತ್ರ ಏಪ್ರಿಲ್ 14 ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ಈ ಸಿನಿಮಾ ತೆಲುಗು (Telugu), ತಮಿಳು (thamil), ಕನ್ನಡ (kannada) ಮತ್ತು ಹಿಂದಿ (Hindi) ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಸದ್ಯ ಚಿತ್ರದ ಪ್ರಚಾರವನ್ನು ಸಮಂತಾ ಆರಂಭಿಸಿದ್ದಾರೆ. ನಿರ್ದೇಶಕ ಗುಣಶೇಖರ್ ಅವರ ನಿರ್ದೇಶನದಲ್ಲಿ ಶಾಕುಂತಲಂ ಚಿತ್ರ ಮೂಡಿಬಂದಿದ್ದು, ನೀವೆಲ್ಲಾ ಕೇಳಿರಬಹುದು ಹಿಂದಿನ ಕಾಲದ ದುಶ್ಯಂತ ಮಹಾರಾಜ ಮತ್ತು ಶಾಕುಂತಲೆಯ ಪ್ರೇಮಕಥೆಯನ್ನು, ಅದನ್ನಾಧರಿಸಿ ಈ ಚಿತ್ರವು ಮೂಡಿಬಂದಿದೆ. ಗುಣಶೇಖರ್ ಅವರ ಗುಣ ಟೀಮ್ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ದಿಲ್ ರಾಜು ಅವರು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವಿಶ್ವದಾದ್ಯಂತ ಪ್ರಸ್ತುತಪಡಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಸುಮಾ ಅವರ ಸಂದರ್ಶನವೊಂದು ಬಿಡುಗಡೆಯಾಗಿದ್ದು, ಆ ಸಂದರ್ಶನಕ್ಕೆ ಸಮಂತಾ ಆಗಮಿಸಿದ್ದು, ಈ ವೇಳೆ ಸಮಂತಾ ತೊಟ್ಟಿದ್ದ ಸೀರೆಯ ಬೆಲೆ (Samantha Saree price) ವೈರಲ್ ಆಗಿದೆ. ಹೌದು ನೀವು ಸೀರೆಯ ಬೆಲೆ ಕೇಳಿದ್ರೆ ದಂಗಾಗ್ತೀರಾ!!!.

ವೈಟ್ ಕಲರ್ ದುಬಾರಿ ಸೀರೆಯುಟ್ಟು ಸಮಂತಾ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಈ ಬಿಳಿ ಸೀರೆಯಲ್ಲಿ ಸಮಂತಾ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ವೈಟಾ ಕಲರ್ ಸೀರೆಯಲ್ಲಿ ಕ್ಲಾಸಿಯಾಗಿ ಮಿಂಚಿದ ಸಮಂತಾ ಯುವಕರ ನಿದ್ದೆ ಕೆಡಿಸಿದ್ದಾರೆ. ಅಭಿಮಾನಿಗಳು ತಮ್ಮ ನಟಿಯ ಫೋಟೋ (Samantha Saree photo) ನೋಡಿ ಕಾಮೆಂಟ್ ನ ಸುರಿಮಳೆಗೈದಿದ್ದಾರೆ.

ಸದ್ಯ ನಟಿ ಉಟ್ಟಿದ ಸೀರೆಯ ಬೆಲೆ ಎಷ್ಟು ಗೊತ್ತಾ? ಫುಲ್ ಟ್ರ್ಯಾನ್ಸ್ಪೆರೆಂಟ್ ಆಗಿರುವ ಈ ಬಿಳಿ ಬಣ್ಣದ ಸೀರೆಯ ಬೆಲೆ ಬರೋಬ್ಬರು 92 ಸಾವಿರ ರೂಪಾಯಿ ಎಂದು ಹೇಳಲಾಗಿದೆ. ಈ ತೆಳುವಾದ ಸೀರೆ ಮೇಲೆ ಫ್ಲವರ್‌ ಪ್ರಿಂಟ್ ಕಾಣಬಹುದು. ಇದಕ್ಕೆ ಮ್ಯಾಚಿಂಗ್‌ ಆಗಿ ಸಿಂಪಲ್ ಬ್ಲೌಸ್ ಧರಿಸಿದ್ದಾರೆ. ಸಖತ್ ಹಾಟ್ ಫೋಸ್ ಕೊಟ್ಟಿದ್ದಾರೆ. ಅಭಿಮಾನಿಗಳು ನಟಿಯನ್ನು ನೋಡಿ ಫುಲ್ ಖುಷ್ ಆಗಿದ್ದಾರೆ.

 

 

ಇದನ್ನೂ ಓದಿ: Watermelon benefits : ಬೇಸಿಗೆಯಲ್ಲಿ ನಿಮ್ಮ ಸೌಂದರ್ಯ ಹೆಚ್ಚಿಸಬೇಕೆ? ಕಲ್ಲಂಗಡಿ ಹಣ್ಣಿನಲ್ಲಿ ಅದ್ಭುತ ಪ್ರಯೋಜನ.!