Home Breaking Entertainment News Kannada Rakesh Adiga: ಬಿಗ್ ಬಾಸ್ ರನ್ನರ್ ಅಪ್ ಕಪ್ ಗೆದ್ದ ರಾಕೇಶ್ ಅಡಿಗ ಈಗ ಏನು...

Rakesh Adiga: ಬಿಗ್ ಬಾಸ್ ರನ್ನರ್ ಅಪ್ ಕಪ್ ಗೆದ್ದ ರಾಕೇಶ್ ಅಡಿಗ ಈಗ ಏನು ಮಾಡ್ತಾ ಇದ್ದಾರೆ ಗೊತ್ತಾ?

Rakesh Adiga

Hindu neighbor gifts plot of land

Hindu neighbour gifts land to Muslim journalist

Rakesh Adiga: 2009 ರಲ್ಲಿ ತೆರೆಗೆ ಬಂದ ‘ಜೋಶ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ರಾಕೇಶ್ ಅಡಿಗ(Rakesh Adiga) ಪಾದಾರ್ಪಣೆ ಮಾಡಿದ್ದು, ಬಿಗ್ ಬಾಸ್ ಮೂಲಕ ಜನ ಮಾನಸದಲ್ಲಿ ಹೆಸರು ಪಡೆದ ರಾಕೇಶ್ ಅಡಿಗ ಅವರು ಈಗ ಏನು ಮಾಡ್ತಾ ಇದ್ದಾರೆ ಗೊತ್ತಾ?

ಜೋಶ್ ಸಿನಿಮಾದಲ್ಲಿ ಬಣ್ಣ ಹಚ್ಚಿದ ಬಳಿಕ ‘ಮನಸಾಲಜಿ’, ‘ಅಲೆಮಾರಿ’, ‘ಯಾರೇ ಕೂಗಾಡಲಿ’, ‘ನಂದ ಗೋಕುಲ’, ‘ಮಂದಹಾಸ’, ‘ಕೋಟಿಗೊಂದ್ ಲವ್ ಸ್ಟೋರಿ’, ‘ಪ್ರೀತಿಯಿಂದ’, ‘ಡವ್’, ‘ಮಂಡ್ಯ ಟು ಮುಂಬೈ’ ಮುಂತಾದ ಸಿನಿಮಾಗಳಲ್ಲಿ ರಾಕೇಶ್ ಅಡಿಗ ತೆರೆ ಮೇಲೆ ಮಿಂಚಿದ್ದಾರೆ.2019 ರ ಬಳಿಕ ಸಿನಿಮಾಗಳಿಂದ ಕೊಂಚ ಬ್ರೇಕ್ ಪಡೆದುಕೊಂಡ ರಾಕೇಶ್ ಅಡಿಗ 2022ರಲ್ಲಿ ‘ಬಿಗ್ ಬಾಸ್ ಕನ್ನಡ ಓಟಿಟಿ 1’(BBK OTT 1 ) ಕಾರ್ಯಕ್ರಮಕ್ಕೆ ಲಗ್ಗೆ ಇಟ್ಟು, ಇದರಲ್ಲಿ ಟಾಪ್ 4 ಹಂತ ತಲುಪಿದ ರಾಕೇಶ್ ಅಡಿಗ ‘ಬಿಗ್ ಬಾಸ್ ಕನ್ನಡ 9’(BIGG BOSS Season 9) ಕಾರ್ಯಕ್ರಮದಲ್ಲಿ ಸೀನಿಯರ್ ಆಗಿ ಭಾಗಿಯಾಗಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ತಮ್ಮ ಶಾಂತ ಸ್ವಭಾವದಿಂದ ವೀಕ್ಷಕರ ಮನಗೆದ್ದಿದ್ದ ರಾಕೇಶ್ ಅಡಿಗ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದರು.

‘ನೈಟ್ ಔಟ್’ ಚಿತ್ರಕ್ಕೆ ರಾಕೇಶ್ ಅಡಿಗ ಆಕ್ಷನ್ ಕಟ್ ಹೇಳಿದ್ದರು. ಸದ್ಯ, ನಟ ರಾಕೇಶ್ ಅಡಿಗ ಹೊಸ ಸಿನಿಮಾ ‘ಲೈಫ್ ಆಫ್ ಎ ಕಾಕ್ರೋಚ್’ ನಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದಲ್ಲಿನ ರಾಕೇಶ್ ಅಡಿಗ ಅವರ ಕ್ಯಾರೆಕ್ಟರ್ ರಿವೀಲ್ ಟೀಸರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಕೂಡ ಲಭ್ಯವಾಗುತ್ತಿವೆ. ಅಷ್ಟೇ ಅಲ್ಲದೇ, ಪೂಜಾ ಶ್ರೀ ಎಂಬುವರು ಸಿನಿಮಾ ನಿರ್ಮಾಣ ಮಾಡುತ್ತಿದ್ದು, ರಾಕೇಶ್ ಅಡಿಗ ಅವರು ಸಿನಿಮಾದ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಲೈಫ್ ಆಫ್ ಎ ಕಾಕ್ರೋಚ್’ ಸಿನಿಮಾದ ಶೂಟಿಂಗ್ ಮೇ ತಿಂಗಳಿನಲ್ಲಿ ನಡೆಯಲಿದ್ದು, ನಟ ರಾಕೇಶ್ ಅಡಿಗ ಅವರು ಕಾಕ್ರೋಚ್ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಹೀಗಾಗಿ, ಇವರ ಪಾತ್ರವೇನು ಎಂಬ ಕುತೂಹಲ ಅಭಿಮಾನಿಗಳಲ್ಲಿ ದಟ್ಟವಾಗಿ ಕಾಡುತ್ತಿದೆ.

ಎಲ್ಲರ ಜೊತೆ ಸ್ನೇಹದಿಂದ ಬೆರೆಯುತ್ತಿದ್ದ ರಾಕೇಶ್ ಅಡಿಗ ದೊಡ್ಮನೆಯಿಂದ ಹೊರಗೆ ಬಂದ ಮೇಲೂ ಕೂಡ ಅಮೂಲ್ಯ ಗೌಡ ಅವರ ಜೊತೆಗಿನ ಸಂಬಂಧ ಹಾಗೆ ಉಳಿದಿದೆ. ಇಬ್ಬರು ಜೊತೆಯಾಗಿ ಕಾಣಿಸಿಕೊಂಡ ಫೋಟೊ ಕೂಡ ಇತ್ತೀಚೆಗೆ ಸಂಚಲನ ಮೂಡಿಸಿದೆ. ಇದರ ಜೊತೆಗೆ ರಾಕೇಶ್ ಅವರು ಆಧ್ಯಾತ್ಮ, ವ್ಯಕ್ತಿತ್ವ ವಿಕಾಸನ ಕುರಿತಂತೆ ಯೂಟ್ಯೂಬ್ ಚಾನೆಲ್(YouTube Channel) ಕೂಡ ಶುರು ಮಾಡುವ ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

 

ಇದನ್ನು ಓದಿ : Rahul Gandhi: ‘ರಾಹುಲ್ ಗಾಂಧಿ PM ಆಗೋವರ್ಗೂ ಸಾಲ ನೀಡಲ್ಲ’! ವೈರಲ್ ಆಯ್ತು ಪಾನ್ ಅಂಗಡಿ ಮುಂದಿರೋ ಬೋರ್ಡು !