Home Breaking Entertainment News Kannada Actor Naresh: ‘ ಮಕ್ಕಳು ಮಾಡ್ಕೊಬಹುದು, ಆದ್ರೆ ಅದೊಂದು ಸಮಸ್ಯೆ ಉಂಟಲ್ಲಾ’ ಎಂದ ಪವಿತ್ರಾ ಲೋಕೇಶ್...

Actor Naresh: ‘ ಮಕ್ಕಳು ಮಾಡ್ಕೊಬಹುದು, ಆದ್ರೆ ಅದೊಂದು ಸಮಸ್ಯೆ ಉಂಟಲ್ಲಾ’ ಎಂದ ಪವಿತ್ರಾ ಲೋಕೇಶ್ ಗೆಳೆಯ ನರೇಶ್ !

Actor Naresh
Image Source: India post english

Hindu neighbor gifts plot of land

Hindu neighbour gifts land to Muslim journalist

Actor Naresh: ತೆಲುಗು ಚಿತ್ರರಂಗದ ಹಿರಿಯ ನಟ ನರೇಶ್ ವಿಜಯ ಕೃಷ್ಣ (Actor Naresh) ಮತ್ತು ಕನ್ನಡ ನಟಿ ಪವಿತ್ರಾ ಲೋಕೇಶ್ (Pavitra Lokesh) ಬಗ್ಗೆ ಗೊತ್ತಿಲ್ಲದೇ ಇರುವವರು ಯಾರು ಇರಲಿಕ್ಕಿಲ್ಲ. ಯಾಕಂದ್ರೆ ಇತ್ತೀಚಿಗೆ ಸಾಕಷ್ಟು ಸುದ್ಧಿಯಲ್ಲಿರುವವರ ಪೈಕಿ ಇವರೂ ಒಬ್ಬರು. ಇವರುಗಳು ಸಿನಿಮಾಗಿಂತ ಹೆಚ್ಚಾಗಿ ತಮ್ಮ ಸಂಬಂಧದ ಬಗ್ಗೆ ಸುದ್ಧಿಯಲ್ಲಿದ್ದಾರೆ.

ನರೇಶ್-ಪವಿತ್ರಾ ಲವ್‌ಸ್ಟೋರಿ ಆಧಾರಿತ ‘ಮಳ್ಳಿ ಪೆಳ್ಳಿ’ (malli pelli) ಸಿನಿಮಾ ಮೇ 26ರಂದು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿದೆ. ತಮ್ಮದೇ ಲವ್ ಸ್ಟೋರಿಯ‌ ಸಿನಿಮಾದಲ್ಲಿ ತಾವೇ ನಟಿಸಿದ್ದಾರೆ. ಈ ಸಿನಿಮಾ ಕನ್ನಡದಲ್ಲಿ ‘ಮತ್ತೆ ಮದುವೆ’ ಹೆಸರಿನಲ್ಲಿ ಡಬ್ ಆಗಿದ್ದು, ಈ ವಾರ ರಿಲೀಸ್ ಆಗಲಿದೆ. ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿರುವ ನರೇಶ್- ಪವಿತ್ರ ಲೋಕೇಶ್ ಮಳ್ಳಿ ಪೆಳ್ಳಿ’ ಸಿನಿಮಾ ಬಿಡುಗಡೆ ಆಗುತ್ತಿದ್ದಂತೆ ಪ್ರಚಾರದಲ್ಲಿ ಬಿಜಿಯಾಗಿದ್ದು, ಈ ವೇಳೆ ಇವರಿಗೊಂದು ಪ್ರಶ್ನೆ ಎದುರಾಗಿದೆ.

ಮಕ್ಕಳನ್ನು ಮಾಡಿಕೊಳ್ಳುವ ಬಗ್ಗೆ ಸಂದರ್ಶನ ಸಂದರ್ಭದಲ್ಲಿ ಕೇಳಿದಾಗ , “ನಾವು ಮಕ್ಕಳು ಮಾಡಲು ಈಗಲೂ ರೆಡಿ” ಎಂದು ಹೇಳಿದ್ದರು. ಆದರೆ, ಅದೊಂದು ಸಮಸ್ಯೆ ಇದೆ ಎಂದಿದ್ದರು ಪವಿತ್ರಾ ಲೋಕೇಶ್ ಗೆಳೆಯ ನರೇಶ್. ಏನದು ಸಮಸ್ಯೆ? ನಟ ನರೇಶ್‌ ಮತ್ತು ಪವಿತ್ರಾ ಲೋಕೇಶ್‌ ತಮಗೂ ಮಕ್ಕಳು ಮಾಡಿಕೊಳ್ಳಬೇಕು ಎಂಬ ಆಸೆ ಇದೆ, ನಮಗೂ ಮಕ್ಕಳೆಂದರೆ ಇಷ್ಟ ಎಂದಿದ್ದಾರೆ. ಎಷ್ಟೋ ಮಕ್ಕಳಿಗೆ ಪೋಷಕರಿಲ್ಲ. ಈ ಸಂದರ್ಭದಲ್ಲಿ ನಮಗೆ ಮಕ್ಕಳನ್ನು ಮಾಡಿಕೊಳ್ಳುವ ಅನಿವಾರ್ಯ ಏನಿದೆ, ಆ ಮಕ್ಕಳನ್ನು ಸಮಾಜಕ್ಕೆ ನೀಡುವ ಅವಶ್ಯಕತೆ ಏನಿದೆ ಎಂದು ಬೋಲ್ಡ್ ಆಗಿ ಉತ್ತರಿಸಿದ್ದಾರೆ.

ನರೇಶ್ ಅವರಿಗೆ ಈಗ 63 ವಯಸ್ಸು. ಪವಿತ್ರಾ ಲೋಕೇಶ್ ಅವರಿಗೆ 44 ವರ್ಷ. ಇವರ ಮಧ್ಯೆ ಸುಮಾರು 19 ವರ್ಷಗಳ ಅಂತರ ಇದೆ. ಆದರೆ ಪ್ರೀತಿಗಲ್ಲ. “ವೈದ್ಯಕೀಯವಾಗಿ ನಮ್ಮ ವಯಸ್ಸಿನಲ್ಲಿ ನಾವು ಮಕ್ಕಳನ್ನು ಪಡೆಯುವ ಸಾಮರ್ಥ್ಯ ಇದೆ. ಆದರೆ ನಾವು ಈಗ ಮಕ್ಕಳನ್ನು ಪಡೆದು ಬೆಳೆಸಿದರೆ, ಅವರಿಗೆ 20 ವರ್ಷ ಆಗುವಷ್ಟರಲ್ಲಿ ನಮಗೆ 60 ವರ್ಷ ವಯಸ್ಸಾಗಿರುತ್ತದೆ. ಅದು ಅಗತ್ಯವೇ? ನಾವು ಈಗ ಆರಾಮಾಗಿ, ಖುಷಿಯಿಂದ ಇದ್ದೇವೆ. ನನಗೆ ಪವಿತ್ರಾ ಮಗು, ನಾನು ಪವಿತ್ರಾಗೆ ಮಗು. ನಮಗೆ ಮಕ್ಕಳಿದ್ದಾರೆ. ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ” ಎಂದು ನರೇಶ್ ಹೇಳಿದರು.

ಇದನ್ನೂ ಓದಿ: Dakshina Kannada: SDM ಹಳೆ ವಿದ್ಯಾರ್ಥಿನಿ ರಾಷ್ಟ್ರಮಟ್ಟದ ಯುವ ವಾಲಿಬಾಲ್ ಆಟಗಾರ್ತಿ ಹೃದಯಾಘಾತಕ್ಕೆ ಬಲಿ!