Home Breaking Entertainment News Kannada Rajamouli: ಸಿನಿ ಜಗತ್ತು ರಾಜಮೌಳಿಗಾಗಿ ಕಾಯುತ್ತೆ, ಆದ್ರೆ ಈ ಸ್ಟಾರ್ ನಿರ್ದೇಶಕ ಆ ನಟನಿಗಾಗಿ ದಶಕಗಳಿಂದ...

Rajamouli: ಸಿನಿ ಜಗತ್ತು ರಾಜಮೌಳಿಗಾಗಿ ಕಾಯುತ್ತೆ, ಆದ್ರೆ ಈ ಸ್ಟಾರ್ ನಿರ್ದೇಶಕ ಆ ನಟನಿಗಾಗಿ ದಶಕಗಳಿಂದ ಕಾಯ್ತಿದ್ದಾರೆ!!

Rajamouli
Image source: The Indian express

Hindu neighbor gifts plot of land

Hindu neighbour gifts land to Muslim journalist

Rajamouli: ನಿರ್ದೇಶಕ ಎಸ್​.ಎಸ್​. ರಾಜಮೌಳಿ (Rajamouli) ನಿರ್ದೇಶನದ ಸಿನಿಮಾ ‘ಬಾಹುಬಲಿ’ (bahubali) ತೆರೆಕಂಡ ನಂತರ ಭಾರತದ ಸಿನಿಮಾ ಇತಿಹಾಸದಲ್ಲೇ ಹೊಸ ದಾಖಲೆಗಳನ್ನು ಸೃಷ್ಟಿಸಿತು. ಈ ಸಿನಿಮಾ ಬಾಕ್ಸಾಫಿಸ್​ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಅಲ್ಲದೆ, ರಾಜಮೌಳಿ ನಿರ್ದೇಶನದ RRR ಸಿನಿಮಾ ಕೂಡ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಲ್ಲದೆ ಆಸ್ಕರ್ ಪ್ರಶಸ್ತಿಯನ್ನೂ ತಂದುಕೊಟ್ಟಿದೆ. ಹೀಗೆ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿರುವ ರಾಜಮೌಳಿ ಖ್ಯಾತಿ ಕೂಡ ಬಾನೆತ್ತರಕ್ಕೆ‌ ಸಾಗಿದೆ. ಬಾಲಿವುಡ್ ಸ್ಟಾರ್‌ಗಳು ಸೇರಿದಂತೆ ಖ್ಯಾತ ಸ್ಟಾರ್ ನಟರು ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ನಟಿಸಲು ಕಾಯುತ್ತಿದ್ದಾರೆ. ಆದರೆ, ರಾಜಮೌಳಿ ಈ ನಟನಿಗಾಗಿ ದಶಕಗಳಿಂದ ಕಾಯ್ತಿದ್ದಾರೆ!. ಹಾಗಾದ್ರೆ ನಿರ್ದೇಶಕರು ಕಾಯುತ್ತಿರುವ ನಟ ಯಾರು?

ರಾಜಮೌಳಿ ಪ್ರತಿ ಬಾರಿ ಸಿನಿಮಾ ಮಾಡುವಾಗಲೂ ಆ ನಟನಿಗೆ ಒಂದು ಪಾತ್ರ ಸಿದ್ಧಪಡಿಸುತ್ತಿದ್ದಾರಂತೆ. ಸಿನಿ ಜಗತ್ತು ರಾಜಮೌಳಿಗಾಗಿ ಕಾಯುವಾಗ, ರಾಜಮೌಳಿ ಆ ಸೂಪರ್ ಸ್ಟಾರ್ ಕಾಲ್‌ಶೀಟ್‌ಗಾಗಿ ದಶಕಗಳಿಂದ ಕಾಯ್ತಿದ್ದಾರೆ. ಆ ನಟ ಯಾರು? ಬೇರಾರು ಅಲ್ಲ ಅವರು ಮಾಲಿವುಡ್ ಸ್ಟಾರ್ ಮೋಹನ್​ ಲಾಲ್. ಹೌದು, ಮೋಹನ್‌ ಲಾಲ್ ನಟನೆ ಅಂದರೆ ರಾಜಮೌಳಿಗೆ ಬಹಳ ಇಷ್ಟವಂತೆ. ಪ್ರತಿ ಬಾರಿ ಸಿನಿಮಾ ಮಾಡುವಾಗಲೂ ಮೋಹನ್‌ ಲಾಲ್‌ಗಾಗಿ (mohan lal) ಒಂದು ಪಾತ್ರ ಸಿದ್ಧಪಡಿಸುತ್ತಿದ್ದಾರೆ‌. ಆದರೆ ಕಾರಣಾಂತರಗಳಿಂದ ಡೇಟ್ಸ್‌ ಸಿಗದೇ ಆ ಪಾತ್ರಗಳು ಬೇರೆಯವರ ಪಾಲಾಗುತ್ತಿದೆ.

Rajamouli
Image Source: Onlookersmedia

 

ಮೋಹನ್​ ಲಾಲ್​ ನಟ, ನಿರ್ಮಾಪಕ, ಗಾಯಕ ಹಾಗೂ ನಿರೂಪಕರಾಗಿ ಸಿನಿರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ತಮ್ಮ ಅಭಿನಯದಿಂದಲೇ ಮಲಯಾಳಂ ಮಾತ್ರವಲ್ಲದೆ ಇತರೆ ಭಾಷೆಯ ಸಿನಿ ರಸಿಕರ ಮನಸ್ಸಿನಲ್ಲಿ ಮನೆ ಮಾಡಿಕೊಂಡಿದ್ದಾರೆ. ಮಲಯಾಳಂನ ಖ್ಯಾತ ನಟ ಮೋಹನ್​ ಲಾಲ್​ ಅವರು 340ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರಿಗಾಗಿ ರಾಜಮೌಳಿ ಕಾಯುತ್ತಿದ್ದಾರೆ.

ಇದೀಗ ರಾಜಮೌಳಿ ಸದ್ಯ ಮಹೇಶ್ ಬಾಬು (Mahesh Babu) ಸಿನಿಮಾ ನಿರ್ದೇಶನಕ್ಕೆ ಸಿದ್ಧತೆ ನಡೆಸಿದ್ದಾರೆ. ಮಹೇಶ್ ಬಾಬು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ‘ಗುಂಟೂರು ಖಾರಂ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಸಿನಿಮಾ ಸೆಟ್ಟೇರುವ ನಿರೀಕ್ಷೆಯಿದೆ. ಈ ಬಾರಿ ಒಂದು ಆಕ್ಷನ್ ಅಡ್ವೆಂಚರಸ್ ಕಥೆಯನ್ನು ಹೇಳಲು ಮೌಳಿ ಪ್ರಯತ್ನಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮೋಹನ್ ಲಾಲ್ ಕೂಡ ನಟಿಸಬಹುದು ಎಂಬ ಸುದ್ಧಿ ಹರಿದಾಡಿದೆ.

ಈ ಹಿಂದೆ ‘ಪುಲಿ ಮುರುಗನ್’ ಚಿತ್ರದಲ್ಲಿ ಮೋಹನ್ ಕಮಾಲ್ ಮಾಡಿದ್ದರು. ಈ ಸಿನಿಮಾದಲ್ಲಿ ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಸಂಬಂಧದ ಬಗ್ಗೆ ಪ್ರಮುಖವಾದ ಚಿತ್ರಿಸಲಾಗಿದೆ. ಈ ಸಿನಿಮಾ ಮಾಲಿವುಡ್ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಮೌಳಿ ಕೂಡ ಇಂತದ್ದೇ ಒಂದು ಸಿನಿಮಾ ಪ್ಲ್ಯಾನ್ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಮೋಹನ್ ಲಾಲ್‌ಗಾಗಿ ಒಂದು ಪಾತ್ರ ಡಿಸೈನ್ ಮಾಡುವ ಸಾಧ್ಯತೆಯಿದೆ.

ಮೋಹನ್​ ಲಾಲ್ ನಟನೆಯ ಲೂಸಿಫರ್ ಮಲಾಯಳಂ ಸಿನಿರಂಗದಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಆಗಿದೆ. ಈ ಚಿತ್ರ ಬಾಕ್ಸಾಫಿಸ್​ನಲ್ಲಿ ವಿಶ್ವದಾದ್ಯಂತ 200 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ ಚಿತ್ರ ಇದಾಗಿದೆ. ದುರಾಸೆ ಹಾಗೂ ರಾಜಕೀಯದ ಕಥಾ ಹಂದರ ಹೊಂದಿರುವ ಸಿನಿಮಾ ಇದಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 50 ಕೋಟಿ ಗಳಿಕೆ ಮಾಡಿದ ಮೊದಲ ಮಲಯಾಳಂ ಸಿನಿಮಾ ಆಗಿದೆ. ಇದರಲ್ಲಿ ಮೋಹನ್​ ಲಾಲ್​ ಜೊತೆಗೆ ವಿವೇಕ್​ ಒಬೆರಾಯ್​, ಮಂಜು ವಾರಿಯರ್​ ಹಾಗೂ ಸಾಯಿ ಕುಮಾರ್ ನಟಿಸಿದ್ದಾರೆ.

ಇದನ್ನೂ ಓದಿ: Ration: ಜನತೆಗೆ ಸಿಹಿಸುದ್ದಿ ; ಜುಲೈ 1 ರಿಂದ 10 ಕೆಜಿ ಆಹಾರ ಧಾನ್ಯ ಲಭ್ಯ!!