Home Breaking Entertainment News Kannada Sumalatha Ambareesh : ಸುಮಲತಾ ಅಂಬರೀಶ್‌ ಅವರು ಒಂದು ಸಿನಿಮಾಗೆ ಪಡೆಯುವ ಸಂಭಾವನೆ ವಿವರ ಕೇಳಿದರೆ...

Sumalatha Ambareesh : ಸುಮಲತಾ ಅಂಬರೀಶ್‌ ಅವರು ಒಂದು ಸಿನಿಮಾಗೆ ಪಡೆಯುವ ಸಂಭಾವನೆ ವಿವರ ಕೇಳಿದರೆ ಖಂಡಿತ ಬೆಚ್ಚಿ ಬೀಳ್ತೀರ!

Sumalatha Ambareesh

Hindu neighbor gifts plot of land

Hindu neighbour gifts land to Muslim journalist

Sumalatha Ambareesh: ದಕ್ಷಿಣ ಭಾರತ ಚಲನಚಿತ್ರರಂಗದ ಹೆಸರಾಂತ ತಾರೆ ಎಂದು ಹೆಸರು ಪಡೆದ ಸುಮಲತಾ(Sumalatha) ಅವರು ಕನ್ನಡ, ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದೆ ಭಾಷೆಯಲ್ಲಿ ಒಟ್ಟು 220ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಸಾಕಷ್ಟು ದಿಗ್ಗಜ ಕಲಾವಿದರೊಂದಿಗೆ ಬಣ್ಣ ಹಚ್ಚಿರುವ ಖ್ಯಾತಿ ಹೊಂದಿರುವ ಸುಮಲತಾ ಅಂಬರೀಶ್(Sumalatha Ambareesh) ರವರು ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್(Rebel Star Ambareesh) ರವರ ನಡುವೆ ಪ್ರೇಮಾಂಕುರವಾಗಿ ಮದುವೆಯಾಗಿದ್ದಾರೆ. ಸುಮಲತಾ ಅಂಬರೀಶ್ ಅವರು ಸಿನಿಮಾಗಳಲ್ಲಿ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ನಟ ಅಂಬರೀಶ್(Ambareesh) ಅವರು ನಿಧನರಾದ ಸಂದರ್ಭ ಕನ್ನಡ ಚಿತ್ರರಂಗ ಅಮೂಲ್ಯ ರತ್ನವನ್ನು ಕಳೆದುಕೊಂಡಿತ್ತು. ಮಂಡ್ಯದ ಮಣ್ಣಿನ ಮಗ ಎಂದೇ ಪ್ರಖ್ಯಾತಿ ಪಡೆದಿದ್ದ ಅಂಬಿ ಅವರ ಸ್ಥಾನವನ್ನು ಜೊತೆಗೆ ಜವಾಬ್ದಾರಿಯನ್ನು ಸುಮಲತಾ ಅವರು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇದರ ಜೊತೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಿ ವಿಜೇತರಾದ ಮೊದಲ ಕರ್ನಾಟಕದ ಸಂಸದೆ ಎಂಬುದು ಕೂಡ ವಿಶೇಷ.

ಕನ್ನಡದ ಮೇರು ನಟರ ಜೊತೆಗೆ ಸಿನಿಮಾಗಳಲ್ಲಿ ನಟಿಸಿರುವ ಸುಮಲತಾ ಅವರು ಪೋಷಕ ನಟಿಯಾಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ನಟಿ ಸುಮಲತಾ ಅಂಬರೀಶ್ ರವರು ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು ಎಂಬ ಕುತೂಹಲ ಸಹಜವಾಗಿ ಎಲ್ಲರಿಗೂ ಮೂಡುತ್ತದೆ. ಸುಮಲತಾ ಅವರು ಪ್ರತಿ ಸಿನಿಮಾಗಳ ಚಿತ್ರೀಕರಣದಲ್ಲಿ 30 ರಿಂದ 35 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ. ಮಗ ಅಭಿಷೇಕ್ ಅಂಬರೀಶ್(Abhishek Ambareesh) ಅವರು ಕೂಡ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಟಿ ಸುಮಲತಾ ಅವಕಾಶ ದೊರೆತ ಸಂದರ್ಭ ಪೋಷಕ ನಟಿಯಾಗಿ ಕೂಡ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಇದರ ನಡುವೆ ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾಯಿತ ಪ್ರತಿನಿಧಿಯಾಗಿ ಜೊತೆಗೆ ಲೋಕಸಭೆಯಲ್ಲಿ ಮಂಡ್ಯ ಜನತೆಯ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದಾರೆ