Home Breaking Entertainment News Kannada ಸಾಮಾಜಿಕ ಜಾಲತಾಣಕ್ಕೆ ಗುಡ್ ಬೈ ಹೇಳಿದ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ !! | ನಟಿಯ...

ಸಾಮಾಜಿಕ ಜಾಲತಾಣಕ್ಕೆ ಗುಡ್ ಬೈ ಹೇಳಿದ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ !! | ನಟಿಯ ಈ ನಿರ್ಧಾರಕ್ಕೆ ಕಾರಣ !?

Hindu neighbor gifts plot of land

Hindu neighbour gifts land to Muslim journalist

ಕರಾವಳಿ ಬೆಡಗಿ ನಟಿ ಶಿಲ್ಪಾ ಶೆಟ್ಟಿ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರಾಯ 40 ದಾಟಿದರೂ ಇನ್ನು ಕೂಡ ಟೀನೇಜ್ ಹುಡುಗಿಯಂತೆ ಮೈಮಾಟ ಹೊಂದಿರುವ ನಟಿ ಈಗಲೂ ತುಂಬಾ ಫೇಮಸ್ಸು. ಸಿನಿಮಾ ಜೊತೆಗೆ ರಿಯಾಲಿಟಿ ಶೋ ಅಂತಾ ಆಕ್ಟೀವ್ ಆಗಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ರು. ಅದ್ಯಾಕೋ ಸೋಷಿಯಲ್ ಮೀಡಿಯಾ ಮೇಲೆ ಶಿಲ್ಪಾ ಶೆಟ್ಟಿ ಬೇಸರ ಮಾಡಿಕೊಂಡಿದ್ದಾರೆ. ಇದೀಗ ದಿಢೀರ್ ಅಂತಾ ಸಾಮಾಜಿಕ ಜಾಲತಾಣದಿಂದ ಹೊರಗುಳಿಯುತ್ತೇನೆ ಅಂತಾ ಪೋಸ್ಟ್ ಮಾಡಿ, ಬ್ರೇಕ್ ತೆಗೆದುಕೊಂಡಿದ್ದಾರೆ.

ಸೆಲೆಬ್ರಿಟಿಗಳು ಅಭಿಮಾನಿಗಳ ಜೊತೆ ಕನೆಕ್ಟ್ ಆಗಲು ಸೋಶಿಯಲ್ ಮೀಡಿಯಾವನ್ನು ಹೆಚ್ಚು ಬಳಕೆ ಮಾಡುತ್ತಾರೆ. ಕೆಲವೊಮ್ಮೆ ಇದು ಅನಿವಾರ್ಯ ಕೂಡ ಆಗಿ ಬಿಡುತ್ತದೆ. ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದವರು. ಆದರೆ ಈಗ ಅವರು ಬ್ರೇಕ್ ತಗೆದುಕೊಂಡಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದು, ನಾನು ಹೊಸ ಅವತಾರವನ್ನು ಕಂಡುಕೊಳ್ಳುವವರೆಗೂ ಸೋಶಿಯಲ್ ಮೀಡಿಯಾದಿಂದ ದೂರವಿರಲು ನಿರ್ಧಾರ ಮಾಡಿದ್ದೇನೆ ಅಂತಾ ಬ್ಲಾಂಕ್‌ ಫೋಟೋ ಜೊತೆ ಪೋಸ್ಟ್‌ ಮಾಡಿದ್ದಾರೆ. ಶಿಲ್ಪಾರ ದಿಢೀರ್ ನಿರ್ಧಾರ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿದೆ.

ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ನಿರ್ಮಾಣ ವಿಚಾರದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲೂ ನಟಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದರು. ಇದೀಗ ಏಕಾಏಕಿ ಏನಾಯ್ತು ಅಂತಾ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಆದಷ್ಟು ಬೇಗ ಆಕ್ಟೀವ್ ಆಗಿ ಎಂದು ಅಭಿಮಾನಿಗಳು ಕೇಳಿಕೊಳ್ತಿದ್ದಾರೆ.