Home Breaking Entertainment News Kannada Yash- Shah Rukh Khan: ಯಶ್ ಮತ್ತು ಶಾರುಖ್ ಗೆ ಇರುವ ಹೋಲಿಕೆ ಏನು ಗೊತ್ತಾ?

Yash- Shah Rukh Khan: ಯಶ್ ಮತ್ತು ಶಾರುಖ್ ಗೆ ಇರುವ ಹೋಲಿಕೆ ಏನು ಗೊತ್ತಾ?

Yash- Shah Rukh Khan
Image source: FilmiBeat Kannada

Hindu neighbor gifts plot of land

Hindu neighbour gifts land to Muslim journalist

Yash- Shah Rukh Khan: ಬಾಲಿವುಡ್ ನಲ್ಲಿ ಮಿಂಚುತ್ತಿರುವ ಶಾರುಖ್ ಖಾನ್‌ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಅದಲ್ಲದೆ ಕೆಜಿಎಫ್‌ನೊಂದಿಗೆ ರಾತ್ರೋರಾತ್ರಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ ಕೂಡ ಖ್ಯಾತ ನಟರಾಗಿದ್ದಾರೆ. ಇವರಿಬ್ಬರಿಗೂ ದೇಶ ವಿದೇಶಗಳಲ್ಲಿಯೂ ಅಭಿಮಾನಿಗಳು ಇರುವುದು ನೂರಕ್ಕೆ ನೂರು ಖಂಡಿತಾ.

ಶಾರುಖ್ ಖಾನ್ ಅವರು ತಮ್ಮ ನಟನಾ ವೃತ್ತಿಜೀವನವನ್ನು ಟಿವಿ ಧಾರಾವಾಹಿ ‘ಫೌಜಿ’ ಮೂಲಕ ಪ್ರಾರಂಭಿಸಿದರು. ಇವರು ನಟಿಸಿದ ಧಾರಾವಾಹಿ ಬಹಳ ಜನಪ್ರಿಯವಾಯಿತು. ಅದರ ನಂತರ ಅವರು ಸರ್ಕಸ್, ವಾಗ್ಲೆ ಕಿ ದುನಿಯಾದಂತಹ ಇತರ ದೂರದರ್ಶನ ಕಾರ್ಯಕ್ರಮಗಳನ್ನು ಸಹ ಮಾಡಿದರು. SRK ಅವರ ಮೊದಲ ಚಿತ್ರ ದೀವಾನಾ, ಇದರಲ್ಲಿ ಅವರು ರಿಷಿ ಕಪೂರ್ ಜೊತೆ ನಟಿಸಿದರು. ದಿವ್ಯಾ ಭಾರತಿ ಈ ಚಿತ್ರದ ನಾಯಕಿ. ಆ ನಂತರ ಶಾರುಖ್ ಬಾಲಿವುಡ್ ನ ಕಿಂಗ್ ಆದರು.

ಇನ್ನು ಯಶ್ ಹೀರೋ ಆಗುವ ಮುನ್ನ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಆ ನಂತರ ಅವರು ಚಿತ್ರರಂಗಕ್ಕೆ ಬಂದು ತಮ್ಮ ಸಾಮರ್ಥ್ಯವನ್ನು ತೋರಿಸಿದರು.

ಯಶ್ ಕೆಜಿಎಫ್ ಸಿನಿಮಾ ರಿಲೀಸ್ ಆಗುವವರೆಗೂ ಸಾಮಾನ್ಯ ಹೀರೋ ಆಗಿದ್ದರು. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 1 ಸಿನಿಮಾ ಮೂಲಕ ಅವರು ಭಾರತೀಯ ಉದ್ಯಮದ ಚರ್ಚೆಯಾದರು. ಅವರು ಕೆಜಿಎಫ್ 2 ಮೂಲಕ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಸಂಚಲನವನ್ನು ಸೃಷ್ಟಿಸಿದರು. ಒಟ್ಟಾಗಿ ರೂ. 1200 ಕೋಟಿಗಳ ಒಟ್ಟು ಕಲೆಕ್ಷನ್‌ನೊಂದಿಗೆ ದಕ್ಷಿಣದಿಂದ ಈ ಸಾಧನೆ ಮಾಡಿದ ಮೂರನೇ ಚಿತ್ರ ಎಂಬ ಹೆಗ್ಗಳಿಕೆಗೆ ಕೆಜಿಎಫ್ ಪಾತ್ರವಾಯಿತು.

ಇನ್ನು ಯಶ್ ನೆಚ್ಚಿನ ನಟ ಶಾರುಖ್‌ ಖಾನ್. ಈ ಹಿಂದೆ ಸಾಕಷ್ಟು ಬಾರಿ ರಾಕಿಂಗ್ ಸ್ಟಾರ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಶಾರುಖ್‌ ಖಾನ್ ನನಗೆ ದೊಡ್ಡ ಇನ್‌ಸ್ಪಿರೇಶನ್ ಎಂದು ಯಶ್ ಸಂದರ್ಶನಗಳಲ್ಲಿ ಹೇಳಿದ್ದರು. ಆದರೆ ಈಗ ಅದೇ ಶಾರುಖ್‌, ನಟ ಯಶ್‌ ಅವರನ್ನು ಮೆಚ್ಚಿ ಕೊಂಡಾಡಿದ್ದು ಇದೆ. ಒಟ್ಟಿನಲ್ಲಿ ಶಾರುಖ್‌ ಖಾನ್ ಮತ್ತು ಯಶ್ (Yash- Shah Rukh Khan) ಇಬ್ಬರಿಗೂ ಫೇಮ್ ಪಡೆಯುವಲ್ಲಿ ಸಾಮ್ಯತೆ ಇದೆ ಎನ್ನಬಹುದು.

ಇದನ್ನೂ ಓದಿ:Police Case: ತನ್ನ 6 ವರ್ಷದ ಮಗುವಿನ ಕಿಡ್ನ್ಯಾಪ್ ಕೇಸ್ ದಾಖಲಿಸಿದ ಪೋಷಕರು! ಅಷ್ಟಕ್ಕೂ ಮಗು ಎಲ್ಲಿತ್ತು ಗೊತ್ತಾ?