Home Breaking Entertainment News Kannada ಕ್ರಿಕೆಟ್ ಮಾಂತ್ರಿಕ ಶೇನ್ ವಾರ್ನ್ ತಂಗಿದ್ದ ಕೋಣೆಯಲ್ಲಿ ರಕ್ತದ ಕಣ ಪತ್ತೆ !! | ಈ...

ಕ್ರಿಕೆಟ್ ಮಾಂತ್ರಿಕ ಶೇನ್ ವಾರ್ನ್ ತಂಗಿದ್ದ ಕೋಣೆಯಲ್ಲಿ ರಕ್ತದ ಕಣ ಪತ್ತೆ !! | ಈ ಕುರಿತು ಪೊಲೀಸರು ಹೇಳಿದ್ದಾದರೂ ಏನು??

Hindu neighbor gifts plot of land

Hindu neighbour gifts land to Muslim journalist

ಗೂಗ್ಲಿ ಮಾಂತ್ರಿಕ, ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಸಾವು ಕ್ರಿಕೆಟ್ ಪ್ರೇಮಿಗಳಿಗೆ ಬರಸಿಡಿಲಿನಂತೆ ಬಡಿದಿದೆ. ಹೀಗಿರುವಾಗ ಆತ ತಂಗಿದ್ದ ಥಾಯ್ಲೆಂಡ್‍ನ ವಿಲ್ಲಾದ ಕೋಣೆಯಲ್ಲಿ ಮತ್ತು ಟವೆಲ್‍ನಲ್ಲಿ ರಕ್ತದ ಕಣ ಪತ್ತೆಯಾಗಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ವಾರ್ನ್ ಮಾರ್ಚ್ 3 ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಥಾಯ್ಲೆಂಡ್‍ನ ವಿಲ್ಲಾದಲ್ಲಿದ್ದ ವಾರ್ನ್‍ಗೆ ಏಕಾಏಕಿ ಹೃದಯಘಾತವಾಗಿದೆ. ಕೂಡಲೇ ಅಲ್ಲಿದ್ದವರು ಆಸ್ಪತ್ರೆಗೆ ಸಾಗಿಸಿದರೂ ಕೂಡ ಬದುಕುಳಿದಿರಲಿಲ್ಲ. ಈ ಬಗ್ಗೆ ಸ್ಥಳೀಯ ಮಾಧ್ಯವೊಂದರ ವರದಿ ಪ್ರಕಾರ, ವಾರ್ನ್ ಇದ್ದ ಕೋಣೆಯಲ್ಲಿ ರಕ್ತದ ಕಣಗಳು ಪತ್ತೆಯಾಗಿದ್ದು, ಸಿಪಿಆರ್ ಪರೀಕ್ಷೆ ನಡೆಸುವ ಸಂದರ್ಭ ವಾರ್ನ್ ಕೆಮ್ಮಿದಾಗ ರಕ್ತ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

ಥಾಯ್ಲೆಂಡ್ ಪೊಲೀಸರು ಈ ಹಿಂದೆ ವಾರ್ನ್ ಮರಣದ ಬಗ್ಗೆ ಯಾವುದೇ ಅನುಮಾನಗಳಿಲ್ಲ. ಹೃದಯಾಘಾತದಿಂದ ಮರಣ ಹೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆದರೂ ಇದೀಗ ತನಿಖೆ ನಡೆಯುತ್ತಿದೆ.

ಆಸ್ಟ್ರೇಲಿಯಾದ ತಂಡದಲ್ಲಿ ಗೂಗ್ಲಿ ಎಸೆತದ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ವಾರ್ನ್ ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ಹಲವು ತಂಡಗಳಿಗೆ ಕೋಚ್ ಮತ್ತು ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಐಪಿಎಲ್‍ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿ ಮೊಟ್ಟ ಮೊದಲ ಐಪಿಎಲ್‍ನಲ್ಲಿ ರಾಜಸ್ಥಾನ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಏರಿಸಿದ್ದರು.