Home Breaking Entertainment News Kannada Kapil Sharma: ಕಪಿಲ್ ಶರ್ಮಾ ಶೋ ದಲ್ಲಿ ಅಮೀರ್ ಖಾನ್ ಭಾಗವಹಿಸಲು ನಿರಾಕರಿಸಿದ್ದೇಕೆ! ಇವರಿಬ್ಬರ ನಡುವೆ...

Kapil Sharma: ಕಪಿಲ್ ಶರ್ಮಾ ಶೋ ದಲ್ಲಿ ಅಮೀರ್ ಖಾನ್ ಭಾಗವಹಿಸಲು ನಿರಾಕರಿಸಿದ್ದೇಕೆ! ಇವರಿಬ್ಬರ ನಡುವೆ ಇರುವ ಆ ಮನಸ್ತಾಪ ಆದರು ಏನು!

Kapil Sharma
Image source: Koimoi. Com

Hindu neighbor gifts plot of land

Hindu neighbour gifts land to Muslim journalist

Kapil sharma: ಕಪಿಲ್ ಶರ್ಮಾ ಅವರ ‘ದಿ ಕಪಿಲ್ ಶರ್ಮಾ’ ಕಾರ್ಯಕ್ರಮ ಬಹಳ ಸ್ಪೆಷಲ್ ಎಂಬುದು ನಮಗೆ ಗೊತ್ತಿರುವ ವಿಚಾರ. ಯಾಕೆಂದರೆ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಲ್ಲಿ ಪ್ರಸಾರವಾಗುವ ಭಾರತೀಯ ಹಿಂದಿ ಭಾಷೆಯ ಸ್ಟ್ಯಾಂಡ್-ಅಪ್ ಕಾಮಿಡಿಮತ್ತು ಟಾಕ್ ಶೋ ನಲ್ಲಿ ಬಹುತೇಕ ಬಾಲಿವುಡ್ ನಟ ನಟಿಯರು ಭಾಗವಹಿಸಿದ್ದಾರೆ. ಆದರೆ ಇಲ್ಲಿಯವರೆಗೂ ಅಮೀರ್ ಖಾನ್ ಮಾತ್ರ ಕಪಿಲ್ ಶರ್ಮಾ ಶೋ ದಲ್ಲಿ ಭಾಗಿಯಾಗಿಲ್ಲ! ಇದಕ್ಕೆ ಕಾರಣ ಆದರು ಏನಿರಬಹುದು ನೋಡೋಣ.

ಈಗಾಗಲೇ ಅಮೀರ್ ಖಾನ್ ಅವರನ್ನು ಕಪಿಲ್ ( Kapil sharma) ತಮ್ಮ ಶೋಗೆ ಆಹ್ವಾನಿಸಿಯೇ ಇಲ್ಲ ಎನ್ನುವ ಗಾಸಿಪ್ ಎಲ್ಲೆಡೆ ಹರಡಿತ್ತು. ಇದಕ್ಕೆಲ್ಲಾ ಉತ್ತರ ಇಲ್ಲಿದೆ!
ಹೌದು, ಇತ್ತೀಚಿಗೆ ಅಮೀರ್ ಖಾನ್ ಮತ್ತು ಕಪಿಲ್ ಇಬ್ಬರೂ ನಾಯಕರು ಎದುರು ಬದುರಾದಾಗ ತಮ್ಮನ್ನು ಇಲ್ಲಿಯವರೆಗೆ ಯಾಕೆ ಶೋಗೆ ಕರೆದಿಲ್ಲ ಎನ್ನುವ ಪ್ರಶ್ನೆಯನ್ನು ಸ್ವತಃ ಅಮಿತ್ ಖಾನ್ ಕೇಳಿದ್ದಾರೆ. ಅಮೀರ್ ಖಾನ್ ಪ್ರಶ್ನೆಗೆ ಕಪಿಲ್ ಉತ್ತರವನ್ನು ಕೂಡಾ ನೀಡಿದ್ದಾರೆ

ಅಮೀರ್ ಖಾನ್ ಇತ್ತೀಚೆಗೆ ತಮ್ಮ ಸ್ನೇಹಿತ ಪಂಜಾಬಿ ನಟ ಗಿಪ್ಪಿ ಗ್ರೆವಾಲ್ ಅವರ ಕ್ಯಾರಿ ಆನ್ ಜಟ್ಟಾ 3 ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಆ ಸಮಾರಂಭದಲ್ಲಿ ಕಾಮಿಡಿ ಕಿಂಗ್ ಕಪಿಲ್ ಶರ್ಮಾ ಕೂಡಾ ಇದ್ದರು . ಹೀಗಾಗಿ ಇಬ್ಬರೂ ಈ ಕಾರ್ಯಕ್ರಮದಲ್ಲಿ ಮುಖಾಮುಖಿಯಾಗಿದ್ದು, ಮಾತ್ರವಲ್ಲದೆ ಅಮೀರ್ ಮತ್ತು ಕಪಿಲ್ ಪರಸ್ಪರ ತುಂಬಾ ಹೊತ್ತಿನವರೆಗೆ ಮಾತನಾಡಿದ್ದಾರೆ. ಈ ಮಾತುಕತೆ ವೇಳೆ ಅಮೀರ್ ಖಾನ್ ಕಪಿಲ್ ಶರ್ಮಾ ತಮ್ಮನ್ನು ಶೋಗೆ ಆಹ್ವಾನಿಸುವುದೇ ಇಲ್ಲ ಎನ್ನುವ ಬಗ್ಗೆ ದೂರಿದ್ದಾರೆ .

‘ನಾನು ಕಪಿಲ್ ಅವರ ಅಭಿಮಾನಿ. ಆದರೆ ಅವರ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಲೇ ಇಲ್ಲ. ನನ್ನ ವಾರಾಂತ್ಯದ ಸಂಜೆಯನ್ನು ಕಪಿಲ್ ವರ್ಣರಂಜಿತವಾಗಿಸಿದ್ದಾರೆ. ಆದರೆ ಇದುವರೆಗೆ ನನ್ನನ್ನು ಅವರ ಕಾರ್ಯಕ್ರಮಕ್ಕೆ ಮಾತ್ರ ಆಹ್ವಾನಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಅಮೀರ್ ಖಾನ್.

ಅಲ್ಲದೆ ಕಪಿಲ್ ಕಾರ್ಯಕ್ರಮ ನೋಡಿ ನಾನು ಹೊಟ್ಟೆ ತುಂಬಾ ನಕ್ಕಿದ್ದೇನೆ. ಬಹಳ ಮನೋರಂಜನೆ ಆಗಿದೆ. ತಮ್ಮ ಕಾರ್ಯಕ್ರಮದ ಮೂಲಕ ಜನರನ್ನು ನಕ್ಕು ನಗಿಸುವುದಕ್ಕಾಗಿ ಕಪಿಲ್ ಗೆ ಕೆಲ ದಿನಗಳ ಹಿಂದಷ್ಟೇ ಫೋನ್ ಮಾಡಿ ಥ್ಯಾಂಕ್ಸ್ ಕೂಡಾ ಹೇಳಿದ್ದೇನೆ ಎಂದಿದ್ದಾರೆ ಅಮೀರ್ ಖಾನ್.

ಒಟ್ಟಿನಲ್ಲಿ ಕಪಿಲ್ ಅವರ ಅಪಾರ ಅಭಿಮಾನಿಗಳಲ್ಲಿ ನಾನು ಕೂಡಾ ಒಬ್ಬ. ಆದರೆ ಇದುವರೆಗೆ ನನಗೆ ಅವರ ಕಾರ್ಯಕ್ರಮಕ್ಕೆ ಆಹ್ವಾನ ಇಲ್ಲ ಎನ್ನುವುದು ಮಾತ್ರ ಬೇಸರದ ಸಂಗತಿ ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಕಪಿಲ್ ‘ನೀವು ನಮ್ಮ ಕಾರ್ಯಕ್ರಮಕ್ಕೆ ಬರುವುದೆಂದರೆ ನಾವು ನಿಜಕ್ಕೂ ಅದೃಷ್ಟಶಾಲಿಗಳು. ನಾವು ಇಲ್ಲಿಯವರೆಗೆ ಸಭೆ ಸಮಾರಂಭ ಗಳಲ್ಲಿಯೇ ಪರಸ್ಪರ ಭೇಟಿಯಾಗಿದ್ದೇವೆ. ಸುಮಾರು 3 ವರ್ಷಗಳ ನಂತರ ಈ ಸಮಾರಂಭದ ಮೂಲಕ ಭೇಟಿಯಾಗುತ್ತಿದ್ದೇವೆ. ಇನ್ನು ನಮ್ಮ ಶೋಗೆ ನಾವು ನಿಮ್ಮನ್ನು ಆಹ್ವಾನಿಸಿದ್ದೆವು, ಆದರೆ ಮತ್ತೆ ಬಂದು ಮಾತನಾಡುವುದಾಗಿ ನೀವೇ ಹೇಳಿದ್ದಿರಿ ಎಂದು ಕಪಿಲ್ ಅಮೀರ್ ಖಾನ್ ಗೆ ಉತ್ತರಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಅಮೀರ್ ಖಾನ್- ‘ನೀವು ಚಿತ್ರದ ಪ್ರಚಾರಕ್ಕೆ ಕರೆದಿದ್ದಿರಿ. ಆದರೆ ಚಿತ್ರದ ಪ್ರಚಾರಕ್ಕಾಗಿ ನಾವು ಬರುವುದಿಲ್ಲ. ನನಗೆ ಏನಿದ್ದರು ಮನರಂಜನೆ ಬೇಕು ಅಷ್ಟೇ. ಮನರಂಜನೆಗಾಗಿ ನಾನು ನಿಮ್ಮ ಕಾರ್ಯಕ್ರಮಕ್ಕೆ ಬರಬೇಕು ಎಂದುಕೊಂಡಿದ್ದೇನೆ ಎಂದರು.

ಸದ್ಯ ಶೀಘ್ರದಲ್ಲಿ ‘ದಿ ಕಪಿಲ್ ಶರ್ಮಾ’ ಶೋ ದಲ್ಲಿ ಅಮೀರ್ ಖಾನ್ ಜೊತೆಗೆ ಮನೋರಂಜನೆ ನೀಡಲು ಕಪಿಲ್ ಎಂಟ್ರಿ ನೀಡಬಹುದು ಎಂಬ ನಿರೀಕ್ಷೆಯೊಂದಿಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ: Husband – wife: ಸುಂದರ ಪತ್ನಿಯ ಮುಖದಲ್ಲಿ ಮೂಡಿದ ಗೆರೆಗಳು: ಅಷ್ಟಕ್ಕೇ ವಿಚಲಿತನನಾದ ಗಂಡ ಕೊಟ್ಟ ಡೈವೋರ್ಸ್ !