Home Breaking Entertainment News Kannada ರಿಯಾಲಿಟಿ ಶೋ ಒಂದರಲ್ಲಿ ಸ್ಪರ್ಧಿಯ ಕೆನ್ನೆಗೆ ಕಿಸ್ ಕೊಟ್ಟ ಖ್ಯಾತ ನಟಿ!!!ಕಿಸ್ ಸಾಲದೆಂದು ಕೆನ್ನೆ ಕಚ್ಚಿ...

ರಿಯಾಲಿಟಿ ಶೋ ಒಂದರಲ್ಲಿ ಸ್ಪರ್ಧಿಯ ಕೆನ್ನೆಗೆ ಕಿಸ್ ಕೊಟ್ಟ ಖ್ಯಾತ ನಟಿ!!!ಕಿಸ್ ಸಾಲದೆಂದು ಕೆನ್ನೆ ಕಚ್ಚಿ ಎಳೆದಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್

Hindu neighbor gifts plot of land

Hindu neighbour gifts land to Muslim journalist

ವಾರಂತ್ಯದಲ್ಲಿ ಬರುವ ರಿಯಾಲಿಟಿ ಶೋ ಗಳನ್ನು ಮಿಸ್ ಮಾಡದೇ ನೋಡುವ ಅದೆಷ್ಟೋ ವೀಕ್ಷಕರು ಇದ್ದಾರೆ. ಇಂತಹ ರಿಯಾಲಿಟಿ ಶೋ ಗಳು ಹೆಚ್ಚು ವೀಕ್ಷಣೆ ಪಡೆಯಲು ಒಂದು ಕಾರಣ ಕೂಡಾ ಇದ್ದು,ನಿರೂಪಕರು, ತೀರ್ಪುಗಾರರು ನಗುವ, ಅಳುವ ದೃಶ್ಯಗಳಿಂದ ಹೆಚ್ಚು ಜನಮನ್ನಣೆ ಗಳಿಸುತ್ತವೆ.

ಸದ್ಯ ಇಂತಹುದೆ ಒಂದು ರಿಯಾಲಿಟಿ ಶೋ ನಲ್ಲಿ ತೀರ್ಪುಗಾರ್ತಿಯೊಬ್ಬರು ಸ್ಪರ್ಧಿಯೊಬ್ಬನನ್ನು ಪ್ರೋತ್ಸಾಹಿಸುವ ಸಲುವಾಗಿ ಆತನ ಕೆನ್ನೆಗೆ ಕಿಸ್ ಕೊಟ್ಟು,ಸಾಲದೇ ಕೆನ್ನೆಗೆ ಕಚ್ಚಿದ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಖ್ಯಾತ ನಟಿಯಾದ ಶಮ್ನ ಕಾಸಿಂ ಅವರು ಖಾಸಗಿ ಚಾನೆಲ್ ಒಂದರಲ್ಲಿ ನಡೆಯುವ ‘ಧೀ ಚಾಂಪಿಯನ್’ಎಂಬ ರಿಯಾಲಿಟಿ ಶೋ ಒಂದರಲ್ಲಿ ತೀರ್ಪುಗಾರ್ತಿಯಾಗಿ ಕಾಣಿಸಿಕೊಂಡಿದ್ದು, ಆ ಸ್ಪರ್ಧೆಯಲ್ಲಿ ನೃತ್ಯ ಮಾಡಿದ ಯುವಕನೋರ್ವನ ನೃತ್ಯಕ್ಕೆ ಖುಷಿಯಾಗಿ ಆತನನ್ನು ತನ್ನ ಪಕ್ಕಕ್ಕೆ ಕರೆದು ಕಿಸ್ ಕೊಟ್ಟದಲ್ಲದೇ, ಆತನ ಕೆನ್ನೆಯನ್ನು ಕಚ್ಚಿ ಎಳೆದಿದ್ದಾರೆ.

https://twitter.com/chettyrajubhai/status/1438739114547834881?s=20

ಸದ್ಯ ಈ ಕಿಸ್ಸಿಂಗ್ ವೀಡಿಯೋ ತುಣುಕು ಆ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಈ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ. ತೀರ್ಪುಗಾರರು ಸ್ಪರ್ಧಿಗಳ ಬೆನ್ನುತಟ್ಟಿ, ಚಪ್ಪಾಳೆಯ ಮೂಲಕ ಪ್ರೋತ್ಸಹಿಸಬೇಕೇ ವಿನಃ ಕಿಸ್ ಕೊಟ್ಟು, ಮುದ್ದು ಮಾಡಿ ಪ್ರೋತ್ಸಾಹಿಸುವ ಅಗತ್ಯವೇನಿದೆ, ಇಂತಹ ತೀರ್ಪುಗಾರರಿಂದ ಶೋ ಗಳಿಗೆ ಕೆಟ್ಟ ಹೆಸರು ಬರುತ್ತದೆ ಎಂದೆಲ್ಲಾ ಆಕ್ರೋಶ ಹೊರಹಾಕಿದ್ದಾರೆ.