Home Breaking Entertainment News Kannada cricketer Shubman gill : ನನಗೆ ರಶ್ಮಿಕಾ ಮೇಲೆ ಕ್ರಶ್‌ ಇಲ್ಲ – ಶುಭ್‌ಮನ್‌ ಗಿಲ್‌...

cricketer Shubman gill : ನನಗೆ ರಶ್ಮಿಕಾ ಮೇಲೆ ಕ್ರಶ್‌ ಇಲ್ಲ – ಶುಭ್‌ಮನ್‌ ಗಿಲ್‌ ಉವಾಚ

Hindu neighbor gifts plot of land

Hindu neighbour gifts land to Muslim journalist

cricketer Shubman gill : ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಇರುವ ಹಾಗೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಸಿನಿಮಾದಲ್ಲೂ ಫುಲ್ ಬ್ಯುಸಿಯಾಗಿದ್ದಾರೆ. ಹಲವಾರು ಸೂಪರ್ ಹಿಟ್ ಸಿನಿಮಾಗಳ ಮೂಲಕ ಸ್ಟಾರ್ ನಟಿ ಎನಿಸಿಕೊಂಡಿದ್ದಾರೆ. ಬಾಲಿವುಡ್(Bollywood), ಟಾಲಿವುಡ್(tollywood), ಕಾಲಿವುಡ್(kollywood) ಸೇರಿದಂತೆ ಹಲವು ಸಿನಿರಂಗದಲ್ಲಿ ನಟಿಸಿ ಸೈ ಎನಿಸಿಕೊಳ್ಳಲು ಮುಂದಾಗಿದ್ದಾರೆ.

ಸಾಕಷ್ಟು ಸಿನಿಮಾಗಳ‌ ಮೂಲಕ ಜನಪ್ರೀಯತೆ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಟ್ರೋಲ್ ಗಳಿಗೆ ಒಳಗಾಗುತ್ತಿದ್ದಾರೆ. ಏನೇ ಮಾಡಿದರೂ ಟ್ರೋಲ್(troll) ಆಗಿಬಿಡುತ್ತಾರೆ. ಸದ್ಯ ಹರಿದಾಡುತ್ತಿರುವ ಸುದ್ದಿ ಏನಂದ್ರೆ, ಕಳೆದ ಎರಡು ದಿನಗಳ ಹಿಂದೆ, “ರಶ್ಮಿಕಾ ಮಂದಣ್ಣ ನನ್ನ ಕ್ರಶ್” ಎಂದು ಯಂಗ್ ಕ್ರಿಕೆಟಿಗ ಶುಭ್‌ಮನ್ ಗಿಲ್ (cricketer Shubman gill)ಹೇಳಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು.

ಇದೀಗ ಈ ಸುದ್ದಿ ಕಂಡು ಟೀಮ್​ ಇಂಡಿಯಾ ಫ್ಯೂಚರ್​​​​ ಸ್ಟಾರ್​ ಶುಭ್​ಮನ್​ ಗಿಲ್ (Shubman Gill)​​​​​​​ ಶಾಕ್ ಆಗಿದ್ದಾರೆ. ಹೌದು, ಈ ವಿಚಾರ ಇದೀಗ ಗಿಲ್ ಗೆ ತಿಳಿದಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ವದಂತಿಗೆ ತೆರೆ ಎಳೆದಿದ್ದಾರೆ.

ಶುಭ್‌ಮನ್ ಗಿಲ್ ‘ರಶ್ಮಿಕಾ ಮಂದಣ್ಣ ನನ್ನ ಕ್ರಶ್’ ಎಂದು ಹೇಳಿದ್ದಾರೆ ಎಂಬುದನ್ನು ಇನ್‌ಸ್ಟಾಂಟ್ ಬಾಲಿವುಡ್ ಇನ್‌ಸ್ಟಾಗ್ರಾಂ(instant bollywood) ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಇದೀಗ ಆ ಪೋಸ್ಟ್ ನೋಡಿ ಗಿಲ್ ಗೆ ಆಶ್ಚರ್ಯವಾಗಿದೆ. ಅಲ್ಲದೆ, ಪೋಸ್ಟ್ ಗೆ ಕಾಮೆಂಟ್ ಮಾಡಿದ್ದು, ತಾನು ರಶ್ಮಿಕಾ ಮಂದಣ್ಣ ನನ್ನ ಕ್ರಶ್ ಎಂದು ಹೇಳಿಲ್ಲ. ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿ, ವದಂತಿಗೆ ತೆರೆ ಎಳೆದಿದ್ದಾರೆ.

ಕೆಲ ದಿನಗಳ ಹಿಂದೆ ಶುಭ್‌ಮನ್ ಹೆಸರಿನ ಜೊತೆಗೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್(Sachin Tendulkar) ಪುತ್ರಿ ಸಾರಾ(Sara) ಹೆಸರು ತಳುಕು ಹಾಕಿಕೊಂಡಿತ್ತು. ಲಂಡನ್‌(Landon) ಕೆಫೆವೊಂದರಲ್ಲಿ ಶುಭ್‌ಮನ್ ಗಿಲ್ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಅದೇ ಕೆಫೆಯಲ್ಲಿ ಸಾರಾ ಕ್ಲಿಕ್ಕಿಸಿಕೊಂಡಿದ್ದ ಫೋಟೋ ತೋರಿಸಿ ಕಾಪಿ ಎಂದಿದ್ದರು. ಇವರಿಬ್ಬರೂ ಒಟ್ಟಿಗೆ ಹೋಗಿದ್ದಾರೆ ಎಂಬ ಸುದ್ದಿ ಭಾರೀ ವೈರಲ್ ಆಗಿತ್ತು. ಈ ಬಗ್ಗೆ ಶುಭ್‌ಮನ್ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ರಶ್ಮಿಕಾ ವಿಚಾರದಲ್ಲಿ ಗಿಲ್ ಪ್ರತಿಕ್ರಿಯೆ ನೀಡಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಸದ್ಯ ರಶ್ಮಿಕಾ ವಿಚಾರದ ಗಾಸಿಪ್ ಗೊಂದಲ ಮರೆಯಾಯಿತು.

ಇದನ್ನೂ ಓದಿ :Rashmika Mandanna : ಈ ಯುವ ಕ್ರಿಕೆಟಿಗನಿಗೆ ನಟಿ ರಶ್ಮಿಕಾ ಮೇಲೆ ಬೇಜಾನ್‌ ಕ್ರಶ್‌ ಅಂತೆ! ಯಾರೀ ಸ್ಟಾರ್‌ ಕ್ರಿಕೆಟಿಗ?