Home Breaking Entertainment News Kannada ರಕ್ಷಿತ್ ಶೆಟ್ಟಿಯ ಮುಂದಿನ ಸಿನಿಮಾದಲ್ಲಿ ನಟಿಸಲು ಬಯಸಿದ್ದೀರಾ!?? ಯುವ ಪ್ರತಿಭೆಗಳಿಗೆ ಇಲ್ಲಿದೆ ಅವಕಾಶ

ರಕ್ಷಿತ್ ಶೆಟ್ಟಿಯ ಮುಂದಿನ ಸಿನಿಮಾದಲ್ಲಿ ನಟಿಸಲು ಬಯಸಿದ್ದೀರಾ!?? ಯುವ ಪ್ರತಿಭೆಗಳಿಗೆ ಇಲ್ಲಿದೆ ಅವಕಾಶ

Hindu neighbor gifts plot of land

Hindu neighbour gifts land to Muslim journalist

ರಕ್ಷಿತ್ ಶೆಟ್ಟಿ ಸದ್ಯ ಸಾಂಡಲ್ ವುಡ್ ನಲ್ಲಿ ಹೆಚ್ಚು ಸುದ್ದಿಯಲ್ಲಿರುವ ನಟ. ಮೂಲತಃ ಉಡುಪಿಯವರಾದ ಶೆಟ್ಟಿ ತುಳುನಾಡಿನ ಆಚಾರ ವಿಚಾರಗಳ ಬಗೆಗೂ ಹೆಚ್ಚು, ಭಯ ಭಕ್ತಿ ಹೊಂದಿದವರು. ಕಳೆದ ವಾರವಷ್ಟೇ ತೆರೆಗೆ ಕಂಡ ಚಾರ್ಲಿ ಸಿನಿಮಾದ ಮೂಲಕ ಇನ್ನಷ್ಟು ಪ್ರಖ್ಯಾತಿ ಪಡೆದ ರಕ್ಷಿತ್ ಶೆಟ್ಟಿಯವರೊಂದಿಗೆ ಅಭಿನಯಿಸಬೇಕು, ಅಥವಾ ಒಂದು ಸೆಲ್ಫಿಯಾದರೂ ತೆಗೆದುಕೊಳ್ಳಬೇಕೆಂದು ಕಾತುರದಿಂದ ಕಾಯುತ್ತಿರುವ ಯುವ ಪ್ರತಿಭೆಗಳಿಗೆ ಇಲ್ಲಿದೆ ಸುವರ್ಣವಕಾಶ.

ರಕ್ಷಿತ್ ಶೆಟ್ಟಿ ನಟಿಸಿರುವ ಹಲವು ಸಿನಿಮಾಗಳನ್ನು ನಿರ್ಮಿಸಿರುವ ಪರಂವಾ ಸ್ಟುಡಿಯೋಸ್ ಯುವ ಪ್ರತಿಭೆಗಳ ಆಯ್ಕೆಗೆ ಮುಂದಾಗಿದೆ ಎನ್ನುವ ಮಾಹಿತಿಯೊಂದು ಮೂಲಗಳಿಂದ ಲಭಿಸಿದೆ. ಈಗಾಗಲೇ ಶೆಟ್ಟಿಯವರು ನಟಿಸಿ, ಹೆಚ್ಚು ಸುದ್ದಿ ಮಾಡಿದ ಕಿರಿಕ್ ಪಾರ್ಟಿ, ಸಕುಟುಂಬ ಸಮೇತ, ಅಬ್ರಕಡಬ್ರ, ಹಾಗೂ ಬಾಕ್ಸ್ ಆಫೀಸ್ ನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಚಾರ್ಲಿ ಸಿನಿಮಾಗಳನ್ನು ನಿರ್ಮಿಸಿದ ಕೀರ್ತಿಯಿರುವ ಪರಂವಾ ಸ್ಟುಡಿಯೋ ಯುವ ಪ್ರತಿಭೆಗಳಿಗೆ ಅಡಿಪಾಯ ಹಾಕಲು ಮುಂದಾಗಿರುವ ಸುದ್ದಿ ಸಾಮಾಜಿಕ ಜಾಲತಾಣಗಲ್ಲಿ ಸುದ್ದಿಯಾದ ಬೆನ್ನಲ್ಲೇ ಇದೊಂದು ಒಳ್ಳೆಯ ಅವಕಾಶ ಎನ್ನುವ ಮಾತುಗಳು ಕೇಳಿಬರುತ್ತಿವೆ.

https://www.instagram.com/p/Ce3ObThINr4/?utm_source=ig_web_copy_link

2015ರಲ್ಲಿ ಪ್ರಾರಂಭಗೊಂಡ ಪರಂವಾ ಸ್ಟುಡಿಯೋಸ್ ಯುವ ಪ್ರತಿಭೆಗಳನ್ನು ಗುರುತಿಸಿ, ಅವರಲ್ಲಿರುವ ಪ್ರತಿಭೆಗೆ ಉತ್ತಮ ತರಬೇತಿಯನ್ನು ನೀಡಿ, ಆ ಮೂಲಕ ಸಿನಿಮಾ ರಂಗದಲ್ಲಿ ಹೆಸರುಮಾಡಲು ವೇದಿಕೆ ನಿರ್ಮಿಸಿಕೊಡುತ್ತಿದೆ. ಅರ್ಹ ಪ್ರತಿಭೆಗಳು, ಅದರಲ್ಲೂ ರಕ್ಷಿತ್ ಶೆಟ್ಟಿಯ ಜೊತೆ ನಟಿಸಲು ಆಸಕ್ತಿರುವ ಪ್ರತಿಭೆಗಳು ಜೂನ್ 30ರ ಒಳಗಾಗಿ ರೆಸ್ಯೂಮ್ ಕಳುಹಿಸಲು ಕೋರಲಾಗಿದೆ.

ಜೊತೆಗೆ ನಿಮ್ಮ ಅನುಭವ ಹಾಗೂ ಸವಿವರಗಳನ್ನು ವೀಡಿಯೋ ಮಾಡಿ talents@paramvah.com ಗೆ ಮೇಲ್ ಮಾಡಬಹುದು.