Home Breaking Entertainment News Kannada Tanisha Kuppanda : ನಟಿ ತನಿಷಾ ಕುಪ್ಪಂಡ ಆರೋಪಕ್ಕೆ ಉತ್ತರ ಕೊಟ್ಟ ರಾಜಾಹುಲಿ ಹರ್ಷ! ಶಾಕಿಂಗ್...

Tanisha Kuppanda : ನಟಿ ತನಿಷಾ ಕುಪ್ಪಂಡ ಆರೋಪಕ್ಕೆ ಉತ್ತರ ಕೊಟ್ಟ ರಾಜಾಹುಲಿ ಹರ್ಷ! ಶಾಕಿಂಗ್ ಮಾಹಿತಿ ಬಹಿರಂಗ!

Actress Tanisha Kuppanda

Hindu neighbor gifts plot of land

Hindu neighbour gifts land to Muslim journalist

Tanisha Kuppanda : ನಟಿ ತನಿಷಾ ಕುಪ್ಪಂಡ (Actress Tanisha Kuppanda) ಅವರನ್ನು ಯೂಟ್ಯೂಬರ್ (Youtuber) ಒಬ್ಬ ಅಸಭ್ಯ ಪ್ರಶ್ನೆ (Questions)ಕೇಳಿದ ವಿಚಾರ ಎಲ್ಲೆಡೆ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ನಟ ರಾಜಾಹುಲಿ ಹರ್ಷ ಅವರ ಮೇಲೆ ಆರೋಪ ಮಾಡಿದ್ದರು. ಇದೀಗ, ತಮ್ಮ ಮೇಲಿನ ಆರೋಪಕ್ಕೆ ನಟ ರಾಜಾಹುಲಿ ಹರ್ಷ ಪ್ರತಿಕ್ರಿಯೆ ನೀಡಿದ್ದಾರೆ.

ತನಿಷಾ ಕುಪ್ಪಂಡ(Tanisha Kuppanda) ಪೆಂಟಗನ್ ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಪೆಂಟಗನ್(Pentagon Movie) ಸಿನಿಮಾದಲ್ಲಿ ಕಾಮನಬಿಲ್ಲು ಹೆಸರಿನ ಹಾಡೊಂದರಲ್ಲಿ ನಟಿ ತನಿಷಾ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಆ ಹಾಡು ವೈರಲ್ ಆದ ಬಳಿಕ ಆ ಯೂಟ್ಯೂಬರ್ ನಟಿಯ ಬಗ್ಗೆ ಅಸಭ್ಯವಾಗಿ ಪ್ರಶ್ನೆ ಕೇಳಿದ್ದ ಎನ್ನಲಾಗಿದೆ. ಕಳೆದ ಶುಕ್ರವಾರ ಪೆಂಟಗನ್ ಸಿನಿಮಾ ಬಿಡುಗಡೆ ಆಗಿದ್ದು ಆ ಹಾಡನ್ನು (Songs) ಸಿನಿಮಾದಲ್ಲಿ ಉಳಿಸಿಕೊಂಡಿಲ್ಲ ಎನ್ನಲಾಗಿದೆ. ತನಿಷಾ ಅವರನ್ನು ಸಂದರ್ಶನ ಮಾಡಿದ್ದ ಯೂಟ್ಯೂಬರ್ ಒಬ್ಬರು, ನೀವು ನೀಲಿ ಚಿತ್ರಗಳಲ್ಲಿ ನಟಿಸಲು ರೆಡಿಯಿದ್ದೀರಾ ಎಂದು ಪ್ರಶ್ನಿಸಿದ್ದು, ತನ್ನ ಬಗ್ಗೆ ಈ ರೀತಿ ಯಾಗಿ ಅಸಭ್ಯವಾಗಿ ಪ್ರಶ್ನೆ ಕೇಳಿದ ಯೂಟ್ಯೂಬರ್ ಅನ್ನು ನಟಿ ತನಿಷಾ ಅಲ್ಲಿಯೇ ಕ್ಲಾಸ್ ತೆಗೆದುಕೊಂಡು ನಂತರ ಯೂಟ್ಯೂಬರ್ ವಿರುದ್ಧ ಪೊಲೀಸ್ ಠಾಣೆ (Police Station)ಮೆಟ್ಟಿಲೇರಿದ ಘಟನೆ ಕೂಡ ನಡೆದಿತ್ತು.

ಈ ಘಟನೆ ನಡೆದ ಬಳಿಕ ಎರಡು ದಿನದ ನಂತರ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟಿ ತನಿಷಾ, ಆ ಘಟನೆಯ ಬಳಿಕ ತನಗೆ ಬೇಕಾದ ಆತ್ಮೀಯರೇ ಕೆಟ್ಟದಾಗಿ ಮಾತನಾಡುವಂತಾಗಿದೆ. ಚಿತ್ರರಂಗದ ನಟರೊಬ್ಬರು ನನ್ನ ಇನ್​ಸ್ಟಾಗ್ರಾಂ ಸ್ಟೋರಿಗೆ (Instagram Story)ರಿಪ್ಲೈ ಮಾಡಿ ಬ್ಲೂ ಫಿಲಂನಲ್ಲಿ (Blue Film)ನಟಿಸುತ್ತೀಯ? ಎಂದು ಕೇಳಿದ್ದು ಕೂಡ ಇದೆ ಎಂದು ಹೇಳಿಕೊಂಡಿದ್ದರು. ಯೂಟ್ಯೂಬರ್ ಕೇಳಿದ ಪ್ರಶ್ನೆಯಿಂದ ನೋವಾದರೂ ಕೂಡ ಅವನಾದರೂ ಹೊರಗಿನವರು ಎನ್ನಬಹುದು. ಆದರೆ, ಅವನಿಂದಾಗಿ ಈಗ ನಮ್ಮವರೇ ನನ್ನನ್ನು ಕೆಟ್ಟದಾಗಿ ಕಾಣುವ ಸ್ಥಿತಿ ನಿರ್ಮಾಣವಾಗಿದೆ. ಸಹನಟರೇ ಒಬ್ಬರು ನನ್ನನ್ನು ಬ್ಲೂ ಫಿಲಂನಲ್ಲಿ ನಟಿಸುತ್ತೀಯಾ ಎಂದು ಕೇಳಿ ಮೆಸೇಜ್ ಮಾಡಿದ್ದಾನೆ ಎಂದು ತನಿಷಾ ತಮ್ಮ ಅಳಲನ್ನು ತೋಡಿಕೊಂಡಿದ್ದರು.

ಈ ರೀತಿ, ನಟಿ ತನಿಷಾ ಅವರಿಗೆ ಪ್ರಶ್ನೆ ಮಾಡಿದ್ದು ಯಾರು?ಎಂದು ಕೇಳಿದ ಸಂದರ್ಭ ಆತ ಗುರುದೇಶಪಾಂಡೆ ಸಿನಿಮಾದಲ್ಲಿ ನಟಿಸಿದ್ದಾನೆ ಎಂದಷ್ಟೇ ಮಾಹಿತಿ ನೀಡಿದ್ದರು. ಪತ್ರಕರ್ತರ ಒತ್ತಾಯಕ್ಕೆ ಮಣಿದು ಹರ್ಷ ಅವರ ಹೆಸರನ್ನು ಹೇಳಿದ ನಟಿ ತನಿಶಾ ಅವರು ಇನ್​ಸ್ಟಾಗ್ರಾಂನಲ್ಲಿ ಹಾಕಿದ್ದ ಸ್ಟೋರಿಗೆ ಪ್ರತಿಕ್ರಿಯೆ ನೀಡಿ, ಬ್ಲೂ ಫಿಲಂನಲ್ಲಿ ನಟಿಸಿದ್ದೀಯ ಎಂದು ಮೆಸೇಜ್ ಮಾಡಿ, ಅದಕ್ಕೆ ಸ್ಮೈಲಿ ಇಮೇಜು ಬೇರೆ ಹಾಕಿದ್ದು, ತಾನು ಸ್ನೇಹಿತರು ಆಪ್ತರು ಅಂದುಕೊಂಡವರೇ, ಹೀಗೆ ಕೀಳುಮಟ್ಟದಲ್ಲಿ ನೋಡುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.

ಇದೀಗ, ತನಿಷಾ ತಮ್ಮ ವಿರುದ್ಧ ಮಾಡಿರುವ ಆರೋಪದ ಕುರಿತು ನಟ ಹರ್ಷಾ ಪ್ರತಿಕ್ರಿಯೆ ನೀಡಿದ್ದು, ನಾನು ಹಾಗೂ ತನಿಷಾ ಇಬ್ಬರೂ ಸ್ನೇಹಿತರಾಗಿದ್ದು, ನಮಗಿಬ್ಬರಿಗು ಒಳ್ಳೆಯ ಪರಿಚಯ, ಸ್ನೇಹ ಇದೆ. ನಾವು ಭೇಟಿ ಆದಾಗಲೆಲ್ಲ ಅವರು ನನ್ನನ್ನು, ನಾನು ಅವರು ನನ್ನನ್ನು ರೇಗಿಸುವುದು ಕೂಡ ಇದೆ. ನಮ್ಮ ನಡುವೆ ಒಳ್ಳೆಯ ಸ್ನೇಹವಿದ್ದು, ಆ ಒಂದು ಸಲುಗೆ ಮತ್ತು ಸದರದಿಂದ ನಾನು ಆ ವ್ಯಕ್ತಿ ಪ್ರಶ್ನೆ ಮಾಡಿದ್ದನ್ನು ಕೇಳಿ, ಈ ರೀತಿ ಪ್ರಶ್ನೆ ಕೇಳಿದ್ದಾನಲ್ಲ ಎಂದು ತಾನು ಕೂಡ ಅದೇ ಪ್ರಶ್ನೆ ಕೇಳಿದೆ. ಆದರೆ ಆ ವ್ಯಕ್ತಿಗೆ ಒಂದು ಕಾಮನ್‌ಸೆನ್ಸ್ ಬೇಡ್ವಾ ಎಂದು ಒಂದು ವಾಯ್ಸ್ ಮೆಸೇಜ್ ಅನ್ನು ಕೂಡ ಮಾಡಿದ್ದೆ ಜೊತೆಗೆ ಇದನ್ನು ನಾನು ನಗುತ್ತಾ ಕೇಳಿದೆ. ಸಾಮಾನ್ಯವಾಗಿ ಸ್ನೇಹಿತರು ಸೀರಿಯಸ್ ಆಗಿ ಏಕೆ ಮಾತನಾಡುತ್ತಾರೆ. ತಮಾಷೆಯಾಗಿ ಕೂಡ ಮಾತಾಡುತ್ತಾರೆ. ಅದೇ ರೀತಿ,ನಾನು ಕೇಳಿದ್ದು, ಆದರೆ ತನಿಷಾ ಅವರು ಅದನ್ನು ಸೀರಿಯಸ್ ಆಗಿ ತೆಗೆದುಕೊಂಡು ಇದನ್ನು ದೊಡ್ಡದಾಗಿ ಕಂಡುಬರುವಂತೆ ಹೇಳಿದ್ದಾರೆ. ಮನಸ್ಸಲ್ಲಿ ಒಂದು ಇಟ್ಟುಕೊಂಡು ಹೊರಗೊಂದು ಇಟ್ಟುಕೊಂಡು ಮಾತನಾಡಿಲ್ಲ ಎಂದು ಹರ್ಷ ಅವರು ಹೇಳಿದ್ದು, ಸದ್ಯ, ಹರ್ಷ ಅವರು ನೀಡಿರುವ ಹೇಳಿಕೆಗೆ ನಟಿ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಾಗಿದೆ.

 

ಇದನ್ನು ಓದಿ : Cooking Job : ಅಡುಗೆಯಲ್ಲಿ ಪರಿಣತಿ ಹೊಂದಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್!ಕುಕ್ ಕೆಲಸಕ್ಕೆ ಮಾಸಿಕ 32 ಸಾವಿರ ಸಂಬಳ!