Home Breaking Entertainment News Kannada Thalapathy Vijay: ರಾಜಕೀಯಕ್ಕೆ ಎಂಟ್ರಿ ಆಗ್ತಾರ ದಳಪತಿ ವಿಜಯ್: 234 ಕ್ಷೇತ್ರದಲ್ಲೂ ಸಂಚಲನ ಎಬ್ಬಿಸಲು ಕಾರಣ...

Thalapathy Vijay: ರಾಜಕೀಯಕ್ಕೆ ಎಂಟ್ರಿ ಆಗ್ತಾರ ದಳಪತಿ ವಿಜಯ್: 234 ಕ್ಷೇತ್ರದಲ್ಲೂ ಸಂಚಲನ ಎಬ್ಬಿಸಲು ಕಾರಣ ಆಗಿದೆ ಅದೊಂದು ಬೆಳವಣಿಗೆ!

Thalapathy Vijay
image source: Only kollywood

Hindu neighbor gifts plot of land

Hindu neighbour gifts land to Muslim journalist

Thalapathy Vijay: ತಮಿಳು ಚಿತ್ರರಂಗದ ಬಹುಬೇಡಿಕೆಯ ನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ಆದರೆ ರಾಜಕೀಯಕ್ಕೆ ಚಿತ್ರರಂಗದ ಪ್ರಮುಖರು ಎಂಟ್ರಿಕೊಡುವುದು ಹೊಸತೇನಲ್ಲ. ಅಂತೆಯೇ 2026ರ ವಿಧಾನಸಭಾ ಚುನಾವಣೆಗೆ  ದಳಪತಿ ವಿಜಯ್ (Thalapathy Vijay) ಕೂಡಾ ರಾಜಕೀಯಕ್ಕೆ ಎಂಟ್ರಿಕೊಡುವ ತಯಾರಿಯಲ್ಲಿದ್ದಾರೆ.

 

ಹೌದು, ಇತ್ತೀಚೆಗೆ ವಿಜಯ್ ರಾಜಕೀಯಕ್ಕೆ ಬರುತ್ತಾರೆ, 2026ರ ವಿಧಾನಸಭಾ ಚುನಾವಣೆಗೆ ಅವರು ಸಜ್ಜಾಗುತ್ತಿದ್ದಾರೆ ಎಂಬುದಕ್ಕೆ  ಪೂರಕವಾಗುವಂತಹ ಘಟನೆಗಳು ಕೂಡ ನಡೆಯುತ್ತಿವೆ. ಇತ್ತೀಚಿಗೆ ವಿಜಯ್ ಅವರು ಸಿನಿಮಾ ಕೆಲಸಗಳ ಜೊತೆ ಹೆಚ್ಚೆಚ್ಚು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ರಾಜಕೀಯ ನಾಯಕರ ಜೊತೆಯೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಿಂತಲೂ ಮುಖ್ಯವಾದ ಕೆಲಸ ಒಂದನ್ನು ಅವರು ಮಾಡುತ್ತಿದ್ದಾರೆ.

 

10ನೇ ತರಗತಿ ಹಾಗೂ 12ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಜೂನ್ 17 ರಂದು ಸನ್ಮಾನಿಸಲಾಗುತ್ತಿದೆ. ಚೆನ್ನೈ ನೀಲಗಿರಿಯ ಆರ್‌ಕೆ ಕನ್ವೆನ್ಷನ್ ಸೆಂಟರ್‌ನಲ್ಲಿ ಈ ಕಾರ್ಯಕ್ರಮಕ್ಕೆ ದೊಡ್ಡ ಮಟ್ಟದ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆ ಹಾಗೂ ತಾಲೂಕು ಎಂದು ಆಯ್ಕೆ ಮಾಡದೇ ದಳಪತಿ ವಿಜಯ್ ಅವರು 234 ವಿಧಾನಸಭಾ ಕ್ಷೇತ್ರವನ್ನು ಸೆಲೆಕ್ಟ್ ಮಾಡಿಕೊಂಡಿದ್ದಾರೆ. ಪ್ರತಿ ಕ್ಷೇತ್ರದ ಟಾಪ್ ಮೂವರಿಗೆ ಸನ್ಮಾನ ಮಾಡಲಾಗುತ್ತಿದೆ.

 

‘ವಿಜಯ್ ಮಕ್ಕಳ್ ಇಯಕ್ಕಮ್’ ಮೂಲಕ ಈ ಕಾರ್ಯಕ್ರಮ ನಡೆಯಲಿದ್ದು, ಪ್ರತಿ ಕ್ಷೇತ್ರದ ಟಾಪ್ 3 ವಿದ್ಯಾರ್ಥಿಗಳಿಗೆ ಬಹುಮಾನದ ಜೊತೆಗೆ ನಗದು ಪ್ರೋತ್ಸಾಹ ಧನವನ್ನೂ ನೀಡುವುದಾಗಿ ಈಗಾಗಲೇ ಘೋಷಿಸಲಾಗಿದೆ.

 

ಈ ಬೆಳವಣಿಗೆಗಳನ್ನು ಗಮನಿಸಿ ವಿಜಯ್ ಶೀಘ್ರದಲ್ಲೇ ರಾಜಕೀಯಕ್ಕೆ ಎಂಟ್ರಿ ನೀಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅದಕ್ಕಾಗಿಯೇ ಕ್ಷೇತ್ರ ಎಂಬ ಪದವನ್ನು ಪ್ರಸ್ತಾಪಿಸಲಾಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

 

ಇದನ್ನು ಓದಿ: White hair: ನಿಮ್ಮ ತಲೆಯಲ್ಲೂ ಬಿಳಿ ಕೂದಲು ಆಗಿದ್ಯಾ? ನಿಯಂತ್ರಣಕ್ಕೆಈ ಕ್ರಮಗಳನ್ನು ಅನುಸರಿಸಿ