Home Breaking Entertainment News Kannada ತಮ್ಮ ಮೇಲಿನ ಅವಮಾನಕಾರಿ ಹೇಳಿಕೆ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ಪವಿತ್ರ ಲೋಕೇಶ್ !!

ತಮ್ಮ ಮೇಲಿನ ಅವಮಾನಕಾರಿ ಹೇಳಿಕೆ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ಪವಿತ್ರ ಲೋಕೇಶ್ !!

Hindu neighbor gifts plot of land

Hindu neighbour gifts land to Muslim journalist

ಕಳೆದ ಒಂದು ವಾರದಿಂದ ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ ಅವರ ವೈಯಕ್ತಿಕ ಜೀವನದ ಕುರಿತಾಗಿ ಅಂತೆ-ಕಂತೆ ಕಥೆಗಳು ಕೇಳಿ ಬರುತ್ತಿವೆ. ಅದರಲ್ಲೂ ಅವರ ದಾಂಪತ್ಯ ಜೀವನ ಮುರಿದು ಬಿದ್ದಿದೆ ಎಂದು, ಅವರು ಮತ್ತೊಂದು ಮದುವೆ ಆಗಿದ್ದಾರೆ ಅಂತಲೋ ಜೊತೆಗೆ ತೆಲುಗಿನ ಖ್ಯಾತ ನಟ ನರೇಶ್ ಅವರೊಂದಿಗೆ ಮದುವೆ ಕೂಡ ಆಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ವಿಷಯಗಳು ಭಾರಿ ಚರ್ಚೆಯಲ್ಲಿದ್ದವು.

ಈ ಕುರಿತು ಇಷ್ಟು ದಿನ ಮೌನವಾಗಿದ್ದ ನಟಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅವಹೇಳನಕಾರಿ ಸುದ್ದಿ ಪ್ರಕಟಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೈಸೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ನಟಿ ದೂರು ದಾಖಲಿಸಿದ್ದಾರೆ.

ಪವಿತ್ರ ಲೋಕೇಶ್ ಅವರ ಹೆಸರಿನಲ್ಲೂ ಕೆಲವರು ನಕಲಿ ಖಾತೆಗಳನ್ನು ತೆರೆದಿದ್ದಾರಂತೆ. ಆ ಖಾತೆಗಳಲ್ಲಿ ಕಳೆದ ಎರಡು ವರ್ಷಗಳಿಂದ ಪತಿ ಸುಚೇಂದ್ರ ಪ್ರಸಾದ್ ಅವರ ಜೊತೆ ಪವಿತ್ರಾ ಲೋಕೇಶ್ ಇಲ್ಲವೆಂದು , ನರೇಶ್ ಅವರ ಜೊತೆ ಲೀವ್ ಇನ್ ಸಂಬಂಧ ಹೊಂದಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರಂತೆ. ಈ ಕುರಿತೂ ಅವರ ಸೈಬರ್ ಠಾಣೆಗೆ ದೂರು ದಾಖಲಿಸಿದ್ದಾರೆ. ಮೈಸೂರಿನ ಸೈಬರ್ ಪೊಲೀಸ್ ರು ಎಫ್‍ಐಆರ್ ಕೂಡ ದಾಖಲಿಸಿದ್ದಾರೆ.

ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಪವಿತ್ರಾ ಲೋಕೇಶ್, ಬಹುಬೇಡಿಕೆಯ ನಟಿ. ಅವರ ಬಾಳಲ್ಲಿ ದಾಂಪತ್ಯದ ಬಿರುಗಾಳಿ ಎದ್ದಿದೆ ಎಂದು ಹಲವು ದಿನಗಳಿಂದ ಸುದ್ದಿಗಳು ಹರಿದಾಡುತ್ತಿವೆ. ಅದಕ್ಕಾಗಿಯೇ ಅವರು ಸೈಬರ್ ಕ್ರೈಂ ಠಾಣೆಗೆ ಮೊರೆ ಹೋಗಿದ್ದಾರೆ.