Home Breaking Entertainment News Kannada Pathaan on OTT : ಒಟಿಟಿಗೆ ಯಲ್ಲಿ ಬಾದ್ ಶಾ ‘ಪಠಾನ್’ ಸಿನಿಮಾ! ಕಿಂಗ್ ಖಾನ್...

Pathaan on OTT : ಒಟಿಟಿಗೆ ಯಲ್ಲಿ ಬಾದ್ ಶಾ ‘ಪಠಾನ್’ ಸಿನಿಮಾ! ಕಿಂಗ್ ಖಾನ್ ಅಭಿಮಾನಿಗಳೇ, ಯಾವಾಗಿನಿಂದ, ಸ್ಟ್ರೀಮಿಂಗ್ ವೇದಿಕೆ ಯಾವುದು? ಇಲ್ಲಿದೆ ಮಾಹಿತಿ!

Pathaan on Ott

Hindu neighbor gifts plot of land

Hindu neighbour gifts land to Muslim journalist

Pathaan on Ott: ಬಾಲಿವುಡ್ ಎಂಬ ಕಲರ್‍‍‍ಫುಲ್ ದುನಿಯಾದಲ್ಲಿರುವ ಸೆಲಬ್ರಿಟಿಗಳಲ್ಲಿ ಕಿಂಗ್ ಖಾನ್ ಖ್ಯಾತಿಯ ಸೂಪರ್ ಸ್ಟಾರ್ ಶಾರುಖ್ ಖಾನ್ ಶ್ರೀಮಂತ ನಟರಲ್ಲಿ ಒಬ್ಬರು. ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರು ನಟನೆಯಿಂದ ನಾಲ್ಕು ವರ್ಷ ದೂರ ಇದ್ದರೂ ಕೂಡ ‘ಪಠಾಣ್​’ ಸಿನಿಮಾ (Pathaan Movie) ಮೂಲಕ ದೊಡ್ಡ ಪರದೆಗೆ ಕಂಬ್ಯಾಕ್ ಆಗಿದ್ದು ಗೊತ್ತಿರುವ ವಿಚಾರವೇ. ಇದರ ನಡುವೆ ಶಾರುಖ್ ಖಾನ್ ಫ್ಯಾನ್ಸ್ ದಿಲ್ ಖುಷ್ ಆಗೋ ಸಂಗತಿ ಕೂಡ ಹೊರಬಿದ್ದಿದೆ.

ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಸರಣಿ ಸೋಲಿನ ರುಚಿಯುಂಡ ನಟ ಸರಣಿ ಸಿನಿಮಾಗಳ ಸೋಲಿನಿಂದ ಕಂ ಬ್ಯಾಕ್ ಆಗಲು ಅವಕಾಶ ಕೊಟ್ಟಿದ್ದು ಶಾರುಖ್ ನಟನೆಯ ‘ಪಠಾಣ್’ ಚಿತ್ರ ಅಂದರೆ ತಪ್ಪಾಗದು. ವಿಶ್ವದಾದ್ಯಂತ ಜನವರಿ 25ರಂದು ಪಠಾಣ್ ‘(Pathaan) ಸಿನಿಮಾ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆ ಆಗಿ ಬಾಕ್ಸ್ ಆಫೀಸಲ್ಲಿ ದೊಡ್ಡ ಕಮಾಯಿ ಮಾಡಿತ್ತು. ದಿನಗಳೆದಂತೆ, ಬಾಕ್ಸ್ ಆಫೀಸ್ನಲ್ಲಿ ನೂರು, ಇನ್ನೂರು, ಐನೂರು, ಸಾವಿರ ಕೋಟಿ ಲೂಟಿ ಮಾಡಿ ದಾಖಲೆ ಬರೆದ ಚಿತ್ರ ಪಠಾಣ್ ಅನೇಕ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿದೆ. ಈ ಸಿನಿಮಾದ ಹವಾ ಇನ್ನೂ ಮುಂದುವರೆಯುತ್ತಿದೆ. ಇನ್ನೂ ಹಲವು ಚಿತ್ರಮಂದಿರಗಳಲ್ಲಿ ‘ಪಠಾಣ್’ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಗೆಲುವಿನ ನಾಗಾಲೋಟದಲ್ಲಿ ಮಿಂಚುತ್ತಿದೆ.

ಯಶ್ ರಾಜ್ ಫಿಲಂಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸಿದ್ಧಾರ್ಥ್ ಆನಂದ್ (Siddharth Anand )ನಿರ್ದೇಶನದ ‘ಪಠಾಣ್'(Pathaan) ಚಿತ್ರದಲ್ಲಿ ಶಾರುಖ್ ಖಾನ್(Shah Rukh Khan) ಜತೆಗೆ ದೀಪಿಕಾ ಪಡುಕೋಣೆ (Deepika Padukone)ಇವರಿಬ್ಬರ ಜೊತೆಗೆ ಜಾನ್ ಅಬ್ರಹಾಂ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. ಅದೇ ರೀತಿ ಅಶುತೋಷ್ ರಾಣಾ, ಡಿಂಪಲ್ ಕಪಾಡಿಯಾ ನಟಿಸಿದರೆ, ಸ್ಪೈ ಥ್ರಿಲ್ಲರ್ ಚಿತ್ರದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಗ್ರಾಂಡ್ ಎಂಟ್ರಿ ನೀಡಿದ್ದಾರೆ.

ಈ ಸಿನಿಮಾ ಇದೀಗ ಇಂದಿಗೆ 50ನೇ ದಿನವನ್ನು ಪೂರೈಸಿ, ಭಾರತದಲ್ಲಿ 540 ಕೋಟಿಗೂ ಅಧಿಕ ಹಣ ಗಳಿಕೆ ಮಾಡಿದೆ. ಈ ಸಿನಿಮಾ ಬಿಡುಗಡೆಯಾಗಿ 49ನೇ ದಿನಕ್ಕೆ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 25 ಲಕ್ಷ ಗಳಿಕೆ ಮಾಡಿದ್ದು, ಹೀಗೆ ಥಿಯೇಟರ್ಗಳಲ್ಲಿ ಈಗಲೂ ಮುನ್ನುಗ್ಗುತ್ತಿರುವ ‘ಪಠಾಣ್’ ಚಿತ್ರ ಇದೀಗ ಒಟಿಟಿ ಅಂಗಳದಲ್ಲಿಯು ಧೂಳೆಬ್ಬಿಸಲು ಪೂರ್ವ ತಯಾರಿ ಮಾಡಿ ಅಣಿಯಾಗಿದೆ.ಹಾಗಿದ್ರೆ, ಈ ಸಿನಿಮಾ ಯಾವಾಗ ಓಟಿಟಿ Pathaan on Ott) ಯಲ್ಲಿ ಬರಲಿದೆ ಎಂದು ಕಾತುರದಿಂದ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಲಭ್ಯವಾಗಿದೆ.

ಎಲ್ಲೆಡೆ ಅಬ್ಬರಿಸುತ್ತಿರುವ ಸಿನಿಮಾ ‘ಪಠಾಣ್ ‘ ಸದ್ಯದಲ್ಲೇ ಓಟಿಟಿಯಲ್ಲಿ(OTT) ಬರಲಿದ್ದು, ಅಮೆಜಾನ್ ಪ್ರೈಂ ಒಟಿಟಿಯಲ್ಲಿ(Pathaan on Ott) ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.ಈಗಾಗಲೇ ಚಿತ್ರದ ಕೆಲವು ಡಿಲಿಟೆಡ್ ಸೀನ್ಗಳನ್ನು ಚಿತ್ರತಂಡ ರಿವೀಲ್ ಮಾಡಿದ್ದು, ಈಗ ಬಹಿರಂಗಗೊಂಡ ಮಾಹಿತಿ ಅನುಸಾರ, ಮಾರ್ಚ್ 25ಕ್ಕೆ ‘ಪಠಾಣ್’ ಚಿತ್ರ ಸ್ಟ್ರಿಮಿಂಗ್ ಶುರುವಾಗಲಿದೆ ಎನ್ನಲಾಗಿದೆ. ಅದರಂತೆ, ಏಪ್ರಿಲ್ 25ರಂದು ಬಿಡುಗಡೆ ಆಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದ್ದು, ಈ ಕುರಿತ ಮಾಹಿತಿ ಇಂದು ಅಧಿಕೃತವಾಗಿ ಘೋಷಣೆಯಾಗಲಿದೆ.

https://twitter.com/PrimeVideoIN/status/1635657045910208513?ref_src=twsrc%5Etfw%7Ctwcamp%5Etweetembed%7Ctwterm%5E1635657045910208513%7Ctwgr%5E40434b969806ed083dabbc5aaab6b0a40d449dbb%7Ctwcon%5Es1_c10&ref_url=http%3A%2F%2Fapi-news.dailyhunt.in%2F

 

ಇದನ್ನೂ ಓದಿ: Bajaj Pulsar NS 200 : ಯುವಕರ ಹಾಟ್ ಫೆವರೇಟ್ ‘ಬಜಾಜ್ ಪಲ್ಸರ್ NS200’ ಬಿಡುಗಡೆ!