Home Breaking Entertainment News Kannada Nayanatara childrens Name : ಕೊನೆಗೂ ತನ್ನ ಅವಳಿ ಮಕ್ಕಳ ಹೆಸರು ಬಹಿರಂಗಪಡಿಸಿದ ನಯನತಾರಾ ದಂಪತಿ!

Nayanatara childrens Name : ಕೊನೆಗೂ ತನ್ನ ಅವಳಿ ಮಕ್ಕಳ ಹೆಸರು ಬಹಿರಂಗಪಡಿಸಿದ ನಯನತಾರಾ ದಂಪತಿ!

Nayanatara childrens Name

Hindu neighbor gifts plot of land

Hindu neighbour gifts land to Muslim journalist

Nayanatara Childrens Name: ನಟಿ ನಯನತಾರಾ(Nayanthara) ವಿಘ್ನೇಶ್​ ಶಿವನ್​ (Vignesh Shivan) ಮದುವೆಯ ಬಳಿಕ ಒಂದಲ್ಲ ಒಂದು ವಿಚಾರಕ್ಕೆ ಸುದ್ಧಿಯಾಗುತ್ತಿದ್ದಾರೆ. 2022ರ ಜೂನ್​ 9ರಂದು ಅವರಿಬ್ಬರು ಹೊಸ ಜೀವನಕ್ಕೆ ಮುನ್ನುಡಿ ಬರೆದರು. ಈ ಸ್ಟಾರ್​ ಸೆಲೆಬ್ರಿಟಿಗಳ ವಿವಾಹ ಸಮಾರಂಭಕ್ಕೆ ಅನೇಕ ಗಣ್ಯರು ಭಾಗಿಯಾಗಿ ಶುಭ ಕೋರಿದ್ದರು. ಮದುವೆಯಾದ ಕೆಲವೇ ತಿಂಗಳಲ್ಲಿ  ಬಾಡಿಗೆ ತಾಯಿಯಾಗುವ ಮೂಲಕ ನಯನತಾರಾ ಭಾರೀ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದರು.

 

ನಯನತಾರಾ ಮತ್ತು ವಿಘ್ನೇಶ್ ಶಿವನ್ ಕಳೆದ ವರ್ಷ ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡು ಮಕ್ಕಳಿಗೆ ಪೋಷಕರಾಗಿದ್ದಾರೆ. ಆದರೆ,ತಮ್ಮ ಮಕ್ಕಳ ವಿಚಾರದಲ್ಲಿ ಖಾಸಗಿತನ ಕಾಪಾಡಿಕೊಳ್ಳುವ ಜೋಡಿ ಇತ್ತೀಚೆಗೆ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಕೊನೆಗೂ(Nayanthara reveals the full name) ತಮ್ಮ ಅವಳಿ ಮಕ್ಕಳ ಹೆಸರನ್ನು ರಿವೀಲ್ ಮಾಡಿದ್ದಾರೆ.

ಮುದ್ದು ಮಕ್ಕಳ ಲಾಲನೆ ಪಾಲನೆಯ ಜೊತೆಗೆ ಸಿನಿಮಾ ಶೂಟಿಂಗ್ ಕಾರ್ಯದಲ್ಲಿ ಕೂಡ ಬಿಝಿಯಾಗಿರುವ ನಯನತಾರ ಅವರು ಇತ್ತೀಚೆಗಷ್ಟೇ ಚೆನ್ನೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಲೇಡಿ ಸೂಪರ್ ಸ್ಟಾರ್ ನಯನತಾರಾ(Nayanthara) ಅವರಿಗೆ ಮಕ್ಕಳ ಬಗ್ಗೆ ಪ್ರಶ್ನೆ ಕೇಳಲಾಗಿದೆ.

 

2022ರಲ್ಲಿ ಬಾಡಿಗೆ ತಾಯಿ ಮೂಲಕ ನಯನತಾರಾ ಮತ್ತು ವಿಘ್ನೇಶ್ ಶಿವನ್ (Vignesh Shivan) ಅವರು ಅವಳಿ ಗಂಡು ಮಕ್ಕಳನ್ನು ಪಡೆದ ಜೋಡಿ ಮುದ್ದು ಮಕ್ಕಳ ಪೂರ್ತಿ ಹೆಸರೇನು (Nayanatara Childrens Name)ಎಂಬ ಬಗ್ಗೆ ಎಲ್ಲಿಯೂ ಮಾಹಿತಿ ನೀಡಿರಲಿಲ್ಲ. ಸದ್ಯ ಈ ಗುಟ್ಟು ರಟ್ಟಾಗಿದ್ದು, ಖಾಸಗಿ ಕಾರ್ಯಕ್ರಮದ ವೇದಿಕೆಯಲ್ಲಿ ನಯನತಾರ ಅವರ ಮಕ್ಕಳ (Nayanthara Children) ಪೂರ್ಣ ಹೆಸರನ್ನು ಬಹಿರಂಗ ಪಡಿಸಿದ್ದು, ‘ನಮ್ಮ ಮೊದಲ ಮಗನ ಹೆಸರು ಉಯಿರ್​ ರುದ್ರೋನೀಲ್​ ಎನ್​. ಶಿವನ್​ ಮತ್ತು ಎರಡನೇ ಮಗನ ಹೆಸರು ಉಳಗ್​ ದೈವಗನ್​ ಎನ್​. ಶಿವನ್​’ ಎಂದು ಮಾಹಿತಿ ನೀಡಿದ್ದಾರೆ.

ನಯನತಾರಾ ಹಾಗೂ ವಿಘ್ನೇಶ್​ ಶಿವನ್​ ದಂಪತಿ ಈವರೆಗೆ ತಮ್ಮ ಮಕ್ಕಳ ಮುಖ ಕಾಣುವಂತಹ ಫೋಟೋಗಳನ್ನು ಎಲ್ಲಿಯೂ ಶೇರ್ ಮಾಡಿಲ್ಲ. ಈ ನಡುವೆ ಶಾರುಖ್​ ಖಾನ್​ ನಟನೆಯ ‘ಜವಾನ್​’ ಸಿನಿಮಾದಲ್ಲಿ ನಯನಾತಾರ ಮುಖ್ಯ ಪಾತ್ರ  ನಿರ್ವಹಿಸುತ್ತಿದ್ದಾರೆ. ಈ ನಡುವೆ ನಯನತಾರಾ ಮಕ್ಕಳ ಪೋಷಣೆಗಾಗಿ ನಟನೆಯಿಂದ ಕೂಡ ದೂರ ಉಳಿಯಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.