Home Breaking Entertainment News Kannada Mrunal Thakur: ಅಂತಹ ದೃಶ್ಯಗಳಲ್ಲಿ ನಾನು ಯಾವುದೇ ಕಾರಣಕ್ಕೂ ನಟಿಸುವುದಿಲ್ಲ : ಮೃಣಾಲ್ ಠಾಕೂರ್

Mrunal Thakur: ಅಂತಹ ದೃಶ್ಯಗಳಲ್ಲಿ ನಾನು ಯಾವುದೇ ಕಾರಣಕ್ಕೂ ನಟಿಸುವುದಿಲ್ಲ : ಮೃಣಾಲ್ ಠಾಕೂರ್

Mrunal Thakur

Hindu neighbor gifts plot of land

Hindu neighbour gifts land to Muslim journalist

Mrunal Thakur: ಕಥೆ, ಪಾತ್ರಕ್ಕೆ ಬೇಕಾದರೆ ಗ್ಲಾಮರ್ ಸೀನ್, ಕಿಸ್ ಸೀನ್ ಗಳಲ್ಲಿ ನಟಿಸಲು ಸಿದ್ಧ ಎನ್ನುತ್ತಾರೆ ಬಹುತೇಕ ನಾಯಕಿಯರು. ಆದರೆ ಅಂತಹ ದೃಶ್ಯಗಳಿಗೆ ನೋ ಹೇಳುವ ನಾಯಕಿಯರು ಕೆಲವೇ ಕೆಲವು ಮಂದಿ. ನಾಯಕಿ ಮೃಣಾಲ್ ಠಾಕೂರ್ ಕೂಡ ಗ್ಲಾಮರ್ ದೃಶ್ಯಗಳು ಮತ್ತು ಚುಂಬನದ ದೃಶ್ಯಗಳಲ್ಲಿ ನಟಿಸಲು ನಾನು ಒಪ್ಪುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ:  Assaduddin Owaisi: ಭಾರತದ ಮುಸ್ಲಿಮರು ಅತಿ ಹೆಚ್ಚು ಕಾಂಡೋಮ್ ಬಳಸುತ್ತಾರೆ : ಮೋದಿ ಟೀಕೆಗೆ ಅಸಾದುದ್ದೀನ್ ಓವೈಸಿ ತಿರುಗೇಟು

ಈ ಮರಾಠಿ ಚೆಲುವೆ ‘ಸೀತಾ ರಾಮ್’ (2022) ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದರು. ಮೃಣಾಲ್ ತನ್ನ ಮೊದಲ ಚಿತ್ರದಲ್ಲೇ ತನ್ನ ಸೌಂದರ್ಯ ಮತ್ತು ನಟನೆಯಿಂದ ಸೂಪರ್ ಹಿಟ್ ಹೀರೋಯಿನ್ ಎಂಬ ಖ್ಯಾತಿಯನ್ನು ಪಡೆದರು. ಅದಾದ ನಂತರ ತೆಲುಗಿನ ನಾನಿ ಜೊತೆ ‘ಹಾಯ್ ನನ್ನ’ ಮತ್ತು ವಿಜಯ್ ದೇವರಕೊಂಡ ಜೊತೆ ‘ಫ್ಯಾಮಿಲಿ ಸ್ಟಾರ್ ಸಿನಿಮಾಗಳಲ್ಲಿ ನಟಿಸಿ ತೆಲುಗು ಪ್ರೇಕ್ಷಕರಲ್ಲಿ ತಮ್ಮದೇ ಆದ ವಿಶೇಷ ಅಭಿಮಾನಿಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ:  Hassan pen drive case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ; ಎಸ್‌ಐಟಿಗೆ 18 ಸಿಬ್ಬಂದಿ ನೇಮಕ, ಅಶ್ಲೀಲ ವೀಡಿಯೋದಲ್ಲಿ ಇರುವ ಮಹಿಳೆಯರು ಯಾರು?

ಇತ್ತೀಚಿನ ಸಂದರ್ಶನವೊಂದರಲ್ಲಿ, ಮೃಣಾಲ್ ಠಾಕೂರ್ ”ನಾನು ತೀವ್ರವಾದ ಚುಂಬನದ ದೃಶ್ಯಗಳು ಮತ್ತು ಮಲಗುವ ಕೋಣೆ ದೃಶ್ಯಗಳಲ್ಲಿ ನಟಿಸಲು ಇಷ್ಟಪಡುವುದಿಲ್ಲ. ಮೇಲಾಗಿ ನನ್ನ ತಂದೆ-ತಾಯಿ ಕೂಡ ಇಂತಹ ದೃಶ್ಯಗಳಲ್ಲಿ ನಟಿಸುವುದು ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.