Home Breaking Entertainment News Kannada ಚೊಚ್ಚಲ ಮಗುವಿಗೆ ತಾಯಿಯಾದ ನಟಿ ಕಾಜಲ್ ಅಗರ್ವಾಲ್ !!

ಚೊಚ್ಚಲ ಮಗುವಿಗೆ ತಾಯಿಯಾದ ನಟಿ ಕಾಜಲ್ ಅಗರ್ವಾಲ್ !!

Hindu neighbor gifts plot of land

Hindu neighbour gifts land to Muslim journalist

ದಕ್ಷಿಣ ಭಾರತದ ಪ್ರಸಿದ್ಧ ನಟಿ, ಪ್ರೇಕ್ಷಕರ ಹಾಟ್ ಫೇವರೇಟ್ ಕಾಜಲ್ ಅಗರ್ ವಾಲ್ ಇಂದು ಗಂಡು ಮಗುವಿಗೆ ತಾಯಿಯಾಗಿದ್ದಾರೆ. ಈ ಬಗ್ಗೆ ಅವರ ಸಹೋದರಿ ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಸದ್ಯ ತಾಯಿ ಮಗು ಆರೋಗ್ಯವಾಗಿದ್ದು, ನಮಗೆ ತುಂಬಾ ಖುಷಿಯಾಗಿದೆ. ನಮ್ಮ ಮನೆಗೆ ನಮ್ಮ ಮುದ್ದಾದ ಮಗು ಬಂದಿದೆ ಎಂದು ಕಾಜಲ್ ಅವರ ತಂಗಿ ನಿಶಾ ಅಗರ್ ವಾಲ್ ತಿಳಿಸಿದ್ದಾರೆ.

ಜನವರಿಯಲ್ಲಿ ತಾನು ಗರ್ಭಿಣಿ ಆಗಿರುವುದಾಗಿ ತಮ್ಮ ಅಭಿಮಾನಿಗಳಲ್ಲಿ ಮಾಹಿತಿ ಹಂಚಿಕೊಂಡಿದ್ದರು. ನಟಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗೌತಮ್ ಕೀಚು ಎಂಬುವವರ ಜೊತೆ ವಿವಾಹವಾಗಿದ್ದರು.

ದಂಪತಿಗೆ ಅಭಿಮಾನಿಗಳು ಮತ್ತು ಆಪ್ತರು ಶುಭಹಾರೈಸುತ್ತಿದ್ದಾರೆ. ನಟಿ ಕಾಜಲ್ ಅರ್ಗವಾಲ್ ಮಗಧೀರ, ಆರ್ಯ 2 ಸೇರಿದಂತೆ ಬಾಲಿವುಡ್, ತೆಲುಗು ಹಾಗೂ ತಮಿಳಿನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.