Home Breaking Entertainment News Kannada Nayanthara Vs Mamata Mohandas: ಲೇಡಿಸೂಪರ್ ಸ್ಟಾರ್ ವಿರುದ್ಧ ಗಂಭೀರ ಆರೋಪ ಮಾಡಿದ ನಟಿ!

Nayanthara Vs Mamata Mohandas: ಲೇಡಿಸೂಪರ್ ಸ್ಟಾರ್ ವಿರುದ್ಧ ಗಂಭೀರ ಆರೋಪ ಮಾಡಿದ ನಟಿ!

Nayanthara Vs Mamata Mohandas

Hindu neighbor gifts plot of land

Hindu neighbour gifts land to Muslim journalist

Nayanthara Vs Mamata Mohandas: ಅಭಿನಯ ಚಕ್ರವರ್ತಿ ಸುದೀಪ್ ಜೊತೆಗೆ ಗೂಳಿ ಸಿನೆಮಾದಲ್ಲಿ ನಟಿಸಿ ಕನ್ನಡಿಗರ ಮೆಚ್ಚುಗೆ ಪಡೆದ ಮಮತಾ ಮೋಹನ್ದಾಸ್ ಸದ್ಯ, ನಟಿ ನಯನತಾರ (Nayanthara Vs Mamata Mohandas)ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಕನ್ನಡದ ಗೂಳಿ ಸಿನಿಮಾದಲ್ಲಿ ಬಣ್ಣ ಹಚ್ಚಿದ ನಾಯಕಿ ಮಮತಾ ಮೋಹನ್ದಾಸ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರು. ಕ್ಯಾನ್ಸರ್ ಗೆದ್ದ ಕೆಲವೇ ತಿಂಗಳಲ್ಲಿ ಮಲಯಾಳಂ ನಟಿ ಮಮತಾ ಮೋಹನ್‍ದಾಸ್ ವಿಟಲೈಗೋ ಕಾಯಿಲೆಗೆ ತುತ್ತಾಗಿ ತಮ್ಮ ಚರ್ಮದ ಬಣ್ಣವನ್ನು ಕಳೆದುಕೊಳ್ಳುತ್ತಿದ್ದರು. ಇದೀಗ, ನಟಿ ಮಮತಾಲೇಡಿ ಸೂಪರ್ ಸ್ಟಾರ್ ನಯನತಾರಾ(Nayanthara) ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾದಲ್ಲಿ ದೊರೆತ ಅವಕಾಶವನ್ನು ನಯನತಾರಾ ಅವರು ಬೆದರಿಕೆ ಹಾಕುವ ಮೂಲಕ ಕಿತ್ತುಕೊಂಡರು ಎಂದು ಆರೋಪಿಸಿದ್ದಾರೆ.

ಆಗಸ್ಟ್ 2008 ರಂದು ಬಿಡುಗಡೆಯಾದ ಕುಸೇಲನ್ ಸಿನಿಮಾದ ವಿಚಾರ ಅದೆಷ್ಟೋ ವರ್ಷಗಳ ಬಳಿಕ ಮುನ್ನಲೆಗೆ ಬಂದಿದೆ. ನಟಿ ಮಮತಾ ಹೇಳಿಕೆಯಂತೆ ರಜನಿಕಾಂತ್ ಅವರೊಂದಿಗೆ ಕುಸೇಲನ್ ಸಿನಿಮಾದಲ್ಲಿ ಓಂ ಜರಾರೆ ಹಾಡಿನಲ್ಲಿ ನಟಿಸಲು ಮಮತಾ ಮೋಹನ್ದಾಸ್ ಅವರಿಗೆ ಅವಕಾಶ ಸಿಕ್ಕಿತ್ತಂತೆ. ಹಾಡಿನ ಶೂಟಿಂಗ್ ಕೂಡ ಎರಡು ದಿನ ನಡೆದಿದ್ದು, ಆದರೆ ಈ ಹಾಡನ್ನು ಚಿತ್ರದಿಂದ ಎಡಿಟ್ ಮಾಡಲಾಗಿತ್ತಂತೆ. ಈ ವಿಚಾರ ಮಮತಾ ಅವರಿಗೆ ತಡವಾಗಿ ತಿಳಿದಿದ್ದು, ಇದಕ್ಕೆಲ್ಲ ಚಿತ್ರದ ನಾಯಕಿಯಾದ ನಯನತಾರ ಕಾರಣ ಎಂಬುದು ಕೊನೆಗೆ ತಿಳಿಯಿತು ಎಂಬುದನ್ನು ಮಮತಾ ಮೋಹನ್ದಾಸ್ ಸಂದರ್ಶನ ವೊಂದರಲ್ಲಿ ಹೇಳಿಕೊಂಡಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕುಸೇಲನ್ ಸಿನಿಮಾವನ್ನು ಪಿ ವಾಸು ನಿರ್ದೇಶನ ಮಾಡಿದ್ದು, ಈ ಸಿನೆಮಾದ ಕುರಿತು ಹೆಚ್ಚಿನವರಿಗೆ ತಿಳಿದಿರುವುದು ಸಹಜ.ರಜನಿಕಾಂತ್ ಅವರು ಈ ಸಿನೆಮಾದಲ್ಲಿ ನಟಿಸಿದ್ದು ಅಭಿಮಾನಿಗಳಿಗೇಕೊ ರುಚಿಸಿರಲಿಲ್ಲ. ಕೆಲವು ತಿಂಗಳ ಹಿಂದೆ ನಡೆದ ಯುಟ್ಯೂಬ್ ಚಾನೆಲ್ನಲ್ಲಿ(YouTube Channel) ನಟಿ ಮಮತಾ ಮೋಹನ್ದಾಸ್ ಅವರೊಂದಿಗಿನ ಸಂದರ್ಶನದಲ್ಲಿ ಮತ್ತೊಮ್ಮೆ ಈ ಕುಸೇಲನ್ ಸಿನಿಮಾದ ವಿಚಾರ ಮುನ್ನಲೆಗೆ ಬಂದಿದೆ.

ಮತ್ತೊಬ್ಬ ನಟಿಯನ್ನು ಹಾಡಿಗೆ ಕರೆದಲ್ಲಿ ಕುಸೇಲನ್ ಸೆಟ್ಗೆ ಬರುವುದಿಲ್ಲ ಎಂದು ನಯನತಾರಾ ಚಿತ್ರತಂಡಕ್ಕೆ ಹೇಳಿದ್ದರು. ಹೀಗಾಗಿ, ಕುಸೇಲನ್ ಚಿತ್ರದಲ್ಲಿನ ತಮ್ಮ ದೃಶ್ಯಗಳನ್ನು ಎಡಿಟ್ ಮಾಡಲಾಗಿದೆ ಎಂದು ಮಮತಾ ಆರೋಪ ಮಾಡಿದ್ದಾರೆ. ಕುಸೇಲನ್ನಲ್ಲಿ ಮಮತಾ ಅವರ ಒಂದು ಶಾಟ್ ಮಾತ್ರ ಇದ್ದ ಹಿನ್ನೆಲೆ ತೀವ್ರ ಬೇಸರವಾಗಿತ್ತು. ಸದ್ಯ, ಈ ಆರೋಪಗಳಿಗೆ ನಯನತಾರಾ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.ಸಿನಿಮಾ ಅಡೆತಡೆಗಳ ಜೊತೆಗೆ ವೈಯಕ್ತಿಕ ಬದುಕಿನಲ್ಲಿಯೂ ನೋವು ಉಂಡಿರುವ ಮಮತಾ ಮೋಹನ್ದಾಸ್ ಕನ್ನಡದ ಗೂಳಿ ಸೇರಿದಂತೆ ತೆಲುಗು, ತಮಿಳು, ಮಲಯಾಳಂನ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅವರ ಮುಂಬರುವ ಚಿತ್ರ ರುದ್ರಂಗಿಗಾಗಿ ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ: ವೀರ್ಯ ದಾನದ ಮೂಲಕ ಮಗು ಮಾಡಿಕೊಂಡ ಈ ಫೇಮಸ್ ನಟಿಯ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು !