Home Breaking Entertainment News Kannada Kangana Ranaut: ‘ಎಮರ್ಜೆನ್ಸಿ’ ಸಿನಿಮಾ ವೀಕ್ಷಿಸಿ ಕಣ್ಣೀರು ಹಾಕಿದ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ;...

Kangana Ranaut: ‘ಎಮರ್ಜೆನ್ಸಿ’ ಸಿನಿಮಾ ವೀಕ್ಷಿಸಿ ಕಣ್ಣೀರು ಹಾಕಿದ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ; ಈ ಬಗ್ಗೆ ನಿರ್ದೇಶಕಿ ಕಂಗನಾ ಏನಂದ್ರು?

Kangana Ranaut
Source: Amarujala

Hindu neighbor gifts plot of land

Hindu neighbour gifts land to Muslim journalist

Kangana Ranaut: ನಟಿ ಕಂಗನಾ ರಣಾವತ್ (Kangana Ranaut) ಅವರು ‘ಎಮರ್ಜೆನ್ಸಿ’ ಚಿತ್ರದ ಮೂಲಕ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಸಿನಿಮಾದಲ್ಲಿ ನಟಿ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ (Indira Gandhi) ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅಷ್ಟೇ ಅಲ್ಲ ‘ಎಮರ್ಜೆನ್ಸಿ’ ಚಿತ್ರವನ್ನು ಕಂಗನಾ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಸದ್ಯ ಈ ಸಿನಿಮಾ ಪೋಸ್ಟ್​ ಪ್ರೊಡಕ್ಷನ್ ಹಂತದಲ್ಲಿದೆ. ಇದೀಗ ಈ ಸಿನಿಮಾ ನೋಡಿದ ರಾಜಮೌಳಿ (Rajamouli) ತಂದೆ ವಿಜಯೇಂದ್ರ ಪ್ರಸಾದ್ ಕಣ್ಣೀರು ಹಾಕಿದ್ದಾರೆ. ಈ ಬಗ್ಗೆ ಕಂಗನಾ ರಣಾವತ್ ಹೇಳಿಕೊಂಡಿದ್ದಾರೆ.

ಕಥೆ, ಬರಹಗಾರ ವಿಜಯೇಂದ್ರ ಪ್ರಸಾದ್ ಅವರು ಹಲವು ಸಿನಿಮಾಗಳಿಗೆ ಕಥೆ ಬರೆದಿದ್ದಾರೆ. ‘ಬಾಹುಬಲಿ’, ‘ಬಜರಂಗಿ ಭಾಯಿಜಾನ್’ ಸೇರಿದಂತೆ ಹಲವು ಹಿಟ್​ ಸಿನಿಮಾಗಳಿಗೆ ಕಥೆ ನೀಡಿದ್ದಾರೆ. ಜಾನಕಿ ರಾಮುಡು, ಬೊಬ್ಬಿಲಿ ಸಿಂಹಂ, ಸಮರ ಸಿಂಹ ರೆಡ್ಡಿ, ವಿಕ್ರಮಾರ್ಕುಡು, ಮಗಧೀರ, ರೌಡಿ ರಾಥೋರ್ ಮುಂತಾದ ಸಿನಿಮಾಗಳಿಗೆ ವಿಜಯೇಂದ್ರ ಪ್ರಸಾದ್ ಕಥೆ, ಚಿತ್ರಕಥೆ ರಚಿಸಿದ್ದಾರೆ. ಇದೀಗ ಕಂಗನಾ ನಿರ್ದೇಶನದ ‘ಎಮರ್ಜೆನ್ಸಿ’ ಸಿನಿಮಾವನ್ನು ವಿಜಯೇಂದ್ರ ಪ್ರಸಾದ್ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ ಸಿನಿಮಾ ವೀಕ್ಷಿಸಿ ಕಣ್ಣೀರು ಹಾಕಿದರು ಎಂದು ಕಂಗನಾ ಹೇಳಿದ್ದಾರೆ.

ಕಂಗನಾ ವಿಜಯೇಂದ್ರ ಪ್ರಸಾದ್ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದು, “ಸಂಪೂರ್ಣ ಎಡಿಟಿಂಗ್ ಮುಗಿದ ನಂತರ ‘ಎಮರ್ಜೆನ್ಸಿ’ ಸಿನಿಮಾ ವೀಕ್ಷಿಸಿದ ಮೊದಲ ವ್ಯಕ್ತಿ ವಿಜಯೇಂದ್ರ ಪ್ರಸಾದ್. ಅವರು ದೃಶ್ಯಗಳನ್ನು ನೋಡುವಾಗ ಹಲವಾರು ಬಾರಿ ಕಣ್ಣನ್ನು ಒರೆಸಿಕೊಂಡರು. ಸಿನಿಮಾ ನೋಡಿದ ನಂತರ ‘ನಾನು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ’ ಎಂದು ನನ್ನ ಬಗ್ಗೆ ಮೆಚ್ಚುಗೆ ಸೂಚಿಸಿದರು” ಎಂದು ಕಂಗನಾ ಹೇಳಿದರು. ಜೊತೆಗೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ತಿಳಿಸುತ್ತೇವೆ ಎಂದು ಕಂಗನಾ ಹೇಳಿದ್ದಾರೆ.

ಇದನ್ನೂ ಓದಿ:Cough Medicine: ಭಾರತದ ದೇಶದ ಕೆಮ್ಮಿನ ಔಷಧಿ ನೀತಿಯಲ್ಲಿ ಬದಲಾವಣೆ- ಕೇಂದ್ರ ಚಿಂತನೆ!