Home Breaking Entertainment News Kannada ಬಾಲಿವುಡ್‌ ಹೀರೋ ಹೃತಿಕ್‌ ರೋಷನ್‌ ತನ್ನ ಪ್ರೇಯಸಿ ಜೊತೆ ಲಿಪ್‌ಲಾಕ್‌, ವೀಡಿಯೋ ವೈರಲ್‌!!!

ಬಾಲಿವುಡ್‌ ಹೀರೋ ಹೃತಿಕ್‌ ರೋಷನ್‌ ತನ್ನ ಪ್ರೇಯಸಿ ಜೊತೆ ಲಿಪ್‌ಲಾಕ್‌, ವೀಡಿಯೋ ವೈರಲ್‌!!!

Hrithik roshan

Hindu neighbor gifts plot of land

Hindu neighbour gifts land to Muslim journalist

Hrithik Roshan and Saba Azad liplock : ಸೆಲೆಬ್ರಿಟಿಗಳು ಮನೆಯಿಂದ ಹೊರ ಕಾಲಿಟ್ಟ ಕೂಡಲೇ ಕ್ಯಾಮರಾ ಹದ್ದು ಕಣ್ಣಿಡುತ್ತ ಇವರ ಚಲನವಲನಗಳ ಮೇಲೆ ಕಣ್ಣಿಟ್ಟಿರುತ್ತೆ. ಹೀಗಾಗಿ, ಸೆಲೆಬ್ರಿಟಿಗಳ ಫೋಟೋ ಇಲ್ಲವೇ ವೈರಲ್ ಆಗಿ ಬಿಟ್ಟರೆ ಸಾಕು ಮಾಧ್ಯಮದ ಪಾಲಿಗೆ ಬಿಸಿ ಬಿಸಿ ಸುದ್ದಿಯಾಗಿ ಪರಿಣಮಿಸುತ್ತದೆ. ಸದ್ಯ ಬಾಲಿವುಡ್ (Bollywood) ಸ್ಟಾರ್ ನಟನ ಲಿಪ್ ಕಿಸ್ (Lip Kiss) ವಿಡಿಯೋ (Video) ವೈರಲ್ (Viral) ಆಗಿ ಸಂಚಲನ ಮೂಡಿಸಿದೆ. ಹೃತಿಕ್ ರೋಷನ್ ಅವರು ಗರ್ಲ್​ಫ್ರೆಂಡ್ ಸಬಾ ಆಜಾದ್ ಜೊತೆ ಏರ್ಪೋರ್ಟ್​ ನಲ್ಲಿ (Airport) ಕಂಡು ಬಂದಿದ್ದು, ಈ ವೀಡಿಯೋ ಎಲ್ಲೆಡೆ ವೈರಲ್ ಆಗಿ ಸಿಕ್ಕಾಪಟ್ಟೆ ಟ್ರೆಂಡ್ ಸೃಷ್ಟಿ ಮಾಡಿದೆ.

ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಮತ್ತು ಸಬಾ ಅಜಾದ್ ಲವ್ ಸ್ಟೋರಿ ಬಗ್ಗೆ ಗುಸು ಗುಸು ಸುದ್ದಿ ಹಬ್ಬಿದ್ದು ಹಳೆ ವಿಚಾರ. ಈ ಸುದ್ದಿಗೆ ಇಂಬು ನೀಡುವಂತೆ ಈ ಜೋಡಿ ಜೊತೆಯಾಗಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಕೂಡ ಇದೆ. ಇತ್ತೀಚೆಗೆ ರೆಸ್ಟೋರೆಂಟ್ ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡ ಲವ್ ಬರ್ಡ್ಸ್ ತಮ್ಮ ಸಂಬಂಧವನ್ನು ಬಟ್ಟ ಬಯಲು ಮಾಡುವ ಲಕ್ಷಣಗಳು ಗೋಚರಿಸುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಮುಂಬೈ (Mumbai) ಏರ್ಪೋರ್ಟ್​ನಲ್ಲಿ ಗರ್ಲ್​ಫ್ರೆಂಡ್ (Girl Friend) ಸಬಾಳ ಜೊತೆ ಬಂದಿದ್ದ ಸಂದರ್ಭದಲ್ಲಿ ಗೆಳತಿಯನ್ನು ಬೀಳ್ಕೊಡುವ ವೇಳೆ ಈ ಜೋಡಿ ಕಾರಿನ ಒಳಗೆ ಲಿಪ್​ಲಾಕ್ ಮಾಡಿದ್ದು, ಈ ವಿಡಿಯೋ ಈಗ ವೈರಲ್ (Viral) ಆಗಿದ್ದು, ಇದಕ್ಕೆ ಅಭಿಮಾನಿಗಳು ನಾನಾ ರೀತಿಯ ಕಾಮೆಂಟ್ ಮಾಡಿದ್ದಾರೆ.

ಇಲ್ಲಿಯವರೆಗೆ ಕೈ ಕೈಹಿಡಿದು ಓಡಾಡುತ್ತಿದ್ದ ಜೋಡಿ ಇದೀಗ ಸಾರ್ವಜನಿಕವಾಗಿ ಹೃತಿಕ್ ಮತ್ತು ಸಬಾ ಅಜಾದ್ ಲಿಪ್ ಕಿಸ್ (Hrithik Roshan and Saba Azad liplock)ಮಾಡಿ ಎಲ್ಲರಿಗೂ ಶಾಕ್ ನೀಡಿದ್ದು, ಈ ನಡುವೆ ಈ ಜೋಡಿ ಶೀಘ್ರದಲ್ಲೇ ಹಸೆ ಮಣೆ ಏರಲಿದ್ದಾರೆ ಅನ್ನುವ ಸುದ್ದಿ ಕೂಡ ಜೋರಾಗಿ ಕೇಳಿ ಬರುತ್ತಿವೆ.

ಅಷ್ಟೇ ಅಲ್ಲದೆ, ಈ ಜೋಡಿ ಜೊತೆಯಾಗಿ ಜೀವಿಸುವ ನಿಟ್ಟಿನಲ್ಲಿ ಹೊಸ ಮನೆ ಕೂಡ ಖರೀದಿ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಮನ್ನತ್ ಎನ್ನುವ ಅಪಾರ್ಟ್ಮೆಂಟ್‌ಗೆ ಇಬ್ಬರೂ ಶಿಫ್ಟ್ ಆಗುತ್ತಿದ್ದು, ಹೊಸ ಅಪಾರ್ಟ್‌ಮೆಂಟ್‌ ಸಮುದ್ರದ ನಯನಾದ್ಭುತ ದೃಶ್ಯಗಳನ್ನ ಕಣ್ತುಂಬಿಕೊಳ್ಳಲು ಜೋಡಿ ಬಯಸಿದ್ದು, 15 ಮತ್ತು 16 ನೇ ಫ್ಲೋರ್ ಡ್ಯುಪ್ಲೆಕ್ಸ್‌ ಹಾಗೂ ಮತ್ತೊಂದು ಫ್ಲೋರ್ ಗಳನ್ನ ಒಳಗೊಂಡಿದೆ ಎನ್ನುವುದು ಪ್ರಸ್ತುತ ಕೇಳಿ ಬಂದ ಅಂತೆ ಕಂತೆಗಳ ಸಂತೆಯ ಸದ್ಯದ ಸುದ್ದಿ. ಹೃತಿಕ್ ಬರೋಬ್ಬರಿ 100 ಕೋಟಿ ರೂಪಾಯಿಗೆ ಖರೀದಿ ಮಾಡಿರುವ 3 ಫ್ಲೋರ್ ಇರುವ ಅಪಾರ್ಟ್ಮೆಂಟ್‌ ಹೊಂದಿದ್ದು, ಈಗಾಗಲೇ ಹೊಸಮನೆಯ ನವೀಕರಣ ಕೆಲಸ ಶುರುವಾಗಿದೆ ಎನ್ನಲಾಗಿದೆ. ಇದೆಲ್ಲದರ ನಡುವೆ ಹೃತಿಕ್ ಫೈಟರ್ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ ಎನ್ನಲಾಗಿದೆ.