Home Breaking Entertainment News Kannada Rakshit Shetty: ಸಿಂಪಲ್‌ಸ್ಟಾರ್‌ ರಕ್ಷಿತ್‌ ಶೆಟ್ಟಿ ʼರಿಚರ್ಡ್ ಆಂಟನಿʼ ಸಿನಿಮಾಗಾಗಿ ಪಡೆಯುತ್ತಿರೋ ಸಂಭಾವನೆ ಎಷ್ಟು? ಹೊಂಬಾಳೆ...

Rakshit Shetty: ಸಿಂಪಲ್‌ಸ್ಟಾರ್‌ ರಕ್ಷಿತ್‌ ಶೆಟ್ಟಿ ʼರಿಚರ್ಡ್ ಆಂಟನಿʼ ಸಿನಿಮಾಗಾಗಿ ಪಡೆಯುತ್ತಿರೋ ಸಂಭಾವನೆ ಎಷ್ಟು? ಹೊಂಬಾಳೆ ಕೃಪಕಟಾಕ್ಷ ಶೆಟ್ರ ಮೇಲೆ ಎಷ್ಟಿದೆ?!

Rakshit Shetty

Hindu neighbor gifts plot of land

Hindu neighbour gifts land to Muslim journalist

Rakshit Shetty : ಕಿರಿಕ್ ಪಾರ್ಟಿ(Kirik Party) ಮೂಲಕ ಸದ್ದು ಮಾಡಿದ ಸೈಲೆಂಟ್ ಬಾಯ್ ರಕ್ಷಿತ್ ಶೆಟ್ಟಿ(Rakshith Shetty)ಯವರ ಹೊಸ ಸಿನಿಮಾ ಸೆಟ್ಟೇರಿದೆ. 777 ಚಾರ್ಲಿ’ ತೆರೆ ಕಂಡ ಬಳಿಕ ಸಿಂಪಲ್ ಸ್ಟಾರ್ ನಟನೆಗೆ ಎಲ್ಲೆಡೆ ಮೆಚ್ಚುಗೆಯ ಸುರಿಮಳೆ ಹರಿದುಬಂದದ್ದು ಮಾತ್ರವಲ್ಲ ದೊಡ್ಡ ಮಟ್ಟದ ನೇಮ್ ಫೇಮ್ ಕೂಡ ಬಂದಿದ್ದು ಸುಳ್ಳಲ್ಲ.ಈ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ.ಸದ್ಯ, ರಕ್ಷಿತ್ ಶೆಟ್ಟಿ ಅವರ ಹೊಸ ಸಿನಿಮಾ ಸಪ್ತಸಾಗರದಾಚೆ ಎಲ್ಲೋ ‘ (Sapta Sagaradaache Yello)ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆ ಹುಟ್ಟುಹಾಕಿದೆ.

ಇದರ ನಡುವೆ ಸಿಂಪಲ್ ಸ್ಟಾರ್ ಹೊಂಬಾಳೆ ಫಿಲಂಸ್(Hombale Films) ನಿರ್ಮಾಣದಲ್ಲಿ ಮೂಡಿ ಬರಲಿರುವ ರಿಚರ್ಡ್ ಆಂಟನಿ ಸಿನಿಮಾದಲ್ಲಿ ನಾಯಕ ನಟನ ಜೊತೆ ಜೊತೆಗೆ ನಿರ್ದೇಶಕನಾಗಿ ಕೂಡ ಮಿಂಚಲಿದ್ದಾರೆ. ರಿಚರ್ಡ್ ಆಂಟನಿ ಸಿನಿಮಾದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಪಡೆಯಲಿರುವ ಸಂಭಾವನೆ ಎಷ್ಟು ಗೊತ್ತಾ?

ರಕ್ಷಿತ್ ಶೆಟ್ಟಿ (Rakshit Shetty) ರಿಚರ್ಡ್ ಆಂಟನಿ(Richard Antony) ಸಿನಿಮಾಗಾಗಿ ಪಡೆದುಕೊಳ್ಳುತ್ತಿರುವ ಸಂಭಾವನೆ 5ರಿಂದ 6 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ. ಈ ಸಿನಿಮಾದ ಬಿಡುಗಡೆಯಾದ ಬಳಿಕ ಲಾಭದಲ್ಲಿ ಕೂಡ ಪಾಲನ್ನು ಪಡೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆಯ ನಟನಾಗಿ ರಕ್ಷಿತ್ ಶೆಟ್ಟಿ ಗುರುತಿಸಿಕೊಂಡಿದ್ದಾರೆ. ಕನ್ನಡ ಚಲನಚಿತ್ರೋದ್ಯಮದ ಯಶಸ್ವಿ ನಟ ಮತ್ತು ನಿರ್ಮಾಪಕರಾಗಿ ಖ್ಯಾತಿ ಪಡೆದಿದ್ದು, ಕಿರಿಕ್ ಪಾರ್ಟಿ ಮತ್ತು ಉಳಿದವರು ಕಂಡಂತೆ ಸಿನಿಮಾಗಳ ಮೂಲಕ ಜನರ ಮನ ಸೆಳೆದ ಸಿಂಪಲ್ ಸ್ಟಾರ್ , 777 ಚಾರ್ಲಿ ಸಿನಿಮಾ ನೋಡುಗರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಮಾಡುತ್ತಿರುವ ರಿಚರ್ಡ್ ಆಂಟನಿಯ ಟೈಟಲ್​ ಅನ್ನು ಈಗಾಗಲೇ ವಿಡಿಯೋ ಮೂಲಕ ರಿವೀಲ್ ಮಾಡಲಾಗಿದೆ. ಈ ಬಗ್ಗೆ ನಟ ರಕ್ಷಿತ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದರು. ರಿಚರ್ಡ್​ ಆಂಟನಿ ಉಳಿದವರು ಕಂಡಂತೆ ಸಿನಿಮಾದ 2ನೇ ಅಧ್ಯಾಯ ಎನ್ನಬಹುದೇನೋ!. ಆದರೆ ಸಂಪೂರ್ಣ ವಿಭಿನ್ನವಾಗಿದ್ದು, ಬಹಳ ವರ್ಷಗಳ ಹಿಂದೆಯೇ ನಾನು ಉಳಿದವರು ಕಂಡಂತೆ ಬರೆದ ಸಂದರ್ಭ ಮುಂದೊಂದು ದಿನ ಇದರ ಇನ್ನೊಂದು ಭಾಗವನ್ನು ಕೂಡ ತಾನೇ ಮಾಡುತ್ತೇನೆ ಎಂದು ನಾನು ಊಹಿಸಿಯೂ ಇರಲಿಲ್ಲ ಎಂದು ಸಿಂಪಲ್ ಸ್ಟಾರ್ ಸಿನಿಮಾದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಪ್ರಾಜೆಕ್ಟ್​ ಕೈಗೆತ್ತಿಕೊಂಡ ಮೇಲೆ ಇದು ಅಂದೇ ಮೊಳಕೆಯೊಡೆದ ಪ್ರಬಂಧದ ನಿರ್ಣಯ ಎಂದು ಅನಿಸುತ್ತಿದೆ. ಆಗ ಗಿಡದ ಎಲೆಯಷ್ಟು ತೆರೆ ಮೇಲೆ ತರಲು ಅವಕಾಶ ದೊರೆತಿತ್ತು. ಕಥೆಗೆ ತಾಳ್ಮೆ ಕೊಂಚ ಜಾಸ್ತಿ ಬೇಕು ಎಂದೆನಿಸುತ್ತದೆ. ಈಗ ಮರದ ಕೊಂಬೆಯಷ್ಟು ಹೇಳಲು ನನ್ನನ್ನು ತಯಾರು ಮಾಡಿದೆ ಎಂದು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ನಟ ಬಹು ನಿರೀಕ್ಷಿತ ಸಿನಿಮಾ ರಿಚರ್ಡ್​ ಆಂಟನಿ (Richard Antony) ಬಗ್ಗೆ ಅಪ್​ಡೆಟ್​ ನೀಡಿದ್ದಾರೆ.

 

ಇದನ್ನು ಓದಿ : Kissing Disease : ಎಚ್ಚರ! ಚುಂಬನ ಕಾಯಿಲೆಯ ಬಗ್ಗೆ ತಿಳಿದಿದೆಯೇ? ಇಲ್ಲಿದೆ ರೋಗ ಲಕ್ಷಣ ಡಿಟೇಲ್ಸ್!