

Alia Bhatt : ಮೆಟ್ ಗಾಲಾ ಎಂಬುದು ಪ್ರತಿ ವರ್ಷ ನ್ಯೂಯಾರ್ಕ್ನಲ್ಲಿ ನಡೆಯುವ ಒಂದು ಫ್ಯಾಷನ್ ಫೆಸ್ಟಿವಲ್ . ಈ ಸಮಾರಂಭದಲ್ಲಿ ಜಗತ್ತಿನ ಹಲವು ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ. ಅಂತೆಯೇ ಈ ಕಾರ್ಯಕ್ರಮಕ್ಕೆ ಬಾಲಿವುಡ್, ಹಾಲಿವುಡ್ ನಟಿಯಾದ ಆಲಿಯಾ ಭಟ್ (Alia Bhatt ) ಭಾರತದ ಪರವಾಗಿ ಪ್ರತಿನಿಧಿಸಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಆಲಿಯಾ ಭಟ್ ದುಬಾರಿ ಬೆಲೆಯ ಗೌನನ್ನು ಧರಿಸಿ ಸಖತ್ ಮಿಂಚಿದ್ದಾರೆ. ಅಲ್ಲದೆ ಈಕೆಯನ್ನು ಕಂಡು ವೀಕ್ಷಕರು ಡಿಸ್ನಿ ಪ್ರಿನ್ಸೆಸ್ ಎಂದು ಕರೆಯುತ್ತಿದ್ದಾರೆ.
ಆಲಿಯಾ ಭಟ್ ಹಾಗೂ ಪ್ರಿಯಾಂಕಾ ಚೋಪ್ರಾ ಇಬ್ಬರೂ ಮೆಟ್‌ಗಾಲಾ 2023 ರಲಿ ಭಾರತವನ್ನು ಪ್ರತಿನಿಧಿಸಿದ್ದು ,
ಆಲಿಯಾ ಭಟ್ ಬಿಳಿ ಬಣ್ಣದ ಗೌನ್‌ನಲ್ಲಿ ಮಿಂಚಿದ್ರೆ, ಪ್ರಿಯಾಂಕಾ ಕಪ್ಪು ಬಣ್ಣದ ಗೌನ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.
ಆಲಿಯಾ ಭಟ್ ಮೊದಲ ಭಾರಿಗೆ ಈ ಫ್ಯಾನ್ ಈವೆಂಟ್‌ನಲ್ಲಿ ಭಾಗವಹಿಸಿದ್ದು, ಫ್ಯಾಷನ್ ಈವೆಂಟ್‌ನಲ್ಲಿ ದುಬಾರಿ ಬೆಲೆಯ ಗೌನ್ ತೊಟ್ಟು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಹಾಲಿವುಡ್ ಹಾಗೂ ಫ್ಯಾಷನ್ ಲೋಕದ ದಿಗ್ಗಜರ ಗಮನ ಸೆಳೆದಿದ್ದಾರೆ.
ಇನ್ನು ಮೆಟ್ ಗಾಲಾದಲ್ಲಿ ಬರುವ ಸೆಲೆಬ್ರೆಟಿಗಳು ದುಬಾರಿ ಬೆಲೆ ಬಾಳುವ ಡ್ರೆಸ್ ಅನ್ನು ಧರಿಸಿ ಬರುತ್ತಾರೆ. ಆದ ಕಾರಣ ಆಲಿಯಾ ಧರಿಸಿರುವ ಬಟ್ಟೆ ಬೆಲೆ ಬಗ್ಗೆ ಜನರಿಗೆ ಚಿಂತೆ ಆಗಿದೆ.
ಸದ್ಯ, ಅಂದಾಜು ಪ್ರಕಾರ ಆಲಿಯಾ ಭಟ್ ಧರಿಸಿದ ಫ್ಯಾಷನ್ ಬ್ಯಾಂಡ್ ಪ್ರಬಲ್ ಗುರುಂಗ್ ಗೌನ್ ಬೆಲೆ ಭಾರತದಲ್ಲಿ ಸುಮಾರು 3 ಲಕ್ಷದ 38 ಸಾವಿರದಿಂದ ಪ್ರಾರಂಭವಾಗಲಿದೆ. ಹೀಗಾಗಿ ಆಲಿಯಾ ಧರಿಸಿದ ಕಾಸ್ಟಿಯುಮ್ ಬಗ್ಗೆ ಎಲ್ಲರಿಗೂ ಕುತೂಹಲ ಮೂಡಿದ್ದು ನಿಜ.
ಇದನ್ನೂ ಓದಿ: ಪಿಎಂ ಮುದ್ರಾ ಸ್ಕೀಮ್ ನಲ್ಲಿ 10 ಲಕ್ಷ ರೂವರೆಗೂ ಸಾಲ!!!













