Home Breaking Entertainment News Kannada ಮುಂದುವರಿದ ಸಿರಿ ತಾರೆಯರ ಸರಣಿ ಆತ್ಮಹತ್ಯೆ !! | ವಿಲನ್ ಪಾತ್ರದಲ್ಲಿ ಮಿಂಚಿದ್ದ ನಟ ಆತ್ಮಹತ್ಯೆಗೆ...

ಮುಂದುವರಿದ ಸಿರಿ ತಾರೆಯರ ಸರಣಿ ಆತ್ಮಹತ್ಯೆ !! | ವಿಲನ್ ಪಾತ್ರದಲ್ಲಿ ಮಿಂಚಿದ್ದ ನಟ ಆತ್ಮಹತ್ಯೆಗೆ ಶರಣು

Hindu neighbor gifts plot of land

Hindu neighbour gifts land to Muslim journalist

ಭಾರತೀಯ ಸಿನಿಮಾ ರಂಗದಲ್ಲಿ ಸರಣಿ ಆತ್ಮಹತ್ಯೆ ಪ್ರಕರಣಗಳು ಬೆಚ್ಚಿ ಬೀಳಿಸುತ್ತಿವೆ. ಅಂತೆಯೇ ಇದೀಗ ನಿವೀನ್ ಪೌಳಿ ನಟನೆಯ ಆಕ್ಷನ್ ಹೀರೋ ಬಿಜು ಸಿನಿಮಾದಲ್ಲಿ ವಿಲನ್ ಆಗಿ ಮಿಂಚಿದ್ದ ಮಲಯಾಳಂ ನಟ ಎನ್.ಡಿ. ಪ್ರಸಾದ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಕ್ಕಳು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದುಕೊಂಡಿರುವ ಪ್ರಸಾದ್, ಮನೆಗೆ ಬಂದ ಮಕ್ಕಳು ತಂದೆಯ ಸಾವನ್ನು ನೆರೆಹೊರೆಯವರಿಗೆ ತಿಳಿಸಿದ್ದಾರೆ. ಆನಂತರ ಪೊಲೀಸರು ಆಗಮಿಸಿ, ಪ್ರಾಥಮಿಕ ತನಿಖೆ ಕೂಡ ಕೈಗೊಂಡಿದ್ದಾರೆ.

ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುವ ಪ್ರಸಾದ್ ಕುಟುಂಬದ ಕಲಹದಿಂದ ಬೇಸತ್ತಿದ್ದರು ಎಂದು ಹೇಳಲಾಗುತ್ತಿದೆ. ಖಳನಟನಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಪ್ರಸಾದ್, ಹಲವು ವರ್ಷಗಳಿಂದ ಹೆಂಡತಿಯಿಂದ ದೂರವಿದ್ದರಂತೆ. ಹಾಗಾಗಿ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗುತ್ತಿದೆ.

ಖಿನ್ನತೆಯ ಕಾರಣದಿಂದಾಗಿ ಡ್ರಗ್ಸ್ ಕೂಡ ಸೇವಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಡ್ರಗ್ ಪ್ರಕರಣದಲ್ಲಿ ಈ ಹಿಂದೆ ಇವರ ಹೆಸರು ಸೇರಿಕೊಂಡಿತ್ತು. ಇವರ ಬಳಿ ಡ್ರಗ್ಸ್ ಪತ್ತೆಯಾದ ಕಾರಣಕ್ಕಾಗಿ ಬಂಧನ ಕೂಡ ಆಗಿತ್ತು ಎನ್ನುವ ಸುದ್ದಿಯೂ ಇದೆ.