Home Breaking Entertainment News Kannada ಗೂಗಲ್ ಮ್ಯಾಪ್ ನಲ್ಲೂ ಸಿಗುತ್ತೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಲೊಕೇಶನ್ !!...

ಗೂಗಲ್ ಮ್ಯಾಪ್ ನಲ್ಲೂ ಸಿಗುತ್ತೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಲೊಕೇಶನ್ !! | ಚಿತ್ರರಂಗ ಹಿಂದೆಂದೂ ಮಾಡದ ಹೊಸ ದಾಖಲೆ ನಿರ್ಮಿಸಿದೆ ಕೆಜಿಎಫ್

Hindu neighbor gifts plot of land

Hindu neighbour gifts land to Muslim journalist

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಲನಚಿತ್ರ ಯಾರಿಗೆ ಗೊತ್ತಿಲ್ಲ ಹೇಳಿ. ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದ ಕೆಜಿಎಫ್ ಇದೀಗ ಎರಡನೇ ಭಾಗ ದೊಂದಿಗೆ ಕೆಲವೇ ದಿನಗಳಲ್ಲಿ ಅಭಿಮಾನಿಗಳ ಕಣ್ಮುಂದೆ ಬರಲಿದೆ. ಭಾಗ ಎರಡನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿರುವ ಈ ಹೊತ್ತಲ್ಲಿ ಸಿನಿಮಾದ ಲೊಕೇಶನ್ ಕುರಿತಾದ ಸುದ್ದಿಯೊಂದು ಹೊರಬಿದ್ದಿದೆ.

ಹೌದು. ಕೆಜಿಎಫ್ ಮೂವೀ ಲೋಕೆಶನ್ ನೋಡಿ ಅಭಿಮಾನಿಗಳು ದಂಗಾಗಿದ್ರು. ಯಾವುದಾದರೂ ಮೂವೀ ಇಷ್ಟವಾದ್ರೆ, ಆ ಲೋಕೆಶನ್‍ಗೆ ನಾವು ಹೋಗಬೇಕು ಎಂದನಿಸುವುದು ಸಾಮಾನ್ಯ. ಅದರಂತೆ ಕೆಜಿಎಫ್ ಮೂವೀ ನೋಡಿದವರು ಲೋಕೆಶನ್ ನೋಡಿ ಸಖತ್ ಇಂಪ್ರೆಸ್ ಆಗಿದ್ದರು. ಈಗ ಆ ಲೋಕೆಶನ್‍ನನ್ನು ಗೂಗಲ್ ತೋರಿಸುತ್ತಿದೆ !!

ಕನ್ನಡದ ಬಹುನಿರೀಕ್ಷೆಯ ಚಿತ್ರ ‘ಕೆಜಿಎಫ್-ಚಾಪ್ಟರ್ 2’ ಇದೇ ವರ್ಷ ಏಪ್ರಿಲ್ 14 ರಂದು ತೆರೆಗೆ ಬರಲಿದೆ. ಈ ಸಿನಿಮಾ ನೋಡಲು ಕನ್ನಡಿಗರು ಮಾತ್ರವಲ್ಲ, ಇಡೀ ಜಗತ್ತೇ ಕಾತೂರದಿಂದ ಕಾಯುತ್ತಿದೆ. ಅದಕ್ಕೆ ತಕ್ಕಂತೆ ಈ ಸಿನಿಮಾ ತಂಡ ಸಹ ಹೊಸ ಹೊಸ ಸುದ್ದಿಗಳನ್ನು ಕೊಡುತ್ತಾ ಜನರಿಗೆ ಇನ್ನೂ ಸಿನಿಮಾ ನೋಡಲು ಕುತೂಹಲ ಮೂಡಿಸುತ್ತಿದೆ. ಅಲ್ಲದೇ ಈ ಸಿನಿಮಾ ಇನ್ನೂ ರಿಲೀಸ್ ಸಹ ಆಗಿಲ್ಲ, ಆದರೂ ಈಗಲೇ ಕೆಜಿಎಫ್ 2 ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.

‘ಕೆಜಿಎಫ್’ ದಾಖಲೆಗೆ ಈಗ ಮತ್ತೊಂದು ಹೊಸ ದಾಖಲೆ ಸೇರಿಕೊಂಡಿದ್ದು, ಈ ಮೂಲಕ ಅಚ್ಚರಿ ಮೂಡಿಸಿದೆ. ಸಿನಿಮಾದಲ್ಲಿ ಯಾವುದೇ ಸೆಟ್‍ಗಳನ್ನು ಹಾಕಿದರೂ ಅದು ತಾತ್ಕಾಲಿಕವಾಗಿರುತ್ತದೆ. ಸೆಟ್ ಹಾಕಿದ ಮೇಲೆ ಅದನ್ನು ನಿಗದಿತ ಸಮಯದ ಬಳಿಕ ತೆರವು ಮಾಡಲಾಗುತ್ತದೆ. ಆದರೆ ಕೆಜಿಎಫ್ ಸೆಟ್ ತೆರವಾದರೂ, ಆ ಜಾಗ ಮಾತ್ರ ಕೆಜಿಎಫ್ ಖ್ಯಾತಿಯಿಂದಲೇ ಪ್ರಸಿದ್ಧಿ ಹೊಂದಿದೆ.

ಗೂಗಲ್ ಮ್ಯಾಪ್‍ನಲ್ಲಿ ‘ಕೆಜಿಎಫ್’ ಸೆಟ್‍ನ ವಿಳಾಸ ಸೃಷ್ಟಿಯಾಗಿದೆ. ‘ಕೆಜಿಎಫ್’ ಸಿನಿಮಾ ಶೂಟಿಂಗ್ ಮಾಡಿದ ಸ್ಥಳ ಗೂಗಲ್ ನಲ್ಲಿ ‘ಕೆಜಿಎಫ್ ಫಿಲ್ಮ್ ಸೆಟ್’ ಎಂದು ಮರುನಾಮಕರಣಗೊಂಡಿದೆ. ಇದನ್ನು ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಹಿಂದೆ ಯಾರು ಮಾಡಿರದ ಹೊಸ ದಾಖಲೆಯನ್ನು ಕೆಜಿಎಫ್ ಸಿನಿಮಾ ಮಾಡಿದೆ.

‘ಕೆಜಿಎಫ್ ಸೆಟ್’ ಎಂದು ಟೈಪ್ ಮಾಡಿದಾಗ ‘ಕೆಜಿಎಫ್ ಫಿಲ್ಮ್ ಸೆಟ್’ ಬರುತ್ತೆ. ಈ ಸಿನಿಮಾವನ್ನು ಕರ್ನಾಟಕದ ‘ಕೆಜಿಎಫ್’ ಸೇರಿದಂತೆ, ಸುತ್ತಮುತ್ತ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಅಲ್ಲೇ ‘ಕೆಜಿಎಫ್’ನಿಂದ ಸ್ವಲ್ಪ ದೂರದಲ್ಲಿ ಚಿತ್ರದ ಸೆಟ್ಟನ್ನು ನಿರ್ಮಾಣ ಮಾಡಲಾಗಿತ್ತು. ಆ ಸೆಟ್‍ನಲ್ಲಿ ‘ಕೆಜಿಎಫ್’ ಭಾಗ ಒಂದು ಮತ್ತು ಎರಡರ ಚಿತ್ರೀಕರಣ ಮಾಡಲಾಗಿದೆ. ಚಿತ್ರತಂಡ ಭಾಗ ಒಂದರ ನಂತರ ಸಿನಿಮಾ ಸೆಟ್ ಹಲವು ವರ್ಷಗಳ ಕಾಲ ಅಲ್ಲೇ ಉಳಿಸಿಕೊಂಡಿತು. ಈಗ ಆ ಜಾಗ ‘ಕೆಜಿಎಫ್ ಫಿಲ್ಮ್ ಸೆಟ್’ ಎಂದು ಗೂಗಲ್ ಮ್ಯಾಪ್‍ನಲ್ಲಿ ರಿಜಿಸ್ಟರ್ ಆಗಿದ್ದು, ದಾಖಲೆಯೇ ಸರಿ.