Home Breaking Entertainment News Kannada Hamsa : ಟಾಸ್ಕ್ ವೇಳೆ ಹಂಸವರನ್ನು ತಬ್ಬಿ ಹಿಡಿದುಕೊಂಡ ಗೋಲ್ಡ್ ಸುರೇಶ್ – ಹಂಸ ಪತಿ...

Hamsa : ಟಾಸ್ಕ್ ವೇಳೆ ಹಂಸವರನ್ನು ತಬ್ಬಿ ಹಿಡಿದುಕೊಂಡ ಗೋಲ್ಡ್ ಸುರೇಶ್ – ಹಂಸ ಪತಿ ಹೇಳಿದ್ದೇನು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

Hamsa : ಕನ್ನಡದ ಬಿಗ್ ಬಾಸ್ ಸೀಸನ್ 11 ನಾಲ್ಕನೇ ವಾರವನ್ನು ಕಳೆದು ಐದನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಕೊನೆಯ ವಾರ ಹಂಸ(Hamsa ) ಅವರು ಎಲಿಮಿನೇಟ್ ಕೂಡ ಆಗಿದ್ದಾರೆ. ಇದೀಗ ಅವರನ್ನು ಕೆಲವು ಮಾಧ್ಯಮಗಳು ಮಾತನಾಡಿಸುತ್ತಿದ್ದು ತಮ್ಮ ಬಿಗ್ ಬಾಸ್ ಮನೆ ಅನುಭವಗಳನ್ನು ಹಂಚಿಕೊಳ್ಳಲು ಹೇಳುತ್ತಿದ್ದಾರೆ. ಇದರಲ್ಲಿ ಹಂಸ ಅವರ ಪತಿ ಕೂಡ ಭಾಗವಹಿಸಿದ್ದಾರೆ

ಅಂತೆಯೇ ಟಾಸ್ಕ್ ವೇಳೆ ನಡೆದಂತಹ ಕೆಲವು ಅವಘಡಗಳ ಬಗ್ಗೆ, ಕೆಲವು ನಿಯಮಗಳ ಬಗ್ಗೆ ಹಂಸ ಮತ್ತು ಅವರ ಪತಿ ಮಾತನಾಡಿದ್ದಾರೆ. ಈ ವೇಳೆ ನಿರೂಪಕರು ಟಾಸ್ಕ್ ಒಂದರಲ್ಲಿ ಗೋಲ್ಡ್ ಸುರೇಶ್ ಅವರು ಹಂಸವರನ್ನು ತಬ್ಬಿ ಹಿಡಿದುಕೊಂಡ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಹಂಸ ಅವರ ಪತಿ ತುಂಬಾ ತಾಳ್ಮೆಯಿಂದಲೇ ಉತ್ತರಿಸಿದ್ದಾರೆ.

ಹೌದು ಬಿಗ್ ಬಾಸ್ ನಲ್ಲಿ ‘ಬಿಗ್ ಬಾಸ್ ಸೌಧ’ ಎಂಬ ಟಾಸ್ಕ್ ವೇಳೆ ಗೋಲ್ಡ್ ಸುರೇಶ್ ಅವರು ಗೇಮ್ ಆಡುವ ಆತುರದಲ್ಲಿ ಹಂಸ ಅವರ ಸೊಂಟವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಈ ಬಗ್ಗೆ ನಿರೂಪಕರು ಹಂಸ ಅವರ ಪತಿಗೆ ಈ ಒಂದು ದೃಶ್ಯ ನಿಮಗೆ ಏನನ್ನಿಸಿತು ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ತಾಳ್ಮೆಯಿಂದಲೇ ಉತ್ತರಿಸಿದ ಅವರು ನೋಡುವಾಗ ನನಗೂ ಸ್ವಲ್ಪ ಇರಿಸು ಮುರಿಸು ಉಂಟಾಯಿತು.ಆದರೆ ಅದು ಗೇಮ್. ಅದನ್ನು ಹಾಗೆ ತೆಗೆದುಕೊಳ್ಳಬೇಕು. ಬಟ್ ಬಿಗ್ ಬಾಸ್ ಈ ನಿಯಮವನ್ನು ಸ್ವಲ್ಪ ಬಿಗಿಗೊಳಿಸಬೇಕಿತ್ತು. ಆಗ ಈ ರೀತಿಯ ಎಡವಟ್ಟುಗಳು ಆಗುತ್ತಿರಲಿಲ್ಲ. ನೋಡುವಾಗ ಹೆಣ್ಣು ಮಗಳಿಗೆ ಹೀಗೆ ಆಗಬಾರದು ಎಂದು ಅನಿಸುವುದು ಸಹಜ ಎಂದು ಉತ್ತರಿಸಿದ್ದಾರೆ.