Home Breaking Entertainment News Kannada ನೆಟ್ಟಿಗರ ಪ್ರಶ್ನೆಗಳಿಗೆ ಹೆದರಿದ ಚಾರ್ಲಿ ಸಾಮಾಜಿಕ ಜಾಲತಾಣದಲ್ಲಿ ನಾಪತ್ತೆ!!ಪುನೀತ್ ಆತ್ಮದ ಜೊತೆ ಮಾತನಾಡಿದ್ದವವನಿಗೆ ಕ್ಯಾಕರಿಸಿ ಉಗಿಯುತ್ತಿದೆ...

ನೆಟ್ಟಿಗರ ಪ್ರಶ್ನೆಗಳಿಗೆ ಹೆದರಿದ ಚಾರ್ಲಿ ಸಾಮಾಜಿಕ ಜಾಲತಾಣದಲ್ಲಿ ನಾಪತ್ತೆ!!ಪುನೀತ್ ಆತ್ಮದ ಜೊತೆ ಮಾತನಾಡಿದ್ದವವನಿಗೆ ಕ್ಯಾಕರಿಸಿ ಉಗಿಯುತ್ತಿದೆ ಅಪ್ಪು ಅಭಿಮಾನಿ ಬಳಗ

Hindu neighbor gifts plot of land

Hindu neighbour gifts land to Muslim journalist

ಯುವನಟ, ಅಭಿಮಾನಿಗಳ ಪವರ್ ಸ್ಟಾರ್ ಅಪ್ಪು ಪುನೀತ್ ರಾಜಕುಮಾರ್ ಅಕಾಲಿಕ ಮರಣಹೊಂದಿದ ಮರುದಿನವೇ, ಆತ್ಮಗಳ ಜೊತೆ ಮಾತನಾಡುವ ಸ್ವಘೋಷಿತ ವಿದೇಶಿ ವ್ಯಕ್ತಿಯೊಬ್ಬ ಅಪ್ಪು ಆತ್ಮದ ಜೊತೆಗೆ ಮಾತನಾಡಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕೆಲ ದಿನಗಳಿಂದ ಜಾಲತಾಣಗಳಲ್ಲಿ ಲೈಕ್ಸ್ ಗಿಟ್ಟಿಸಿಕೊಂಡು ಮೆರೆದ ಆತನಿಗೀಗ ಜಾಲತಾಣಕ್ಕೆ ಬರಲು ಭಯವುಂಟಾಗಿದೆ. ಅಪ್ಪು ಆತ್ಮದ ಜೊತೆ ಮಾತನಾಡಿದ್ದಾಗಿ ಜನರನ್ನು ನಂಬಿಸಿದ್ದ ಆತನಿಗೆ ನೆಟ್ಟಿಗರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದು, ಅಭಿಮಾನಿಗಳಿಗೆ ಉತ್ತರಿಸಲು ಮಾತಿಲ್ಲದೆ ತಡವರಿಸುತ್ತಿದ್ದಾನೆ.

ಚಾರ್ಲಿ ಚಿಟ್ವೆಂಡೆನ್ ಎಂಬ ವಿದೇಶಿಗನೊಬ್ಬ ಅಪ್ಪು ಮರಣದ ಮಾರನೇ ದಿನವೇ ಅಪ್ಪು ಆತ್ಮದ ಜೊತೆಗೆ ಮಾತನಾಡಿದ್ದು, ಅಪ್ಪು ತನ್ನಿಬ್ಬರು ಹೆಣ್ಣು ಮಕ್ಕಳನ್ನು ಹೆಚ್ಚು ಪ್ರೀತಿಸುವುದಾಗಿ ಹೇಳಿದ್ದು, ಅದಲ್ಲದೇ ಹಾರ್ಟ್ ಫೇಲ್ ಡಾಕ್ಟರ್ ಡಾಕ್ಟರ್ ಎಂದೂ ಹೇಳಿರುವುದಾಗಿ ಅಭಿಮಾನಿಗಳನ್ನು ನಂಬಿಸಿದ್ದಾನೆ. ಇದೆಲ್ಲವನ್ನು ಕೆಲ ಮಾಧ್ಯಮಗಳು ಕೂಡಾ ಪ್ರಸಾರ ಮಾಡಿದ್ದು, ಸದ್ಯ ಆತನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಪು ಅಭಿಮಾನಿಗಳಿಂದ ಆಕ್ರೋಶಿತ ಪ್ರಶ್ನೆಗಳು ಬರಲಾರಭಿಸಿದ್ದು, ಆತ ಸಾಮಾಜಿಕ ಜಾಲತಾಣದಲ್ಲಿ ಹಾಜರಿಯಾಗಲು ಹಿಂದೆಮುಂದೆ ನೋಡುವಂತೆ ಮಾಡಿದೆ.

ಅದೇನೇ ಇರಲಿ. ಅಕಾಲಿಕ ಮರಣದಿಂದ ಅರಗಿಸಿಕೊಳ್ಳಲಾಗದ ನೋವಲ್ಲಿ ಅಪ್ಪು ಕುಟುಂಬಸ್ಥರು, ಅಭಿಮಾನಿಗಳು ಇರುವ ಸಂದರ್ಭದಲ್ಲಿ ಇಂತಹ ಪ್ರಚಾರಗಿಟ್ಟಿಸಿಕೊಂಡು, ಸಾಮಾಜಿಕ ಜಾಲತಾಣಗಲ್ಲಿ ಸುಳ್ಳುಹೇಳಿ ಜನರನ್ನು ದಾರಿತಪ್ಪಿಸುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಅಪ್ಪು ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ.