Home Breaking Entertainment News Kannada Kajols Deepfake Video: ಬಾಲಿವುಡ್ ನಟಿ ಕಾಜೋಲ್ ಬಟ್ಟೆ ಬದಲಿಸುವ ವಿಡಿಯೋ ವೈರಲ್ – ಕೇಂದ್ರ...

Kajols Deepfake Video: ಬಾಲಿವುಡ್ ನಟಿ ಕಾಜೋಲ್ ಬಟ್ಟೆ ಬದಲಿಸುವ ವಿಡಿಯೋ ವೈರಲ್ – ಕೇಂದ್ರ ಎಚ್ಚರಿಸಿದ್ರೂ ನಿಲ್ಲದ ಕಿಡಿಗೇಡಿಗಳ ಅಟ್ಟಹಾಸ !!

Kajols Deepfake Video

Hindu neighbor gifts plot of land

Hindu neighbour gifts land to Muslim journalist

Kajols Deepfake Video: ರಶ್ಮಿಕಾ ಮಂದಣ್ಣActress (Rashmika Mandanna)ಅವರ ಡೀಪ್ ಫೇಸ್ ವೀಡಿಯೋ ವೈರಲ್ ಆಗಿ ಸಂಚಲನ ಸೃಷ್ಟಿ ಮಾಡಿತ್ತು. ಈ ಸಂದರ್ಭ ಚಿತ್ರರಂಗದ ಅಮಿತಾ ಬಚ್ಚನ್ ಸೇರಿದಂತೆ ಇನ್ನುಳಿದ ನಟರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ, ಕತ್ರಿನಾ ಕೈಫ್ ಬಳಿಕ ಕಾಜೋಲ್ ಅವರ ಡೀಪ್ ಫೇಕ್ ವೀಡಿಯೊ(Kajols Deepfake Video) ವೈರಲ್ ಆಗಿದೆ.

ನಟಿ ಕಾಜೋಲ್(Actress Kajol)ಅವರ ವಿಡಿಯೋವೊಂದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಸಕತ್ ವೈರಲ್ ಆಗಿದ್ದು, ಇದರಲ್ಲಿ ಬಟ್ಟೆ ಅಂಗಡಿಯೊಂದರ ಟ್ರಯಲ್ ರೂಮಿನಲ್ಲಿ ನಟಿ ಕಾಜೋಲ್ ಅವರು, ಬಟ್ಟೆ ಬಿಚ್ಚಿ ಹೊಸ ಬಟ್ಟೆ ಹಾಕಿಕೊಳ್ಳುವಂತೆ ಕಂಡು ಬರುತ್ತಿದೆ. ರಶ್ಮಿಕಾ ಮಂದಣ್ಣ ಹಾಗೂ ಕತ್ರೀನಾ ಕೈಫ್ ಅವರಂತೆಯೇ ಇದೀಗ ಕಾಜೋಲ್ ಅವರ ಫೋಟೋಗೆ ಡೀಪ್ಫೇಕ್ ತಂತ್ರಜ್ಞಾನ ಬಳಸಲಾಗಿದೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ಬೇರೆ ಮಹಿಳೆಯ ಮುಖಕ್ಕೆ ಕಾಜೋಲ್ ಅವರ ಮುಖವನ್ನು ಸೇರಿಸಿ ವಿಡಿಯೋ ವೈರಲ್ ಮಾಡಲಾಗಿದೆ.

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವೀಡಿಯೊದ ಬಗ್ಗೆ ನಡೆಯುತ್ತಿರುವ ತನಿಖೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.ಇತ್ತೀಚಿಗೆ Get ready with me ಟ್ರೆಂಡ್ ಆರಂಭವಾಗಿದ್ದು, ಇದರಲ್ಲಿ ಸೆಲೆಬ್ರಿಟಿಗಳು ಬಟ್ಟೆ ಮಳಿಗೆಯಲ್ಲಿ ವಿವಿಧ ರೀತಿಯ ಔಟ್ಫಿಟ್ಗಳನ್ನು ಧರಿಸಿ, ಪ್ರದರ್ಶಿಸುತ್ತಾರೆ. ಇದೇ ರೀತಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಒಬ್ಬರು ಬಟ್ಟೆ ಚೇಂಜ್ ಮಾಡುತ್ತಿರುವ ವಿಡಿಯೋಗೆ ನಟಿ ಕಾಜೋಲ್ ಅವರ ಮುಖವನ್ನು ಮಾರ್ಫ್ ಮಾಡಲಾಗಿ ಅದನ್ನು ವೈರಲ್ ಮಾಡಲಾಗಿದೆ. ಇದರಿಂದ ಮಹಿಳೆಯರ ಸುರಕ್ಷತೆಯ ಬಗ್ಗೆ ಹೆಚ್ಚು ಯೋಚನೆ ಮಾಡುವಂತಾಗಿದೆ. Silent mode is on ಈ ವೀಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬಿಹಾರ ಮೂಲದ 19 ವರ್ಷದ ಯುವಕನನ್ನು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: SBI ಬ್ಯಾಂಕಿನಲ್ಲಿ 8,283 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ – ಇಲ್ಲಿದೆ ಸಂಪೂರ್ಣ ಮಾಹಿತಿ