Home Breaking Entertainment News Kannada ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಜೊತೆಗೆ ನಟಿಸಿದ್ದ ನಟಿಗೆ ‘ಪಾಕಿಸ್ತಾನಿ ಭಿಕ್ಷುಕಿ’ ಎಂದ ನೆಟ್ಟಿಗರು...

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಜೊತೆಗೆ ನಟಿಸಿದ್ದ ನಟಿಗೆ ‘ಪಾಕಿಸ್ತಾನಿ ಭಿಕ್ಷುಕಿ’ ಎಂದ ನೆಟ್ಟಿಗರು !!

Hindu neighbor gifts plot of land

Hindu neighbour gifts land to Muslim journalist

ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳ ಮೇಲೆ ಟ್ರೋಲ್ ಹೆಚ್ಚಾಗೇ ನಡೆಯುತ್ತದೆ. ಸೆಲೆಬ್ರಿಟಿಗಳ ಉಡುಗೆ ತೊಡುಗೆ, ಸಿನಿಮಾ, ಮ್ಯಾನರಿಸಂ ಕುರಿತು ಕಾಮೆಂಟ್‌ಗಳನ್ನು ಮಾಡುತ್ತಲೇ ಇರುತ್ತಾರೆ.‌ ಕೆಲವು ಸೆಲೆಬ್ರಿಟಿಗಳು ಇಂಥಹ ಟ್ರೋಲಿಂಗನ್ನು ಗಮನಿಸದೆ ಸುಮ್ಮನಾಗುತ್ತಾರೆ. ಆದರೆ ಕೆಲವರು ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಾರೆ. ಇತ್ತೀಚೆಗಷ್ಟೇ ನೆಟ್ಟಿಗರೊಬ್ಬರು ಪಾಕಿಸ್ತಾನಿ ನಟಿ ಮಹಿರಾ ಖಾನ್ ಅವರಿಗೆ ಸ್ವಲ್ಪ ಖಾರವಾಗಿ ಕಾಮೆಂಟ್ ಮಾಡಿದ್ದಾರೆ.

ಹೌದು. ನಟಿಗೆ ಮಾಡಿದ ಆ ಕಾಮೆಂಟ್ ಇದೀಗ ವೈರಲ್ ಆಗಿದೆ. ‘ಪಾಕಿಸ್ತಾನಿ ಭಿಕ್ಷುಕಿ.. ಮೊದಲು ನಿಮ್ಮ ದೇಶದತ್ತ ಫೋಕಸ್ ಮಾಡು’ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನು ನೋಡಿದ ಮಹಿರಾ ಎದಿರೇಟು ಕೊಟ್ಟು ಬಾಯಿ ಮುಚ್ಚಿಸಿದ್ದಾಳೆ. ಈ ಟ್ವೀಟ್‌ಗಳನ್ನು ನಂತರ ಅಳಿಸಲಾಗಿದ್ದರೂ, ಅವುಗಳ ಸ್ಕ್ರೀನ್‌ಶಾಟ್‌ಗಳು ಈಗಾಗಲೇ ಎಲ್ಲೆಡೆ ಹರಿದಾಡುತ್ತಿದೆ. ಮತ್ತೊಬ್ಬ ನೆಟ್ಟಿಗ ಮಹಿರಾಗೆ ದಯವಿಟ್ಟು ಒಮ್ಮೆ ನಿನಗೆ ಪ್ರಪೋಸ್ ಮಾಡಬಹುದೇ? ಎಂದು ಕೇಳಿದ್ದಾನೆ. ಬೇಡ ಅಂದವರ್ಯಾರು, ಮಾಡಿ ಎಂದಾಕೆ ಉತ್ತರಿಸಿದ್ದಾಳೆ.

ಬಾಲಿವುಡ್‍ನ ರಯಿಸ್‍ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ಮಹಿರಾ ನಟಿಸಿದ್ದಾರೆ. 2017 ರಲ್ಲಿ ಪಾಕಿಸ್ತಾನಿ ನಟರನ್ನು ಭಾರತದಲ್ಲಿ ನಿಷೇಧಿಸಿದ್ದರಿಂದ ನಂತರ ಇಲ್ಲಿ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿಗೆ ಇದೀಗ ಟ್ರೋಲಿಗರು ಭರ್ಜರಿಯಾಗಿ ಕಾಲೆಳೆದಿದ್ದಾರೆ.