Home Breaking Entertainment News Kannada Dali Dhananjay:ಸಂಜೆ 5 ಆದ್ಮೇಲೆ ಮದುವೆ ಆಗಿದ್ರೆ ಒಳ್ಳೆಯದಿತ್ತು ಅನ್ಸುತ್ತೆ- ನಟ ಡಾಲಿ ಮಾತು ಸಖತ್...

Dali Dhananjay:ಸಂಜೆ 5 ಆದ್ಮೇಲೆ ಮದುವೆ ಆಗಿದ್ರೆ ಒಳ್ಳೆಯದಿತ್ತು ಅನ್ಸುತ್ತೆ- ನಟ ಡಾಲಿ ಮಾತು ಸಖತ್ ವೈರಲ್!

Dali Dhananjay

Hindu neighbor gifts plot of land

Hindu neighbour gifts land to Muslim journalist

Dali Dhananjay: ಡಾಲಿ ಧನಂಜಯ್ (Dali Dhananjay) ನಟನೆಯ ‘ಗುರುದೇವ್ ಹೊಯ್ಸಳ’ (Gurudev Hoysala) ಸಿನಿಮಾ ಕಳೆದ ವಾರವಷ್ಟೇ ರಿಲೀಸ್ ಆಗಿದ್ದು, ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರೂ ಚಿತ್ರದ ಬಗ್ಗೆ ಒಳ್ಳೆಯ ರೆಸ್ಪಾನ್ಸ್ ನೀಡಿದ್ದಾರೆ.

ಹೊಯ್ಸಳಾ ಸಿನಿಮಾದಲ್ಲಿ ಗಂಡ-ಹೆಂಡತಿಯಾಗಿ ಡಾಲಿ-ಅಮೃತ(Amrita) ಕಾಣಿಸಿಕೊಂಡಿದ್ದಾರೆ. ಡಾಲಿ ಧನಂಜಯ್ ಹಾಗೂ ನಟಿ ಅಮೃತಾ ಅಭಿನಯದ ಹೊಯ್ಸಳ ಸಿನಿಮಾ ನೋಡಿದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ(Actress Ramya) ಅವರು ಕೂಡ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಧನು ಸ್ಯಾಂಡಲ್‌ವುಡ್‌ನ ಮೋಸ್ಟ್ ಎಲಿಜಿಬಲ್‌ ಬ್ಯಾಚ್ಯುಲರ್‌ ಆಗಿದ್ದು, ಜಗ್ಗೇಶ್ ಅವರ ಹಾಸ್ಯಪ್ರಧಾನ ಚಿತ್ರವಾಗಿರುವ ‘ರಾಘವೇಂದ್ರ ಸ್ಟೋರ್ಸ್’ ನಲ್ಲಿ ಜಗ್ಗೇಶ್ ಅವರೂ ಬ್ಯಾಚ್ಯುಲರ್‌ ಆಗಿ ಕಾಣಿಸಿಕೊಂಡಿದ್ದಾರೆ.

ಮದುವೆ ವಯಸ್ಸಾದರೂ ಮದುವೆ ಆಗದೇ ಇರೋ ಸಿಂಗಲ್ ಸಿಂಗಳೀಕಗಳ ಕೈಯಲ್ಲಿ ಈ ಸಿನಿಮಾದ(Movie) ಸಿಂಗಲ್ ಸುಂದರ ಅನ್ನೋ ಹಾಡನ್ನು ಬಿಡುಗಡೆ ಮಾಡಿಸಬೇಕು ಎಂಬುದು ನಿರ್ದೇಶಕರ, ಸಂಗೀತ ನಿರ್ದೇಶಕರ ಯೋಚನೆಯೋ ಅಥವಾ ಯೋಜನೆಯೂ ಗೊತ್ತಿಲ್ಲ. ಆದರೆ ಅವರಿಗೆ ತಗಲಾಕಿಕೊಂಡ ಬ್ಯಾಚುಲರ್ ಗಳು ಧನಂಜಯ ಮತ್ತು ರಕ್ಷಿತ್ ಶೆಟ್ಟಿ ಹೀಗಾಗಿ, ಧನಂಜಯ ಅವರ ಮನೆಗೆ ಸಿನಿಮಾ ಟೀಮ್ ಹಾಜರಿ ನೀಡಿದ್ದಾರೆ. ಆ ಹೊತ್ತಿಗೆ, ‘ಸಿನಿಮಾದವ್ರಿಗೆ ಹೆಣ್ ಕೊಡದಿದ್ರೆ ಬೇಡ ಬಿಡ್ರಿ, ಸಿನಿಮಾದಲ್ಲೇ ಹತ್ ಮದ್ವೆ ಆಗ್ತೀವಂತೆ’ ಅನ್ನುತ್ತಾ ದಿ ಗ್ರೇಟ್ ಧನು ಅವರು ಜಬರ್ದಸ್ತ್ ಎಂಟ್ರಿ ನೀಡುತ್ತಾರೆ. ಮ್ಯೂಸಿಕ್ ಡೈರೆಕ್ಟರ್ ಅಜನೀಶ್‌ ಅವರು ಮಾತಾಡಿದ್ದು, ‘ನಿಮ್ಗೂ ವಯಸ್ಸಾಯ್ತು, ಆದ್ರೂ ಸಿಂಗಲ್ಲಾಗೇ ಇದ್ದೀರ, ಹೀಗಾಗಿ ನಮ್ ಸಿನಿಮಾದ ಸಿಂಗಲ್ ಸಾಂಗ್ ರಿಲೀಸ್ ಮಾಡಬೇಕು ಎಂದಿದ್ದು, ಧನಂಜಯ್ ಈ ವೇಳೆ ಶುಭ ಕೋರಿದ್ದಾರೆ.

ಅಜನೀಶ್ ಹತ್ರ ಧನು, ನಾಗಭೂಷಣ್ ಆಫ್ ದಿ ರೆಕಾರ್ಡ್(Of the record) ಮಾತು ಇದಾಗಿದ್ದು, ‘ನಂಗೆ ಸಂಜೆ ಐದು ಗಂಟೆ ಮೇಲೆ ಮದ್ವೆ (Marriage)ಆಗಿದ್ರೆ ಚೆನ್ನಾಗಿರ್ತಿತ್ತು ಅಂತನಿಸುತ್ತೆ’ ಅಂತ ಬ್ಯಾಚುಲರ್‌ ಅಜನೀಶ್‌ ಅವರು ಹೇಳುತ್ತಾರೆ. ‘ನಂಗೂ ಪ್ಯಾಕಪ್ ಆದ್ಮೇಲೆ ಹಾಗನಿಸುತ್ತೆ’ ಅಂತ ಧನು ಉತ್ತರ ನೀಡಿದ್ದಾರೆ. ಈ ಕಡೆ ನಾಗಭೂಷಣ್, ‘ನಂಗೆ ಬೆಳಬೆಳಗ್ಗೇ ಹಾಗನಿಸುತ್ತೆ’ ಎಂದರೆ, ಅಂದಹಾಗೆ ಈ ‘ಸಿಂಗಲ್ ಸುಂದ್ರ’ ಹಾಡು ಬಿಡುಗಡೆ ಆಗ್ತಿರೋದು ನಾಳೆ ಸಂಜೆ ಐದು ಗಂಟೆಗೆ, ಹೀಗಾಗಿ, ಸಾಂಗ್ ಪ್ರಮೋಶನ್ ಗೆ ಇಷ್ಟೆಲ್ಲಾ ಗಿಮಿಕ್ ಆ ಅನ್ನೋದು ಸದ್ಯದ ಡೌಟ್!! ಆ ಐದು ಗಂಟೆ ಅನ್ನೋದು ಕೇಳಿ ಧನೂಗೆ ಏನನಿಸ್ತೋ ಏನೋ, ‘ನಂಗೆ ಐದು ಗಂಟೆಗೂ ಒಮ್ಮೊಮ್ಮೆ ಅನಿಸುತ್ತೆ’ ಅಂದು ಬಿಟ್ಟಿದ್ದಾರೆ. ಆದರೆ, ಏನನಿಸುತ್ತೆ ಅನ್ನೋದನ್ನ ಧನು ಕೂಡ ಹೇಳಿಲ್ಲ . ಉಳಿದವರು ಕೂಡ ಕೇಳೋ ಗೋಜಿಗೆ ಹೋಗಿಲ್ಲ.

ಇದನ್ನೂ ಓದಿ: Anand Mahindra : ಅಂಕೋಲಾದ ಈ ಮಹಿಳೆಯ ಸ್ವಚ್ಛತಾ ಕೆಲಸಕ್ಕೆ ಶ್ಲಾಘಿಸಿದ ಆನಂದ್ ಮಹೀಂದ್ರಾ ! ಅಷ್ಟಕ್ಕೂ ಈ ಮಹಿಳೆ ಮಾಡಿದ ಕೆಲಸ ಏನು?