Home Breaking Entertainment News Kannada Akanksha Dubey Death Case: ನಟಿ ಆಕಾಂಕ್ಷ ಸಾವು ಪ್ರಕರಣ, ನಟಿಯ ಒಳ ಉಡುಪಿನಲ್ಲಿ ವೀರ್ಯ...

Akanksha Dubey Death Case: ನಟಿ ಆಕಾಂಕ್ಷ ಸಾವು ಪ್ರಕರಣ, ನಟಿಯ ಒಳ ಉಡುಪಿನಲ್ಲಿ ವೀರ್ಯ ಪತ್ತೆ! ಚುರುಕುಗೊಂಡ ತನಿಖೆ!

Akanksha Dubey Death Case
Image source: Oneindia hindi

Hindu neighbor gifts plot of land

Hindu neighbour gifts land to Muslim journalist

Akanksha Dubey Death Case: ಭೋಜ್‌ಪುರಿ ಸಿನಿಮಾ ಇಂಡಸ್ಟ್ರಿಯ ಜನಪ್ರಿಯ ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ (Suicide) ಪ್ರಕರಣಕ್ಕೆ ಸಂಬಂಧಿಸಿದಂತೆ (Akanksha Dubey Death Case) ಪೊಲೀಸರಿಗೆ ಇದೀಗ ಮಹತ್ವದ ಸುಳಿವು ಲಭ್ಯವಾಗಿದೆ.

ನಟಿ ಆಕಾಂಕ್ಷಾ ದುಬೆ (Bhojpuri Actress Akanksha Dubey) ಮಾರ್ಚ್ 26 ರಂದು ವಾರಣಾಸಿಯ ಹೋಟೆಲ್‌ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇವಲ 25 ವರ್ಷದ ಈ ನಟಿ ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ. ಪೊಲೀಸರು ಸಾವಿನ ಕಾರಣ ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ. ಇದೀಗ ಮುಖ್ಯ ಸುಳಿವು ದೊರಕಿದೆ. ನಟಿಯ ಒಳ ಉಡುಪಿನಲ್ಲಿ ವೀರ್ಯ ಪತ್ತೆಯಾಗಿದೆ.

ಇತ್ತೀಚೆಗೆ ಹೊರಬಿದ್ದ ನಟಿಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯ ಹೊಟ್ಟೆಯಲ್ಲಿ ಆಹಾರ ಇರಲಿಲ್ಲ ಹಾಗೂ ನಟಿ ಮದ್ಯಪಾನ ಮಾಡಿರಲಿಲ್ಲ ಎನ್ನುವುದು ತಿಳಿದುಬಂದಿದೆ. ಆದರೆ, ಆಕೆಯ ಹೊಟ್ಟೆಯಲ್ಲಿ 20ml ನಷ್ಟು ಅಪರಿಚಿತ ಕಂದು ದ್ರವ ಇದ್ದುದು ವರದಿಯಿಂದ ಬೆಳಕಿಗೆ ಬಂದಿದೆ.

ಇನ್ನು ಆಕಾಂಕ್ಷಾ (Akanksha Dubey) ಅವರ ನಿಧನದ ನಂತರ, ಆಕೆಯ ಬಟ್ಟೆಗಳು ಮತ್ತು ಖಾಸಗಿ ಅಂಗದ ಸ್ವ್ಯಾಬ್‌ಗಳನ್ನು ರೋಗಶಾಸ್ತ್ರ ಮತ್ತು ವಿಧಿವಿಜ್ಞಾನ ಪರೀಕ್ಷೆಗಳಿಗೆ ಕಳುಹಿಸಲಾಗಿದೆ. ನಟಿ ಆಕಾಂಕ್ಷಾ ಧರಿಸಿದ್ದ ಉಡುಗೆಯನ್ನು ಪರೀಕ್ಷೆ ಮಾಡಲಾಗಿದ್ದು, ಈ ವೇಳೆ ನಟಿಯ ಒಳ ಉಡುಪಿನಲ್ಲಿ ವೀರ್ಯ (sperm) ಪತ್ತೆಯಾಗಿದೆ. ಹೆಚ್ಚಿನ ಪರೀಕ್ಷೆಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಲಭ್ಯವಾದ ಸಾಕ್ಷಿಯನ್ನು ಕಳುಹಿಸಲಾಗಿದೆ ಎಂದು ವರುಣಾ ವಲಯದ ಡಿಸಿಪಿ ಅಮಿತ್ ಕುಮಾರ್ ತಿಳಿಸಿದ್ದಾರೆ.

ನಟಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೋಜ್‌ ಪುರಿ ಗಾಯಕ ಸಮರ್ ಸಿಂಗ್ ಮತ್ತು ಅವರ ಸಹೋದರ ಸಂಜಯ್ ಸಿಂಗ್ ಇಬ್ಬರನ್ನು ಸೇರಿದಂತೆ ಸಂದೀಪ್ ಸಿಂಗ್ ಮತ್ತು ಅರುಣ್ ಪಾಂಡೆ ಬಂಧಿಸಲಾಗಿತ್ತು. ಬಂಧಿತರ ಮಾದರಿಗಳನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಿದ್ದು, ಅವುಗಳು ಆಕಾಂಕ್ಷಾ ಅವರ ಬಟ್ಟೆಯಲ್ಲಿ ಕಂಡುಬಂದ ವೀರ್ಯದೊಂದಿಗೆ ಹೊಂದಾಣಿಕೆಯಾಗುತ್ತವೆಯೇ ಎನ್ನುವುದು ತಿಳಿಯಲಿದೆ ಎಂದು ವರದಿ ತಿಳಿಸಿದೆ.

ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು “ಸಂಶಯಾಸ್ಪದವಾಗಿ ವರ್ತಿಸುತ್ತಿದ್ದಾರೆ” ಎಂದು ಆಕಾಂಕ್ಷಾ ಪರ ವಕೀಲರು ಇತ್ತೀಚೆಗೆ ಆರೋಪಿಸಿದ್ದಾರೆ ಎನ್ನಲಾಗಿದೆ. ನಟಿಯ‌ ಸಾವಿನ ಕಾರಣ ನಿರಂತರ ತನಿಖೆಯಿಂದ ತಿಳಿದುಬರಬೇಕಿದೆ.

ಉತ್ತರಪ್ರದೇಶದ ಮಿರ್ಜಾಪುರದಲ್ಲಿ ಜನಿಸಿದ ಆಕಾಂಕ್ಷಾ ಭೋಜ್‌ಪುರಿ ಚಿತ್ರರಂಗದಲ್ಲಿ ತನ್ನ ಕಠಿಣ ಪರಿಶ್ರಮದಿಂದ ಕಡಿಮೆ ಸಮಯದಲ್ಲಿ ಸಾಕಷ್ಟು ಜನಮನ್ನಣೆ ಗಳಿಸಿದ್ದರು. ಮೊದಲು ಟಿಕ್‌ಟಾಕ್‌ನಲ್ಲಿ ವಿಡಿಯೋ ಮಾಡುತ್ತಿದ್ದ ಈಕೆ, ತದನಂತರ 2019 ರಲ್ಲಿ, ಮೇರಿ ಜಂಗ್ ಮೇರಾ ಫೈಸ್ಲಾ ಚಿತ್ರದ ಮೂಲಕ ಭೋಜ್‌ಪುರಿ ಚಿತ್ರರಂಗದಲ್ಲಿ ಒಳ್ಳೆ ಬ್ರೇಕ್ ಪಡೆದರು. ಈ ಚಿತ್ರದಲ್ಲಿ, ಆಕಾಂಕ್ಷ ಖೇಸರಿ ಲಾಲ್ ಯಾದವ್ ಅವರ ಜೊತೆ ನಟನೆ ಮಾಡಿದ್ದರು. ಅದರ ನಂತರ ಅವರು ನಿರ್ಹುವಾ-ಪವನ್ ಸಿಂಗ್ ಅವರಂತಹ ಅನೇಕ ದೊಡ್ಡ ಸ್ಟಾರ್‌ಗಳೊಂದಿಗೆ ಕೆಲಸ ಮಾಡಿದರು.

ಇದನ್ನೂ ಓದಿ: Teacher Education: ಇನ್ಮುಂದೆ 12th ಪಾಸ್ ಆದ್ರೆ ಸಾಲಲ್ಲ, ಶಿಕ್ಷಕರಾಗಲು ಪದವಿ ಕಡ್ಡಾಯ