Home Breaking Entertainment News Kannada Actress Samantha Salary: ನಟಿ ಸಮಂತಾ ಒಂದು ಚಿತ್ರಕ್ಕೆ ಪಡೆವ ಕೋಟಿಗಳ ಸಂಖ್ಯೆ ಎಷ್ಟು ಗೊತ್ತಾ...

Actress Samantha Salary: ನಟಿ ಸಮಂತಾ ಒಂದು ಚಿತ್ರಕ್ಕೆ ಪಡೆವ ಕೋಟಿಗಳ ಸಂಖ್ಯೆ ಎಷ್ಟು ಗೊತ್ತಾ ?

Actress Samantha Salary
Image source: Instagram

Hindu neighbor gifts plot of land

Hindu neighbour gifts land to Muslim journalist

Actress Samantha Salary : ತೆಲುಗಿನ ಸ್ಟಾರ್ ನಾಯಕಿಯರಲ್ಲಿ ಸಮಂತಾ (Actress Samantha) ಕೂಡ ಒಬ್ಬರು. ಹಲವು ವರ್ಷಗಳಿಂದ ಸಮಂತಾ ತನ್ನ ಸಿನಿಮಾಗಳಿಗೆ ಪ್ರತ್ಯೇಕ ಮಾರ್ಕೆಟ್ ಸೃಷ್ಟಿಸಿಕೊಂಡಿದ್ದು ಮಾತ್ರವಲ್ಲದೆ ತನಗಾಗಿಯೇ ಪ್ರತ್ಯೇಕ ಅಭಿಮಾನಿ ಬಳಗವನ್ನೂ ಸೃಷ್ಟಿಸಿಕೊಂಡಿದ್ದಾರೆ. ಸಮಂತಾ ವೃತ್ತಿ ಜೀವನ ಆರಂಭಿಸಿ 13 ವರ್ಷಗಳು ಕಳೆದಿವೆ. 2010 ರಲ್ಲಿ ಗೌತಮ್ ವಾಸುದೇವ್ ಮೆನನ್ ಅವರ ತೆಲುಗು ಚಿತ್ರ ‘ಏ ಮಾಯ ಚೇಸಾವೆ’ ಸಿನಿಮಾದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ಸಮಂತಾ ನಂತರದ ದಿನಗಳಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿ ಸ್ಟಾರ್ ನಾಯಕಿ ನಟಿ ಎನಿಸಿಕೊಂಡರು. ಮೊದಲ ಸಿನಿಮಾದಲ್ಲಿ ಸಮಂತಾಗೆ ನಾಯಕನಾಗಿ ನಾಗ ಚೈತನ್ಯ (Naga chaithanya) ಜೊತೆಯಾಗಿದ್ದು, ಇವರು ನೆಚ್ಚಿನ ಆನ್ಸ್ಕ್ರೀನ್ ಜೋಡಿಯಾದರು. ಅಷ್ಟೇ ಅಲ್ಲ ನಂತರದ ದಿನದಲ್ಲಿ ಇಬ್ಬರೂ ಮದುವೆಯಾಗಿದ್ದು, ಆನ್ಸ್ಕ್ರೀನ್ ಹಾಗೂ ಆಫ್ ಸ್ಕ್ರೀನ್ ಎರಡರಲ್ಲೂ ಜನಮೆಚ್ಚಿದ ಜೋಡಿಯಾದರು. ಆದರೆ ಇತ್ತೀಚೆಗೆ ಈ ಜೋಡಿ ದಾಂಪತ್ಯದಲ್ಲಿ ಬಿರುಕು ಮೂಡಿ ಬೇರ್ಪಟ್ಟಿದ್ದಾರೆ.

ಸದ್ಯ ಸಮಂತಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್ (Tollywood) ನಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ ನಟಿ ಸಮಂತಾ ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ (Actress Samantha Salary) ಎಷ್ಟು ಗೊತ್ತಾ? ಸಿನಿಮಾ ಮಾತ್ರವಲ್ಲದೆ ಎಲ್ಲಿಂದ ಹಣ ಗಳಿಸುತ್ತಾರೆ? ಅವರ ನಿವ್ವಳ ಮೌಲ್ಯ ಎಷ್ಟು ಗೊತ್ತಾ? ಈ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.

ನಯನತಾರಾ (Nayanathara) ನಂತರ ದಕ್ಷಿಣದಲ್ಲಿ 2 ನೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯೆಂದರೆ ಅದು ಸಮಂತಾ. ಸಮಂತಾ ಒಂದು ಚಿತ್ರಕ್ಕೆ 3 ರಿಂದ 5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಪುಷ್ಪಾ (pushpa) ಚಿತ್ರದ ಮೊದಲ ಐಟಂ ಸಾಂಗ್’ಗೆ ಬೋಲ್ಡ್ ಡ್ಯಾನ್ಸ್ ಮಾಡಿದ್ದ ಸಮಂತಾ ಅದಕ್ಕೆ 5 ಕೋಟಿ ರೂ. ಸಂಭಾವನೆ ಪಡೆದಿದ್ದರು ಎಂದು ಹೇಳಲಾಗಿದೆ.

ನಟಿ ಸಮಂತಾ ರುತ್ ಪ್ರಭು ಅವರ ನಿವ್ವಳ ಮೌಲ್ಯ ಸುಮಾರು 101 ಕೋಟಿಗೂ ಅಧಿಕವಿದೆ ಎಂದು ವರದಿ ತಿಳಿಸಿದೆ. ನಟಿ ಸಿನಿಮಾ ಮಾತ್ರವಲ್ಲದೆ, ಕೆಲವು ಬ್ರಾಂಡ್ ಅಂಬಾಸಿಡರ್‌ ಆಗಿದ್ದು ಆ ಮೂಲಕವೂ ಸಂಪಾದಿಸುತ್ತಾರೆ. ಅಲ್ಲದೆ, ಸಮಂತಾ ರುತ್‌ ಪ್ರಭು ಅವರು ‘ಸಾಕಿ’ ಎಂಬ ಹೆಸರಿನ ತಮ್ಮದೇ ಆದ ಫ್ಯಾಷನ್ ಲೇಬಲ್ ಅನ್ನು ಹೊಂದಿದ್ದಾರೆ.

ಸಮಂತಾ ಹೈದರಾಬಾದ್‌ನ (Hyderabad) ಜೂಬಿಲಿ ಹಿಲ್ಸ್‌ನಲ್ಲಿ ಸುಮಾರು 100 ಕೋಟಿ ರೂ. ಮೌಲ್ಯದ ಬೃಹತ್ ಬಂಗಲೆಯನ್ನು ಹೊಂದಿದ್ದಾರೆ. 2.26 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ರೇಂಜ್ ರೋವರ್ ಮತ್ತು 1.46 ಕೋಟಿ ಮೌಲ್ಯದ ಪೋರ್ಷೆ ಕೇಮನ್ ಜಿಟಿಎಸ್ ಹೊಂದಿದ್ದಾರೆ.

ಸದ್ಯ ರಾಜ್-ಡಿಕೆ ನಿರ್ದೇಶನದ ಸಿಡಾಟೆಲ್ (Citadel) ವೆಬ್ ಸರಣಿಯ ಶೂಟಿಂಗ್ ಸೆಟ್ಗಳಲ್ಲಿ ಸಮಂತಾ ಬ್ಯುಸಿ ಆಗಿದ್ದಾರೆ. ಹಾಗೇ ನಟ ವಿಜಯ್ ದೇವರಕೊಂಡ (Vijaya devarakonda) ಜೊತೆಗೆ ಖುಷಿ ಚಿತ್ರ (Kushi film) ಮಾಡುತ್ತಿದ್ದಾರೆ. ಶಿವ ನಿರ್ವಾಣ ನಿರ್ದೇಶನದ ಈ ಸಿನಿಮಾದ ಮೇಲೆ ಸಮಂತಾ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪನವರಿಗೆ ಶಾಕ್ ಕೊಟ್ಟ ಲಿಂಗಾಯತ ಮುಖಂಡರು! ಜಗದೀಶ್ ಶೆಟ್ಟರ್​ ಬೆಂಬಲಿಸಿ, ಗೆಲ್ಲಿಸೋದಾಗಿ ಸಭೆಯಲ್ಲಿ ನಾಯಕರ ಶಪಥ!