Home Breaking Entertainment News Kannada Actress Palak Tiwari: ಸೈಫ್ ಮಗ ಇಬ್ರಾಹಿಂ ಆಲಿ ಖಾನ್ ಜೊತೆ ಕಿಸ್ ಮಾಡುವಾಗ ಸಿಕ್ಕಿ...

Actress Palak Tiwari: ಸೈಫ್ ಮಗ ಇಬ್ರಾಹಿಂ ಆಲಿ ಖಾನ್ ಜೊತೆ ಕಿಸ್ ಮಾಡುವಾಗ ಸಿಕ್ಕಿ ಬಿದ್ದ ಶ್ವೇತಾ ತಿವಾರಿ ಮಗಳು!!!

Actress Palak Tiwari
Image source : news 18

Hindu neighbor gifts plot of land

Hindu neighbour gifts land to Muslim journalist

Actress Palak Tiwari- Ibrahim Ali Khan: ಈ ಹಿಂದೆ ಸೈಫ್ ಅಲಿ ಖಾನ್ (Saif Ali Khan) ಪುತ್ರ ಇಬ್ರಾಹಿಂ ಅಲಿ ಖಾನ್ ಹಾಗೂ ಪಾಲಕ್ ತಿವಾರಿ (Actress Palak Tiwari) ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವಿಚಾರ ಹರಿದಾಡುತ್ತಿತ್ತು. ಅಲ್ಲದೆ, ಸಾಕಷ್ಟು ಬಾರಿ ಪಾಲಕ್ ಇಬ್ರಾಹಿಂ ಅಲಿ ಖಾನ್ ಜೊತೆ ಪಾರ್ಟಿ ಮಾಡಿದ್ದರು. ಇಬ್ಬರೂ ಸಾಕಷ್ಟು ಬಾರಿ ಒಟ್ಟಿಗೆ ಕ್ಯಾಮರಾದಲ್ಲಿ ಸೆರೆಯಾಗಿದ್ದರು. ಆದರೆ, ಡೇಟಿಂಗ್ ಬಗ್ಗೆ ಇಬ್ಬರೂ ಯಾವುದೇ ವಿಚಾರ ಬಹಿರಂಗಪಡಿಸಿರಲಿಲ್ಲ. ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂಬ ಹೇಳಿಕೆ ನೀಡುತ್ತಿದ್ದರು. ಇದೀಗ ಪಾಲಕ್- ಇಬ್ರಾಹಿಂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಹೌದು, ಪಾಲಕ್‌ಗೆ ಸಿಕ್ರೆಟ್ ಆಗಿ ಕಿಸ್ ಮಾಡುವಾಗ ಇಬ್ರಾಹಿಂ ಅಲಿ ಖಾನ್ ಫ್ಯಾನ್ಸ್ ಕಣ್ಣಿಗೆ ಬಿದ್ದಿದ್ದಾರೆ. ಇತ್ತೀಚೆಗೆ ಪಾಲಕ್ ತಿವಾರಿ ವಿಮಾನ ನಿಲ್ದಾಣದಲ್ಲಿ ಏಕಾಂಗಿಯಾಗಿ ಕಾಣಿಸಿಕೊಂಡರು. ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ವಿಡಿಯೋಗೆ ಕಾಮೆಂಟ್ ಮಾಡಿದ ಫ್ಯಾನ್ಸ್ ದೊಡ್ಡ ಬಾಂಬ್ ಸಿಡಿಸಿದ್ದಾರೆ. ತಾವು ಜಸ್ಟ್ ಫ್ರೆಂಡ್ಸ್ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಇಬ್ಬರಿಗೂ ಶಾಕ್ ನೀಡಿದ್ದಾರೆ. ಕಾಮೆಂಟ್ ನಲ್ಲಿ, “ ಮುಂಬೈನ ‘ವರ್ಲಿ ಕ್ಲಬ್ ಸ್ಲಿಂಕ್ & ಬಾರ್’ ನಲ್ಲಿ ಪಾಲಕ್ ತಿವಾರಿ ಮತ್ತು ಇಬ್ರಾಹಿಂ ಅಲಿ ಖಾನ್ (Ibrahim Ali Khan) ತುಟಿಗಳಿಗೆ ಚುಂಬಿಸುವುದನ್ನು ನೋಡಿದ್ದೇವೆ” ಎಂದು ಹಲವರು ಬರೆದಿದ್ದಾರೆ.

ಸಲ್ಮಾನ್ ಖಾನ್ (Salman Khan) ನಟನೆಯ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಚಿತ್ರದ ಮೂಲಕ ಬಾಲಿವುಡ್‌ಗೆ ಶ್ವೇತಾ ತಿವಾರಿ (Shwetha Tiwari) ಪುತ್ರಿ ಪಾಲಕ್ ಎಂಟ್ರಿ ಕೊಟ್ಟರು. ಸಿನಿಮಾದಲ್ಲಿ ಪಾಲಕ್ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಸಿನಿಮಾದ ಸಂದರ್ಶನವೊಂದರಲ್ಲಿ ಇಬ್ರಾಹಿಂ ಜೊತೆಗಿನ ಡೇಟಿಂಗ್ ಸುದ್ದಿ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಆಕೆಯ ಉತ್ತರ ಏನಿತ್ತು ಗೊತ್ತಾ?

“ಎರಡು ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದೇನೆ. ಇದು ನನಗೆ ತುಂಬ ಮುಖ್ಯವಾದ ವರ್ಷ, ಈ ಕೆಲಸವೇ ಮುಖ್ಯ. ನಾನು ಭಾಗಿಯಾಗಿರುವ ಚಿತ್ರರಂಗದಲ್ಲಿ ಈ ರೀತಿ ಮಾತು ಕೇಳಿಬರೋದು ಸಾಮಾನ್ಯ, ನಾನು ಇದರ ಕಡೆ ಗಮನ ಕೊಡೋದಿಲ್ಲ. ನಾನು ಕೆಲಸದ ಕಡೆ ಗಮನ ಕೊಡ್ತೀನಿ. ಪ್ರೀತಿಯನ್ನು ಎಂದಿಗೂ ಲೆಕ್ಕಾಚಾರ ಮಾಡಲು ಅಥವಾ ಊಹಿಸಲು ಸಾಧ್ಯವಿಲ್ಲ. ಸದ್ಯ ನಾನು ಕೆಲಸದ ಕಡೆ ಮುಖ ಮಾಡಿದ್ದೇನೆ. ವೃತ್ತಿ ವಿಚಾರವಾಗಿ ಹೇಳುವುದಾದ್ರೆ ನಾನು ತುಂಬ ನಿರ್ಣಾಯಕ ಹಂತದಲ್ಲಿದ್ದೇನೆ, ನನ್ನ ಎಲ್ಲ ಶಕ್ತಿಯನ್ನು ಇಲ್ಲಿ ಹಾಕಬೇಕು” ಎಂದು ಹೇಳಿದ್ದರು. ಸದ್ಯ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದು ಪಾಲಕ್ ಹೇಳಿದ್ದ ಹೇಳಿಕೆಗೆ ಹಾಗೂ ಪಾಲಕ್-ಇಬ್ರಾಹಿಂ ಲಿಪ್‌ಲಾಕ್ ವಿಚಾರಕ್ಕೆ ಸೋಷಿಯಲ್ಸ್ ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ:D. K Suresh: ಡಿಕೆ ಶಿವಕುಮಾರ್ ನೆನೆದು ಕಣ್ಣೀರು ಹಾಕಿದ ಸಹೋದರ ಡಿಕೆ ಸುರೇಶ್ ; ಅಂತದ್ದೇನಾಯಿತು?!