Home Breaking Entertainment News Kannada Actress Niharika Konidela: ‘ರೋಷನ್ ಬೆಡ್ ಮೇಲೆ, ಭಾರ್ಗವ್ ಮನಸ್ಸಿನಲ್ಲಿ’ ; ನಿಹಾರಿಕಾ ಕೊನಿಡೆಲಾ ಮಾತಿಗೆ...

Actress Niharika Konidela: ‘ರೋಷನ್ ಬೆಡ್ ಮೇಲೆ, ಭಾರ್ಗವ್ ಮನಸ್ಸಿನಲ್ಲಿ’ ; ನಿಹಾರಿಕಾ ಕೊನಿಡೆಲಾ ಮಾತಿಗೆ ನೆಟ್ಟಿಗರು ಕಿಡಿ!!

Actress Niharika Konidela
Image source: Wikipedia

Hindu neighbor gifts plot of land

Hindu neighbour gifts land to Muslim journalist

Actress Niharika Konidela: ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರ ಅಣ್ಣನ ಮಗಳು ನಾಗಬಾಬು (Nagababu) ಪುತ್ರಿ ನಿಹಾರಿಕಾ ಕೊನಿಡೆಲಾ (Actress Niharika Konidela) ಚೈತನ್ಯ ಅವರನ್ನು ಪ್ರೀತಿಸಿ, 2020ರಲ್ಲಿ ಮದುವೆಯಾಗಿದ್ದರು. ಇತ್ತೀಚೆಗೆ ಈ ಜೋಡಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ನಿಹಾರಿಕಾ ಸಿನಿಮಾ, ವೆಬ್ ಸಿರೀಸ್’ಗಳಲ್ಲಿ (web series) ಬ್ಯುಸಿಯಾಗಿದ್ದಾರೆ.

ನಟಿ ನಿಹಾರಿಕಾ ನಟನೆಯ ‘ಡೆಡ್ ಫಿಕ್ಸೆಲ್’ (Dead Pixel) ಟ್ರೈಲರ್‌
ಬಿಡುಗಡೆಯಾಗಿದ್ದು, ಡಿವೋರ್ಸ್ ಸುದ್ದಿಯ ಜೊತೆಗೆ ಸಿನಿಮಾ ವಿಚಾರದಲ್ಲೂ ಸಖತ್ ಸುದ್ದಿಯಾಗಿದ್ದಾರೆ. ಹೌದು, ‘ಡೆಡ್ ಫಿಕ್ಸೆಲ್’ (Dead Pixel) ಟ್ರೈಲರ್‌’ನಲ್ಲಿ ನಟಿ ಹೇಳಿರುವ ಡೈಲಾಗ್ ಕೇಳಿ ನೆಟ್ಟಿಗರು ಕಿಡಿಕಾರಿದ್ದಾರೆ.

ಡೆಡ್ ಫಿಕ್ಸೆಲ್ ಸಿರೀಸ್‌ ಆನ್‌ಲೈನ್ ಗೇಮ್ ಆಧಾರಿತ ಕಥೆಯಾಗಿದೆ. ಆನ್‌ಲೈನ್ ಗೇಮ್ ಯಾವ ಹಂತಕ್ಕೆ ತಲುಪಿಸುತ್ತದೆ ಎಂದು ಟ್ರೈಲರ್‌ ಮೂಲಕ ಝಲಕ್ ತೋರಿಸಲಾಗಿದೆ. ಈ ಟ್ರೈಲರ್‌ನಲ್ಲಿ ನಿಹಾರಿಕಾ ಹೇಳಿದ ಡೈಲಾಗ್ ಸಖತ್ ಸದ್ದು ಮಾಡ್ತಿದೆ. ‘ರೋಷನ್ ಬೆಡ್ ಮೇಲೆ, ಭಾರ್ಗವ್ ಮನಸ್ಸಿನಲ್ಲಿ’ ಎಂಬರ್ಥದಲ್ಲಿ ನಿಹಾರಿಕಾ ಡೈಲಾಗ್ ಸಿಡಿಸಿದ್ದಾರೆ. ಈ ಟ್ರೈಲರ್‌ ಇದೀಗ ಕೆಲ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾದರೆ ಇನ್ನೂ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಟಾಲಿವುಡ್‌ನಲ್ಲಿ ನಟಿ, ನಿರ್ಮಾಪಕಿಯಾಗಿ ನಿಹಾರಿಕಾ ಕೊನಿಡೆಲಾ (Niharika Konidela) ಅವರು ತೊಡಗಿಕೊಂಡಿದ್ದಾರೆ. ನಿಹಾರಿಕ ʼಒಕ ಮನಸ್ಸುʼ ಹಾಗೂ ʼಹ್ಯಾಪಿ ವೆಡ್ಡಿಂಗ್‌ʼ ಸಿನಿಮಾದ ನಟನೆಯ ಮೂಲಕ ಖ್ಯಾತಿ ಪಡೆದಿದ್ದಾರೆ. ಚಿರಂಜೀವಿ ನಟನೆಯ ʼಸೈರಾ ನರಸಿಂಹ ರೆಡ್ಡಿʼ ಸಿನಿಮಾದಲ್ಲಿ ನಟಿಸಿದ್ದು, ‘ಸೂರ್ಯಕಾಂತಂ’, ಸೇರಿದಂತೆ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ.

ಇತ್ತೀಚೆಗೆ ನಿಹಾರಿಕಾ ‘ಪುಷ್ಪ 2’ (pushpa-2) ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ‘ಪುಷ್ಪ 2’ ಸಿನಿಮಾದಲ್ಲಿ ಫಹಾದ್ ಫಾಸಿಲ್ ಅವರ ಪತ್ನಿಯ ಪಾತ್ರವನ್ನು ನಿಹಾರಿಕಾ ಕೊನಿಡೆಲಾ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಈ ಪಾತ್ರಕ್ಕೆ ಸಾಯಿ ಪಲ್ಲವಿ (Sai pallavi) ಬಣ್ಣ ಹಚ್ಚುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಅವರು ಪಾತ್ರ ಮಾಡಲು ಒಪ್ಪಿಕೊಂಡಿಲ್ಲ ಎನ್ನಲಾಗಿದೆ.

 

ಇದನ್ನು ಓದಿ: The Kerala Story: ದಿ ಕೇರಳ ಸ್ಟೋರಿ ಚಿತ್ರದ ತೆರಿಗೆ ವಿನಾಯಿತಿ ಹಿಂಪಡೆದ ಬಿಜೆಪಿ ಸರ್ಕಾರ! ಕರ್ನಾಟಕ ಚುನಾವಣೆ ಎಫೆಕ್ಟ್